ಚಾಣಕ್ಯ ನೀತಿಯ ಪ್ರಕಾರ ೪ ಕೆಲಸಗಳನ್ನು ಮಾಡಿದ ತಕ್ಷಣ ಸ್ನಾನ ಮಾಡಬೇಕು. ಮತ್ತು, ಆ ಕೆಲಸಗಳೇನೆಂದು ತಿಳಿದುಕೊಳ್ಳೋಣ...
ಮಿಲನದ ನಂತರ
ಸ್ತ್ರೀ, ಪುರುಷರು ಮಿಲನದ ನಂತರ ಸ್ನಾನ ಮಾಡುವುದು ಮುಖ್ಯ. ಸ್ತ್ರೀ, ಪುರುಷರು ಇಬ್ಬರೂ ಕಡ್ಡಾಯವಾಗಿ ಇದನ್ನು ಪಾಲಿಸಬೇಕು.
ಕ್ಷೌರದ ನಂತರ
ಕೂದಲು ಕತ್ತರಿಸಿದ ನಂತರ ಅಥವಾ ಕ್ಷೌರ ಮಾಡಿದ ನಂತರ ತಕ್ಷಣ ಸ್ನಾನ ಮಾಡಬೇಕು. ಏಕೆಂದರೆ ಕತ್ತರಿಸಿದ ನಂತರ ದೇಹದ ಮೇಲೆ ಸಣ್ಣ ಸಣ್ಣ ಕೂದಲುಗಳು ಅಂಟಿಕೊಳ್ಳುತ್ತವೆ. ಸ್ನಾನ ಮಾಡಿದರೆ ಮಾತ್ರ ಶುಚಿಯಾಗುತ್ತೇವೆ.
ಎಣ್ಣೆ ಮಸಾಜ್..
ಎಣ್ಣೆ ಮಸಾಜ್ ನಂತರ ತಕ್ಷಣ ಸ್ನಾನ ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ಇಲ್ಲದಿದ್ದರೆ ಚರ್ಮ ರೋಗಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಎಣ್ಣೆ ಹಚ್ಚಿದ ತಕ್ಷಣ ಸ್ನಾನ ಮಾಡಬೇಕು.
ಶವಯಾತ್ರೆಯಿಂದ ಹಿಂತಿರುಗಿದ ನಂತರ
ಯಾರದೇ ಶವಯಾತ್ರೆಗೆ ಸ್ಮಶಾನಕ್ಕೆ ಹೋದಾಗ ನಮ್ಮ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಶವಯಾತ್ರೆಯಿಂದ ಹಿಂತಿರುಗಿದ ನಂತರ ಸ್ನಾನ ಮಾಡುವುದು ಬಹಳ ಮುಖ್ಯ.