Health
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಊಟದ ನಂತರದ ಮಾಡಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳು ಇಲ್ಲಿವೆ
ರಾತ್ರಿ ಊಟದಲ್ಲಿ ಸ್ವಲ್ಪ ಮೊಸರು ಸೇರಿಸಿಕೊಂಡರೆ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಬಿಸಿ ನೀರು ಅಥವಾ ಬೇರೆ ಯಾವುದೇ ಗಿಡಮೂಲಿಕೆ ಪಾನೀಯವನ್ನು ಕುಡಿಯಬಹುದು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ.
ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ ಜೀರ್ಣಕ್ರಿಯೆ ಹದಗೆಡುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ರಾತ್ರಿ ಊಟದ ನಂತರ ಕೆಲವು ಸರಳ ವ್ಯಾಯಾಮಗಳನ್ನು ಮಾಡಿದರೆ ಬೇಗ ಜೀರ್ಣವಾಗುತ್ತದೆ. ಮಲಗುವಾಗ ಕಿರಿಕಿರಿ ಉಂಟು ಮಾಡುವುದಿಲ್ಲ. ಕೆಲವರು ಊಟವಾದ ತಕ್ಷಣ ಮಲಗುತ್ತಾರೆ ಇದು ಒಳ್ಳೆಯ ಅಭ್ಯಾಸವಲ್ಲ.
ರಾತ್ರಿ ಊಟದ ನಂತರ ಹೊಟ್ಟೆ ಮಸಾಜ್ ಮಾಡಿದರೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೊಟ್ಟೆಯಲ್ಲಿನ ಕಿರಿಕಿರಿ, ಉಬ್ಬರ ಕಡಿಮೆಯಾಗುತ್ತದೆ.
ಇದು ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಉಬ್ಬರ, ಗ್ಯಾಸ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ರಾತ್ರಿ ಊಟದ ನಂತರ ಸ್ವಲ್ಪ ಜೀರಿಗೆ ತಿಂದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ.
ರಾತ್ರಿ ಊಟದ ನಂತರ ಸುಮಾರು 10-15 ನಿಮಿಷಗಳು ವಾಕಿಂಗ್ ಮಾಡಿ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಿಂದ ಗ್ಯಾಸ್ ನಂತಹ ಸಮಸ್ಯೆಗಳು ಬರುವುದಿಲ್ಲ.
ರಾತ್ರಿ ಊಟ ಮಾಡಿದ ನಂತರ ತಕ್ಷಣ ಮಲಗಬಾರದು. ಸುಮಾರು 1-2 ಗಂಟೆಗಳ ನಂತರ ಮಲಗಬೇಕು.
ಗಮನಿಸಿ: ಇದು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ವೈದ್ಯಕೀಯ ಸಲಹೆ ಅಥವಾ ರೋಗನಿರ್ಣಯಕ್ಕಾಗಿ, ವೃತ್ತಿಪರರನ್ನು ಸಂಪರ್ಕಿಸಿ.