India
ಜಸ್ಟಿನ್ ಟ್ರುಡೊ ಅವರು ಕೆನಡಾದ ಪ್ರಧಾನ ಮಂತ್ರಿ ಮತ್ತು ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಪ್ರಮುಖ ಕಾರಣಗಳೇನು ಅನ್ನೋದನ್ನು ಇಲ್ಲಿ ತಿಳಿಯೋಣ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಜನವರಿ 7 ರಂದು ಪ್ರಧಾನಿ ಹುದ್ದೆಯ ಜೊತೆಗೆ ಲಿಬರಲ್ ಪಕ್ಷದ ನಾಯಕತ್ವವನ್ನೂ ತ್ಯಜಿಸಿದ್ದಾರೆ.
ಜಸ್ಟಿನ್ ಟ್ರುಡೊ ಅವರ ರಾಜೀನಾಮೆಯ ನಂತರ, ಕೆನಡಾದ ಮಾಧ್ಯಮಗಳಲ್ಲಿ ಊಹಾಪೋಹಗಳು ಮತ್ತು ಪ್ರತಿಕ್ರಿಯೆಗಳು ಪ್ರಾರಂಭವಾಗಿವೆ. ಅವರ ರಾಜೀನಾಮೆಗೆ ಐದು ಪ್ರಮುಖ ಕಾರಣಗಳೇನೆಂದರೆ,
ಭಾರತದೊಂದಿಗೆ ಜಗಳವಾಡಿದ ನಂತರ ಕೆನಡಾದ ಆರ್ಥಿಕತೆ ಹದಗೆಡಲು ಪ್ರಾರಂಭಿಸಿದ್ದು..ಅಲ್ಲಿ ಅಧ್ಯಯನ ಮಾಡುತ್ತಿದ್ದ ಹಲವಾರು ವಿದ್ಯಾರ್ಥಿಗಳು ತಮ್ಮ ವೀಸಾ ರದ್ದುಗೊಳಿಸಿದರು, ಇದು ಅಲ್ಲಿನ ಆರ್ಥಿಕತೆ ಮೇಲೆ ನೇರ ಪರಿಣಾಮ
ಟ್ರುಡೊ ಭಾರತ ವಿರೋಧಿ ನಿಲುವನ್ನು ಹೊಂದಿದ್ದರು, ಇದರಿಂದಾಗಿ ತಮ್ಮದೇ ಪಕ್ಷದಲ್ಲಿ ದೀರ್ಘಕಾಲದಿಂದ ವಿರೋಧವನ್ನು ಎದುರಿಸುತ್ತಿದ್ದರು. ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷವು ಅವರ ಲೋಪದೋಷಗಳನ್ನು ಜನರ ಮುಂದೆ ಇಟ್ಟಿತು.
ಜಸ್ಟಿನ್ ಟ್ರುಡೊ ಅಧಿಕಾರಕ್ಕೆ ಬಂದಾಗ, ಅವರು ಯುಎನ್ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯದಿದ್ದಕ್ಕಾಗಿ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರನ್ನು ಟೀಕಿಸಿದರುಆದಾಗ್ಯೂ, ಅವರು ಸ್ವತಃ ಈ ವಿಷಯದಲ್ಲಿ ಏನನ್ನೂ ಮಾಡಲಾಗಲಿಲ್ಲ
ಜಸ್ಟಿನ್ ಟ್ರುಡೊ ಕೆನಡಾದಲ್ಲಿ ಬಹಿರಂಗವಾಗಿ ಖಲಿಸ್ತಾನಿಗಳನ್ನು ಬೆಂಬಲಿಸುತ್ತಿದ್ದರು, ಇದಕ್ಕೆ ಭಾರತ ಸರ್ಕಾರ ಹಲವಾರು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಟ್ರುಡೊ ಅವರ ಭಾರತ ವಿರೋಧಿ ನಿಲುವು ದುಬಾರಿಯಾಯಿತು.
ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ನೀಡಿದ ನಂತರ, ಟ್ರುಡೊ ತಮ್ಮ ತಪ್ಪುಗಳಿಗೆ ಅವರನ್ನೇ ದೂಷಿಸಿದರು. ಪಕ್ಷದ ಕೆಲವು ನಾಯಕರ ತಪ್ಪಿನಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ವಿದೇಶಾಂಗ ನೀತಿಯಲ್ಲೂ ಟ್ರುಡೊ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ವಿಶೇಷವಾಗಿ ಭಾರತ ಮತ್ತು ಚೀನಾದೊಂದಿಗಿನ ಸಂಬಂಧ ಹಾಳು ಮಾಡಿದರು. ಭಾರತ-ಚೀನಾ ವಿಷಯದಲ್ಲಿ ಅವರ ಕಳಪೆ ನೀತಿ ವಿರೋಧಿಗಳು ಅನನುಭವಿ ಎಂದು ಕರೆದರು.