Food

ಆರ್. ಮಾಧವನ್ ಅವರ ಅಚ್ಚುಮೆಚ್ಚಿನ ಅಕ್ಕಿ ಗಂಜಿ

ಸಾಮಗ್ರಿಗಳು

  • ಅಕ್ಕಿ: 1/4 ಕಪ್
  • ನೀರು: 4 ಕಪ್
  • ಉಪ್ಪು: ರುಚಿಗೆ ತಕ್ಕಷ್ಟು
  • ತುಪ್ಪ: 1 ಚಮಚ
  • ಕರಿಬೇವಿನ ಎಲೆ
  • ಹಸಿಮೆಣಸಿನಕಾಯಿ
  • ಈರುಳ್ಳಿ
  • ಬೆಳ್ಳುಳ್ಳಿ
  • ಜೀರಿಗೆ ಮತ್ತು ಸಾಸಿವೆ
  • ಒಗ್ಗರಣೆಗೆ ಇಂಗು

ಅಕ್ಕಿಯನ್ನು ತೊಳೆಯಿರಿ:

1/4 ಕಪ್ ಅಕ್ಕಿಯನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಇದರಿಂದ ಅಕ್ಕಿಯ ಕೊಳೆ ಚೆನ್ನಾಗಿ ಸ್ವಚ್ಛಗೊಳ್ಳುತ್ತದೆ ಮತ್ತು ಪಿಷ್ಟ ಕಡಿಮೆಯಾಗುತ್ತದೆ.

ಅಕ್ಕಿ ಬೇಯಿಸಿ:

ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ ಅದಕ್ಕೆ ತೊಳೆದ ಅಕ್ಕಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ನಿಮ್ಮಲ್ಲಿ ಬೆಳಗಿನ ಅನ್ನ ಉಳಿದಿದ್ದರೆ ಅದರಿಂದಲೂ ಗಂಜಿ ಮಾಡಬಹುದು.

ಅಕ್ಕಿ ನೀರನ್ನು ಬೇರ್ಪಡಿಸಿ

ಅಕ್ಕಿ ಸಂಪೂರ್ಣವಾಗಿ ಬೆಂದಾಗ ಅದರ ನೀರನ್ನು ಅಥವಾ ಗಂಜಿಯನ್ನು ಬೇರ್ಪಡಿಸಿ. ರಾತ್ರಿಯಲ್ಲಿ ಅಕ್ಕಿಗೆ ನೀರು ಹಾಕಿ ಮಣ್ಣಿನ ಪಾತ್ರೆಯಲ್ಲಿ ಇಟ್ಟು ಮುಚ್ಚಿ ರಾತ್ರಿಯಿಡೀ ಬಿಡಿ.

ಗಂಜಿ ತಯಾರಿಸಿ

ಮರುದಿನ ಬೆಳಗ್ಗೆ ನೆನೆಸಿದ ಅಕ್ಕಿ ಮತ್ತು ನೀರನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ನಂತರ ಗಂಜಿಯನ್ನು ಒಂದು ಪಾತ್ರೆಯಲ್ಲಿ ಇಡಿ.

ಗಂಜಿಗೆ ಒಗ್ಗರಣೆ ಹಾಕಿ

1 ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಬೆಳ್ಳುಳ್ಳಿ ಜೀರಿಗೆ ಸಾಸಿವೆ ಕರಿಬೇವಿನ ಎಲೆ ಹಸಿಮೆಣಸಿನಕಾಯಿ ಇಂಗು ಹಾಕಿ ಒಗ್ಗರಣೆ ಮಾಡಿ.  ರುಬ್ಬಿದ ಅಕ್ಕಿಗೆ ಹಾಕಿ ಸ್ವಲ್ಪ ಹೊತ್ತು ಮುಚ್ಚಿ ಕುಡಿಯಲು ಬಡಿಸಿ.

ರಾಗಿ ಅಂಬಲಿಯ ಆರೋಗ್ಯ ಪ್ರಯೋಜನಗಳು

ಹಸಿರು ಕಾಫಿ ಆರೋಗ್ಯ ಪ್ರಯೋಜನಗಳು

ಬಾಲಿವುಡ್‌ ಸ್ಟಾರ್‌ ಕಿಡ್‌ಗಳು ಓದುವ ಅಂಬಾನಿ ಶಾಲೆಯ ಊಟದ ಮೆನು ಹೇಗಿದೆ?

ಬೆಳಗಿನ ಜಾವ ಕಾಫಿ ಕುಡಿದರೆ ಹೃದ್ರೋಗ ಇರಲ್ಲ, ಆಯುಷ್ಯ ಜಾಸ್ತಿ