ಗಂಗೆ ಕಾವರಿ ನದಿಯನ್ನು ಅತ್ಯಂತ ಪೂಜನೀಯ ಭಾವದಿಂದ ನೋಡಲಾಗುತ್ತದೆ. ಆದರೆ ಅವುಗಳು ಶುದ್ಧವಾಗಿರುವ ನದಿಗಳಲ್ಲ. ಹಾಗಿದ್ರೆ ಭಾರತದಲ್ಲೇ ಅತ್ಯಂತ ಸುಂದರವಾಗಿರುವ ನದಿಗಳು ಯಾವುದು ಇಲ್ಲಿದೆ ಮಾಹಿತಿ
ಭಾರತದಲ್ಲಿ ನದಿಗಳ ಧಾರ್ಮಿಕ ಮಹತ್ವ
ಭಾರತದ ನದಿಗಳು ಕೇವಲ ಕೃಷಿ ಮತ್ತು ನೀರು ಸರಬರಾಜಿನ ಮೂಲಗಳಲ್ಲ, ಇಲ್ಲಿನ ನದಿಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ನೋಡಲಾಗುತ್ತದೆ.
ನದಿ ಮಾಲಿನ್ಯದ ಸಮಸ್ಯೆ
ಮಾಲಿನ್ಯದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, , ಇದು ನದಿ ನೀರನ್ನು ಕಲುಷಿತಗೊಳಿಸುತ್ತಿದೆ. ಇದು ಜಲಚರಗಳ ಮೇಲೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಗಂಗೆ ಮತ್ತು ಕಾವೇರಿಯ ಖ್ಯಾತಿ
ದೇಶದಲ್ಲಿರುವ ಗಂಗಾ ಹಾಗೂ ಕಾವೆರಿಯನ್ನು ಪವಿತ್ರ ನದಿಗಳೆಂದು ಕರೆಯಲಾಗುತ್ತಿದ್ದು, ಇವುಗಳ ನೀರನ್ನು ದೇಶಾದ್ಯಂತ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತದೆ.
ನದಿಯ ಮಾಲಿನ್ಯಕ್ಕೆ ಕಾರಣಗಳು
ಕೈಗಾರಿಕಾ ಘಟಕಗಳಿಂದ ಹೊರಬರುವ ಕೊಳಚೆ ನೀರು, ಧಾರ್ಮಿಕ ಕಾರಣಗಳಿಗಾಗಿ ನದಿಗೆ ಎಸೆಯುವ ಕಸ, ಪ್ಲಾಸ್ಟಿಕ್ನಂತಹ ವಸ್ತುಗಳು ನದಿ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ
ಭಾರತದ ಅತ್ಯಂತ ಸ್ವಚ್ಛ ನದಿ ಯಾವುದು
'ಉಮ್ಂಗೋಟ್ ನದಿ ದೇಶದಲ್ಲೇ ಅತ್ಯಂತ ಸ್ವಚ್ಛ ನದಿ ಎನಿಸಿದೆ. ಇದರ ನೀರು ಎಷ್ಟು ಸ್ವಚ್ಛವಾಗಿದೆ ಎಂದರೆ ಈ ನೀರಿನ ತಳವನ್ನು ನೀವು ಸುಲಭವಾಗಿ ನೋಡಬಹುದು.
ಉಮ್ಂಗೋಟ್ ನದಿ ಎಲ್ಲಿದೆ?
ಈ ನದಿ ಈಶಾನ್ಯ ರಾಜ್ಯ ಮೇಘಾಲಯದ ದಾವ್ಕಿಯಲ್ಲಿದೆ, ಇದು ತನ್ನ ಸ್ವಚ್ಛ ನೀರಿಗೆ ಪ್ರಸಿದ್ಧವಾಗಿದೆ. ಈ ನದಿಗೆ ಸುತ್ತಮುತ್ತಲಿನ ಬೆಟ್ಟಗಳಿಂದ ನೀರು ಬರುತ್ತದೆ
ಉಮ್ಂಗೋಟ್ ನದಿಯ ಬಗ್ಗೆ ಸ್ಥಳೀಯ ನಂಬಿಕೆಗಳು
ಸ್ಥಳೀಯ ಜನರು ಉಮ್ಂಗೋಟ್ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಹೀಗಾಗಿ ಜನ ಈ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಬದ್ಧರಾಗಿದ್ದಾರೆ ಮತ್ತು ಮಲೀನವಾಗದಂತೆ ಎಚ್ಚರಿಕೆ ವಹಿಸುತ್ತಾರೆ
ನದಿಯ ಬಗ್ಗೆ ವಿಶಿಷ್ಟ ಮಾಹಿತಿ
ಸ್ಥಳೀಯರು ಇದನ್ನು 'ಅಮನ್ಗೋಟ್' ಅಥವಾ 'ದಾವ್ಕಿ ನದಿ' ಎಂದೂ ಕರೆಯುತ್ತಾರೆ. ಈ ನದಿ ತನ್ನ ಸ್ವಚ್ಛತೆ ಮತ್ತು ಸೌಂದರ್ಯಕ್ಕಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ