Food

ಆರೋಗ್ಯವಾಗಿರಬೇಕೆ? ಇದನ್ನು ಪ್ರತಿದಿನ ಕುಡಿಯಿರಿ

Image credits: Freepik

ಸುಂದರ ಕೂದಲಿಗೆ

ರಾಗಿ ಅಂಬಲಿಯಲ್ಲಿ ಮೆಗ್ನೀಷಿಯಮ್‌ ಹೇರಳವಾಗಿದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 
 

Image credits: Getty

ಮಧುಮೇಹ ನಿಯಂತ್ರಣ

ಮಧುಮೇಹಿಗಳು ರಾಗಿ ಅಂಬಲಿಯನ್ನು ಸೇವಿಸಬಹುದು. ರಾಗಿ ಅಂಬಲಿಯಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಆಹಾರದ ನಾರುಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 
 

Image credits: Getty

ಹೃದಯದ ಆರೋಗ್ಯಕ್ಕೆ

ರಾಗಿ ಅಂಬಲಿಯನ್ನು ನಿಯಮಿತವಾಗಿ ಸೇವಿಸಿದರೆ ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಾಗುತ್ತದೆ. ಇದು ಹೃದಯ ಸ್ನಾಯುಗಳ ಕಾರ್ಯಕ್ಷಮತೆ ಮತ್ತು ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 

Image credits: social media

ರಕ್ತಹೀನತೆಗೆ ಚೆಕ್

ರಾಗಿ ಅಂಬಲಿ ಕಬ್ಬಿಣಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಹಿಮೋಗ್ಲೋಬಿನ್ ಕಡಿಮೆ ಇರುವವರು, ರಕ್ತಹೀನತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ರಾಗಿ ಮಾಲ್ಟ್ ಸೇವಿಸಿದರೆ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 
 

Image credits: Google

ಬಲಿಷ್ಠ ಮೂಳೆಗಳು

ರಾಗಿ ಮಾಲ್ಟ್‌ನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ರಂಜಕವು ಹಲ್ಲುಗಳ ಆರೋಗ್ಯವನ್ನೂ ಕಾಪಾಡುತ್ತದೆ. 
 

Image credits: Getty

ತೂಕ ಇಳಿಸಲು

ತೂಕ ಇಳಿಸಿಕೊಳ್ಳಲು ಬಯಸುವಿರಾ? ಹಾಗಾದರೆ ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ ಬದಲಾಗಿ ರಾಗಿ ಮಾಲ್ಟ್ ಸೇವಿಸಿ. ಇದರಲ್ಲಿರುವ ನಾರಿನ ಅಂಶವು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. 
 

Image credits: Getty

ಮಾನಸಿಕ ಆರೋಗ್ಯ

ಆತಂಕ, ಖಿನ್ನತೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳನ್ನು ದೂರ ಮಾಡಲು ರಾಗಿ ಮಾಲ್ಟ್ ಸಹಾಯಕವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳು ದೇಹಕ್ಕೆ ವಿಶ್ರಾಂತಿ ನೀಡುತ್ತವೆ. 
 

Image credits: Getty

ಗಮನಿಸಿ

ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗೆ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ. 

Image credits: our own

ಹಸಿರು ಕಾಫಿ ಆರೋಗ್ಯ ಪ್ರಯೋಜನಗಳು

ಬಾಲಿವುಡ್‌ ಸ್ಟಾರ್‌ ಕಿಡ್‌ಗಳು ಓದುವ ಅಂಬಾನಿ ಶಾಲೆಯ ಊಟದ ಮೆನು ಹೇಗಿದೆ?

ಬೆಳಗಿನ ಜಾವ ಕಾಫಿ ಕುಡಿದರೆ ಹೃದ್ರೋಗ ಇರಲ್ಲ, ಆಯುಷ್ಯ ಜಾಸ್ತಿ

ಅನ್ನದ ಬದಲು ಇವುಗಳನ್ನು ತಿನ್ನಿ, ತೂಕ ಇಳಿಸೋಕೆ ಬೆಸ್ಟ್‌!