India
ನಾಸಾ ಗಗನಯಾತ್ರಿಸುನೀತಾ ವಿಲಿಯಮ್ಸ್ ಇತ್ತೀಚಿನವರೆಗೆ ಆರೋಗ್ಯವಾಗಿದ್ದರು. ಆದರೆ ಇದೀಗ ಏಕಾಏಕಿ ಗುಳಿಬಿದ್ದ ಕೆನ್ನೆ ಸಣಕಲು ಕಡ್ಡಿಯಂತಾಗಿದ್ದಾರೆ.
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಕಳೆದ 5 ತಿಂಗಳಿನಿಂದ ಭೂಮಿಯಿಂದ 400 ಕಿ.ಮೀ. ಮೇಲೆ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ಈ ಅವಧಿಯಲ್ಲಿ ಅವರ ತೂಕ ಗಣನೀಯವಾಗಿ ಕಡಿಮೆಯಾಗಿದೆ.
ಇತ್ತೀಚಿನ ಚಿತ್ರಗಳಲ್ಲಿ ಅವರು ಹಿಂದಿನದಕ್ಕಿಂತ ತೆಳ್ಳಗಾಗಿದ್ದಾರೆ ಎಂದು ಕಾಣಬಹುದು. ನಾಸಾದ ವೈದ್ಯರು ಅವರ ತೂಕವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಬಾಹ್ಯಾಕಾಶದಲ್ಲಿ ಹಲವು ದಿನಗಳಿಂದ ಸಿಲುಕಿರುವ ಸುನೀತಾ ವಿಲಿಯಮ್ಸ್ ಕೇವಲ ಚರ್ಮ ಮತ್ತು ಮೂಳೆಗಳ ಅಸ್ಥಿಪಂಜರವಾಗಿದ್ದಾರೆ ಎಂದು ನಾಸಾ ಸಿಬ್ಬಂದಿ ಹೇಳುತ್ತಾರೆ.
ದೀರ್ಘಕಾಲದವರೆಗೆ ಹೆಚ್ಚಿನ ಒತ್ತಡದ ಕ್ಯಾಬಿನ್ನಲ್ಲಿ ಇರುವುದರಿಂದ ಅವರ ತೂಕ ಕಡಿಮೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಕೆನ್ನೆಗಳು ಕೂಡ ಕುಳಿಬಿದ್ದಂತಾಗಿವೆ.
ಮಿಷನ್ ಆರಂಭದಲ್ಲಿ 5 ಅಡಿ 8 ಇಂಚು ಎತ್ತರದ ಸುನೀತಾ ವಿಲಿಯಮ್ಸ್ 63.5 ಕೆ.ಜಿ. ತೂಕ ಹೊಂದಿದ್ದರು. ಆದರೆ ಮಿಷನ್ ಮುಂದುವರೆದಂತೆ, ಅವರಿಗೆ ಸಿಗುತ್ತಿದ್ದ ಹೆಚ್ಚಿನ ಕ್ಯಾಲೋರಿ ಆಹಾರ ಕಡಿಮೆಯಾಗತೊಡಗಿತು.
ಬಾಹ್ಯಾಕಾಶದಲ್ಲಿ ದೀರ್ಘಕಾಲ ಇರುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಹೀಗಾಗಿ ಗಗನಯಾತ್ರಿಗಳಿಗೆ ಭೂಮಿಗಿಂತ ಹೆಚ್ಚು ಕ್ಯಾಲೋರಿಗಳು ಬೇಕಾಗುತ್ತವೆ.
ವರದಿಗಳ ಪ್ರಕಾರ, ಗಗನಯಾತ್ರಿಗಳು ತಮ್ಮ ತೂಕವನ್ನು ಸಮತೋಲನದಲ್ಲಿಡಲು ದಿನಕ್ಕೆ 3500 ರಿಂದ 4000 ಕ್ಯಾಲೋರಿಗಳು ಬೇಕಾಗುತ್ತವೆ. ಇಲ್ಲದಿದ್ದರೆ, ತೂಕ ವೇಗವಾಗಿ ಕಡಿಮೆಯಾಗುತ್ತದೆ.
ಇದಲ್ಲದೆ, ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೇಹವನ್ನು ಸದೃಢವಾಗಿಡಲು ಪ್ರತಿದಿನ ಕನಿಷ್ಠ 2 ಗಂಟೆಗಳ ಕಾಲ ವ್ಯಾಯಾಮ ಮಾಡಬೇಕು, ಇದರಿಂದಲೂ ಕ್ಯಾಲೋರಿಗಳು ಉರಿಯುತ್ತವೆ.
ಸುನೀತಾ ತೂಕ ಹೆಚ್ಚಿಸಲು ಈಗ ದಿನಕ್ಕೆ 5000 ಕ್ಯಾಲೋರಿ ತೆಗೆದುಕೊಳ್ಳಬೇಕಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಬಾಹ್ಯಾಕಾಶದಲ್ಲಿ ಪುರುಷರಿಗಿಂತ ಮಹಿಳೆಯರ ಸ್ನಾಯುಗಳು ವೇಗವಾಗಿ ನಾಶವಾಗುತ್ತವೆ.
ಸುನೀತಾ ವಿಲಿಯಮ್ಸ್ ಜೂನ್ 5,2024 ರಂದು ಬೋಯಿಂಗ್ ಸ್ಟಾರ್ಲೈನರ್ ಮೂಲಕ ಬಾಹ್ಯಾಕಾಶಕ್ಕೆ ಹೋದರು. ಅವರು ಕೇವಲ 8 ದಿನಗಳ ಕಾಲ ಐಎಸ್ಎಸ್ನಲ್ಲಿ ಇರಬೇಕಿತ್ತು. ಆದರೆ ವಾಹನದಲ್ಲಿ ತಾಂತ್ರಿಕ ದೋಷದಿಂದಾಗಿ ಅಲ್ಲಿ ಸಿಲುಕಿದರು