Health
ದಣಿದ ದೇಹ ವಿಶ್ರಾಂತಿ ಪಡೆಯಲಿ ನಿದ್ದೆಯೂ ಬಹಳ ಮುಖ್ಯ. ನಿದ್ದೆಯ ಕೊರತೆ ಹಲವು ಕಾಯಿಲೆಗಳಿಗೆ ಮೂಲ ಎಂಬುದು ಗೊತ್ತೇ ಇದೆ. ಉತ್ತಮವಾಗಿ ಹೇಗೆ ನಿದ್ರಿಸಬಹುದು ಎಂಬುದು ಇಲ್ಲಿ ತಿಳಿಯೋಣ.
ನೀವು ಮಲಗುವ ಸಮಯ ಮತ್ತು ಎಚ್ಚರಗೊಳ್ಳುವ ಸಮಯವನ್ನು ಒಂದೇ ರೀತಿಯಾಗಿ ಪಾಲಿಸಿ. ಇದರಿಂದ ಸರಿಯಾದ ನಿದ್ರೆಯ ಚಕ್ರ ನಿರ್ವಹಿಸಲ್ಪಡುತ್ತದೆ, ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ.
ಒಳ್ಳೆಯ ನಿದ್ರೆಗಾಗಿ ಪ್ರತಿದಿನ ವ್ಯಾಯಾಮ ಮಾಡಿ. ನಿದ್ರಾಹೀನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ನಿದ್ರೆಯ ಗುಣಮಟ್ಟ ಸುಧಾರಿಸಲು ನಿಮ್ಮ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾದ ವಾತಾವರಣವನ್ನು ಸಿದ್ಧಪಡಿಸಿಕೊಳ್ಳಿ. ಅಂದರೆ ಸರಿಯಾದ ಹಾಸಿಗೆ, ದಿಂಬು ಇತ್ಯಾದಿ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ನೀವು ರಾತ್ರಿ ಮಲಗಲು ಹೋಗುವ ಮೊದಲು ನಿಮ್ಮ ಮನಸ್ಸು ಶಾಂತವಾಗಿದ್ದರೆ ಉತ್ತಮ ನಿದ್ರೆ ಬರುತ್ತದೆ. ಇದಕ್ಕಾಗಿ ಉಸಿರಾಟದ ವ್ಯಾಯಾಮ, ಪುಸ್ತಕಗಳನ್ನು ಓದುವುದು ಮುಂತಾದವುಗಳನ್ನು ಮಾಡಬಹುದು.
ರಾತ್ರಿ ಮಲಗಲು ಹೋಗುವ ಮೊದಲು ಟಿವಿ, ಮೊಬೈಲ್ ಫೋನ್ ನೋಡುವುದನ್ನು ತಪ್ಪಿಸಿ. ಏಕೆಂದರೆ ಅದರಿಂದ ಬರುವ ಬೆಳಕಿನ ಕಿರಣಗಳು ನಿದ್ರೆಯನ್ನು ಅಡ್ಡಿಪಡಿಸುತ್ತವೆ.
ಮಲಗುವ ಮುನ್ನ ಕೆಫೀನ್ ಕುಡಿದರೆ ನಿದ್ರೆಯ ಗುಣಮಟ್ಟ ಹಾಳಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕೆಫೀನ್ ಕುಡಿಯುವುದನ್ನು ತಪ್ಪಿಸಿ.
ರಾತ್ರಿ ಹೆಚ್ಚು ತಿಂದರೆ ನಿಮ್ಮ ನಿದ್ರೆ ಹಾಳಾಗಬಹುದು. ಇದೇ ರೀತಿ ಧೂಮಪಾನ, ಮದ್ಯಪಾನ ಮುಂತಾದವುಗಳು ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತವೆ. ಆದ್ದರಿಂದ ಇವುಗಳನ್ನು ತಪ್ಪಿಸುವುದು ಒಳ್ಳೆಯದು.