Health
ಕೋವಿಡ್ ನಂತರ ಈಗ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದ್ದು, ಇಡೀ ಪ್ರಪಂಚಕ್ಕೆ ಹರಡುವ ಭೀತಿ ಶುರುವಾಗಿದೆ.
ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್ಎಂಪಿವಿ) ಎಂಬ ಸೋಂಕೊಂದು ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಹಲವು ಸಾವುಗಳು ಸಂಭವಿಸಿದ್ದು, ಶವಾಗಾರಗಳು ಭರ್ತಿಯಾಗಿವೆ ಎಂದು ವರದಿಯಾಗಿವೆ.
ಈ ಹೊಸ ಕಾಯಿಲೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದ್ದು, ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಹೆಚ್ಚಾಗಿ ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
2001 ರಲ್ಲಿ ಎಚ್ಎಂಪಿವಿ ವೈರಸ್ ಅನ್ನು ಮೊದಲು ಪತ್ತೆ ಹಚ್ಚಲಾಯಿತು. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇವುಗಳು ಇದರ ಪ್ರಮುಖ ಲಕ್ಷಣಗಳು.
ಚ್ಎಂಪಿವಿ ತಡೆಗಟ್ಟಲು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ. ಸೋಪ್ ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆಯಿರಿ. ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
ಸೀನುವಾಗ ಮತ್ತು ಕೆಮ್ಮುವಾಗ ಟವಲ್ ಬಳಸಿ.
ಜ್ವರ, ಶೀತ, ಸೀನುವುದು ಇತ್ಯಾದಿ ಇರುವವರಿಂದ ದೂರವಿರಿ.
ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸಿದ ನಂತರ ಮಾತ್ರ ಮಾತನಾಡಿ.
ಕಣ್ಣು, ಮೂಗು ಅಥವಾ ಬಾಯಿಗೆ ಕೈ ಹಾಕುವುದನ್ನು ತಪ್ಪಿಸಿ.
ಜ್ವರ, ನಿರಂತರ ಕೆಮ್ಮು, ಸೀನುವುದು, ಶೀತ ಇತ್ಯಾದಿ ಇರುವವರು ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.