Food

ಮೊಟ್ಟೆಯ ಸಿಪ್ಪೆಯ 5 ಅನನ್ಯ ಉಪಯೋಗಗಳು

ಸಾವಯವ ಗೊಬ್ಬರ ತಯಾರಿಸಿ

ಮೊಟ್ಟೆಯ ಸಿಪ್ಪೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಒಣಗಿಸಿ ಪುಡಿ ಮಾಡಿ. ನಂತರ ಸಸ್ಯಗಳ ಮಣ್ಣಿನಲ್ಲಿ ಪುಡಿ ಮಿಶ್ರಣ ಮಾಡಿ. ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿದ್ದು, ಸಸ್ಯಗಳ ಬೆಳವಣಿಗೆಗೆ ಸಹಾಯ ಮಾಡಲಿದೆ.

ಹಲ್ಲುಗಳನ್ನು ಹೊಳಪು ಮಾಡಲು

ಮೊಟ್ಟೆ ಸಿಪ್ಪೆಯ ಪುಡಿಯನ್ನು ತಯಾರಿಸಿ ಟೂತ್‌ಪೇಸ್ಟ್‌ನಲ್ಲಿ ಬೆರೆಸಿ ಹಲ್ಲುಜ್ಜಿ. ಇದು ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳುಪುಗೊಳಿಸಲು ಸಹಾಯ ಮಾಡುತ್ತದೆ.

ಗಾಯ ಗುಣಮಾಡಲು ಸಹಾಯ

ಮೊಟ್ಟೆ ಸಿಪ್ಪೆಯ ಒಳಗಿನ ಪೊರೆಯನ್ನು ಸಣ್ಣ ಕಟ್ ಅಥವಾ ಗಾಯದ ಮೇಲೆ ಇರಿಸಿ. ಇದರಲ್ಲಿರುವ ಪೋಷಕಾಂಶಗಳು ಗಾಯವನ್ನು ವೇಗವಾಗಿ ಗುಣಪಡಿಸಲು ಸಹಾಯಕವಾಗಿವೆ.

ಸಿಂಕ್ ಅಥವಾ ಪಾತ್ರೆಗಳನ್ನು ಸ್ವಚ್ಛಗೊಳಿಸಿ

ಮೊಟ್ಟೆ ಸಿಪ್ಪೆಯನ್ನು ಪುಡಿ ಮಾಡಿ ಪಾತ್ರೆ ಅಥವಾ ಸಿಂಕ್ ಸ್ವಚ್ಛಗೊಳಿಸಲು ಬಳಸಿ. ಇದು ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಶುಚಿಗೊಳಿಸುವ ಏಜೆಂಟ್ ಆಗಿದೆ.

ನೈಸರ್ಗಿಕ ಸ್ಕ್ರಬ್

ಮೊಟ್ಟೆಯ ಸಿಪ್ಪೆ ಸ್ವಚ್ಛಗೊಳಿಸಿ ಪುಡಿ ಮಾಡಿ ಜೇನುತುಪ್ಪ ಅಥವಾ ಅಲೋವೆರಾ ಜೊತೆ ಬೆರೆಸಿ ಚರ್ಮದ ಮೇಲೆ ಹಚ್ಚಿ ಸ್ಕ್ರಬ್ ಮಾಡಿ. ಇದು ಮೃತ ಚರ್ಮ (Dead Skin) ತೆಗೆದುಹಾಕುತ್ತದೆ. ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.

ಕಿಡ್ನಿ ಸ್ಟೋನ್ ತಡೆಯಲು ಬಿಡಬೇಕಾದ ಆಹಾರಗಳು

ಆರ್ ಮಾಧವನ್ ಇಷ್ಟದ ಆಹಾರ ಅನ್ನದ ಗಂಜಿಯ ರೆಸಿಪಿ

ರಾಗಿ ಅಂಬಲಿಯ ಆರೋಗ್ಯ ಪ್ರಯೋಜನಗಳು

ಹಸಿರು ಕಾಫಿ ಆರೋಗ್ಯ ಪ್ರಯೋಜನಗಳು