ಮೂರು ಕಪ್ ಅಕ್ಕಿ, ಒಂದು ಕಪ್ ಉದ್ದಿನ ಬೇಳೆ, ಜೀರಿಗೆ ಅರ್ಧ ಟೀಚಮಚ, ಮೆಣಸು ಕಾಲು ಟೀಚಮಚ, ಸೋಂಪು ಅರ್ಧ ಟೀಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಬೇಳೆ, ಅಕ್ಕಿ ತೊಳೆಯಿರಿ
ಮೂರು ಕಪ್ ಅಕ್ಕಿ, ಒಂದು ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 4-6 ಗಂಟೆಗಳ ಕಾಲ ನೆನೆಸಿಡಬೇಕು.
ಬಿಸಿಲಿನಲ್ಲಿ ಒಣಗಿಸಿ
ತೊಳೆದ ಬೇಳೆ, ಅಕ್ಕಿಯನ್ನು ಚಾಪೆಯ ಮೇಲೆ ಹರಡಿ ಬಿಸಿಲಿನಲ್ಲಿ ಅಥವಾ ಗಾಳಿಯಲ್ಲಿ ಚೆನ್ನಾಗಿ ಒಣಗಿಸಬೇಕು.
ಹಿಟ್ಟಾಗಿ ರುಬ್ಬಬೇಕು
ಒಣಗಿದ ಬೇಳೆ, ಅಕ್ಕಿಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಹಿಟ್ಟಿನಂತೆ ರುಬ್ಬಬೇಕು. ಹಿಟ್ಟು ತುಂಬಾ ನುಣ್ಣಗೆ ಅಥವಾ ತುಂಬಾ ಒರಟಾಗಿರಬಾರದು.
ಮಸಾಲೆಗಳನ್ನು ಸೇರಿಸಿ
ದೋಸೆ ಹಿಟ್ಟಿನ ರುಚಿಯನ್ನು ಹೆಚ್ಚಿಸಲು, ಜೀರಿಗೆ, ಮೆಣಸು, ಸೋಂಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಮ್ಮೆ ಮಿಕ್ಸಿಯಲ್ಲಿ ರುಬ್ಬಬೇಕು.
ಶೇಖರಿಸಿಡಿ
ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ತಂಪಾದ, ಒಣಗಿದ ಸ್ಥಳದಲ್ಲಿ ಇಡಬೇಕು. ಸರಿಯಾಗಿ ಶೇಖರಿಸಿದರೆ 6 ತಿಂಗಳವರೆಗೆ ಬಳಸಬಹುದು.
ದೋಸೆ ಮಾಡುವ ವಿಧಾನ
ಒಂದು ಕಪ್ ದೋಸೆ ಹಿಟ್ಟು ತೆಗೆದುಕೊಂಡು, ಸ್ವಲ್ಪ ಉಪ್ಪು, ನೀರು ಸೇರಿಸಿ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಹಿಟ್ಟು ತುಂಬಾ ಗಟ್ಟಿಯಾಗಿರದೆ ಸ್ವಲ್ಪ ತೆಳುವಾಗಿರಬೇಕು. ರುಚಿಗಾಗಿ ಸ್ವಲ್ಪ ಮೊಸರು ಕೂಡ ಸೇರಿಸಬಹುದು.
ದೋಸೆ ಹಾಕಿ
ನಾನ್ಸ್ಟಿಕ್ ತವಾ ಬಿಸಿ ಮಾಡಿ, ಎಣ್ಣೆ ಹಚ್ಚಿ, ಹಿಟ್ಟನ್ನು ತವಾ ಮೇಲೆ ಹರಡಬೇಕು. ದೋಸೆ ಎರಡೂ ಬದಿಗಳಲ್ಲಿ ಬೇಯಿಸಬೇಕು. ದೋಸೆಯೊಳಗೆ ಆಲೂಗಡ್ಡೆ ಅಥವಾ ಪನೀರ್ ಸ್ಟಫಿಂಗ್ ಕೂಡ ಹಾಕಬಹುದು.