ಬ್ರಹ್ಮವೈವರ್ತ ಪುರಾಣದ ಪ್ರಕಾರ ಯಾರು ಮನೆಗೆ ಬಂದರೆ ಊಟ ಹಾಕಿ ಕಳುಹಿಸಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.
ಮಗ/ಮಗಳ ಮಗನಿಗೆ
ಮಗಳು ಅಥವಾ ಮಗನ ಮಗನಾದ ಮೊಮ್ಮಗ ಮನೆಗೆ ಬಂದರೆ ಖಂಡಿತವಾಗಿಯೂ ಊಟ ಹಾಕಬೇಕು. ಊಟ ಮಾಡದಿದ್ದರೆ ಏನನ್ನಾದರೂ ತಿನ್ನಿಸಬೇಕು.
ತಂಗಿಯ ಮಗನಿಗೆ
ತಂಗಿಯ ಮಗನಾದ ಅಳಿಯ ಮನೆಗೆ ಬಂದರೆ ಕೂಡ ಖಂಡಿತವಾಗಿಯೂ ಊಟ ಹಾಕಬೇಕು. ಆದರೆ ಅಳಿಯನಿಗೆ ಪಾದಾಭಿವಂದನೆ ಮಾಡಬಾರದು.
ತಂಗಿ
ನಿಮ್ಮ ಮನೆಗೆ ತಂಗಿ ಬಂದರೆ ಕೂಡ ಅವಳಿಗೆ ಖಂಡಿತವಾಗಿಯೂ ಊಟ ಹಾಕಬೇಕು. ಸಾಧ್ಯವಾದರೆ ಏನಾದರೂ ಉಡುಗೊರೆ ಕೂಡ ನೀಡಬಹುದು.
ಅಳಿಯ ಬಂದರೆ
ಮಗಳು ಅಥವಾ ತಂಗಿಯ ಗಂಡ ಅಂದರೆ ಅಳಿಯ ಮನೆಗೆ ಬಂದರೆ ಅವನಿಗೆ ಊಟ ಹಾಕದೆ ಕಳುಹಿಸಬಾರದು. ಅಳಿಯ ನಿಮ್ಮ ಮನೆಯಲ್ಲಿ ಊಟ ಮಾಡಿದರೆ ಮನೆಯಲ್ಲಿ ಸುಖ-ಸಂತೋಷಗಳು ತೆರೆದುಕೊಳ್ಳುತ್ತವೆ ಎಂದು ನಂಬುತ್ತಾರೆ.
ಸಾಧುಗಳು ಬಂದರೆ
ಮನೆಗೆ ಸಾಧು ಬಂದರೂ ಕೂಡ ಖಂಡಿತವಾಗಿಯೂ ಊಟ ಹಾಕಬೇಕು. ಇಲ್ಲದಿದ್ದರೆ ನಿಮಗೆ ದುರಾದೃಷ್ಟ ಉಂಟಾಗುತ್ತದೆ.