ಯುವಕರೇ ಕಾಲೇಜಿನಲ್ಲಿ ಮಿಂಚಲು ರಿಷಬ್ ಪಂತ್ ಸ್ಟೈಲ್‌ನಲ್ಲಿ ಡ್ರೆಸ್ ಮಾಡಿ!
ರಿಷಬ್ ಪಂತ್ ತರಹ ಕೂಲ್ ಆಗಿ ಕಾಣಿಸಿ
ಸಾಮಾನ್ಯವಾಗಿ ನಿಮ್ಮ ಸ್ನೇಹಿತರು ನಿನಗೆ ಸ್ಟೈಲ್ ಮಾಡಲು ಸಹ ಬರುವುದಿಲ್ಲ ಹೇಳುತ್ತಾರೆ. ಅಂತಹ ಯುವಕರೇ ನೀವು ರಿಷಬ್ ಪಂತ್ ಸ್ಟೈಲ್ ಅನುಸರಿಸಿ ನಿಮ್ಮ ಸ್ನೇಹಿತರ ತೆಗಳಿಕೆ ದೂರ ಮಾಡಬಹುದು.
ವೈಟ್ ಟೀಶರ್ಟ್ ವಿತ್ ಪ್ಯಾಂಟ್
ಕೂಲ್ ಆಗಿ ಕಾಣಬೇಕೆಂದರೆ ಬೇಸಿಗೆಯಲ್ಲಿ ವೈಟ್ ಲೂಸ್ ಟೀಶರ್ಟ್ ಜೊತೆಗೆ ವೈಟ್ ಟ್ರೌಸರ್ ಅಥವಾ ಪ್ಯಾಂಟ್ ಧರಿಸಿ. ಇದರೊಂದಿಗೆ ಗೋಲ್ಡ್ ಚೈನ್ ಮತ್ತು ಬ್ಲ್ಯಾಕ್ ಸನ್‌ಗ್ಲಾಸ್ ಹಾಕಿಕೊಂಡು ಸ್ಮಾರ್ಟ್ ಆಗಿ ಕಾಣಬಹುದು.
ಬ್ಲ್ಯಾಕ್ ಬ್ಲೇಜರ್-ಪ್ಯಾಂಟ್ ವಿತ್ ವೈಟ್ ಶರ್ಟ್
ಗೆಳತಿ ಅಥವಾ ಹೆಂಡತಿಯೊಂದಿಗೆ ಯಾವುದಾದರೂ ಪಾರ್ಟಿಗೆ ಅಥವಾ ಫಂಕ್ಷನ್‌ಗೆ ಹೋಗಬೇಕೆಂದರೆ ರಿಷಬ್ ಪಂತ್ ಅವರ ಈ ಲುಕ್‌ನಿಂದ ಐಡಿಯಾ ತೆಗೆದುಕೊಳ್ಳಿ. ಬ್ಲ್ಯಾಕ್ ಬ್ಲೇಜರ್ ಪ್ಯಾಂಟ್ ಜೊತೆಗೆ ವೈಟ್ ಶರ್ಟ್ ಒಪ್ಪುತ್ತದೆ.
ಚೆಕ್ಸ್ ಜಾಕೆಟ್ ವಿತ್ ಬ್ಲೂ ಪ್ಯಾಂಟ್
ನೀವು ಔಟಿಂಗ್ ಅಥವಾ ಯಾವುದಾದರೂ ವೆಕೇಶನ್‌ಗೆ ಗೆಳತಿಯೊಂದಿಗೆ ಹೋಗುತ್ತಿದ್ದರೆ ಈ ಕೂಲ್ ಲುಕ್ ಅನ್ನು ಕಾಪಿ ಮಾಡಿ. ಟೀಶರ್ಟ್ ಮೇಲೆ ಚೆಕ್ ಜಾಕೆಟ್ ಮತ್ತು ಡೆನಿಮ್ ಪ್ಯಾಂಟ್ ಅಥವಾ ಜೀನ್ಸ್ ಹಾಕಿ.
ಹಾಫ್ ಪ್ಯಾಂಟ್ ವಿತ್ ಟೀ-ಶರ್ಟ್ ಜಾಕೆಟ್
ರಿಷಬ್ ಪಂತ್ ಈ ಡ್ರೆಸ್‌ನಲ್ಲಿ ಕೂಲ್ ಮತ್ತು ಸ್ಮಾರ್ಟ್ ಆಗಿ ಕಾಣಲು ಬ್ಲೂ ಮತ್ತು ವೈಟ್ ಹಾಫ್ ಪ್ಯಾಂಟ್ ಜೊತೆಗೆ ಬ್ಲೂ ಟೀಶರ್ಟ್ ಧರಿಸಿದ್ದಾರೆ ಮತ್ತು ಮೇಲೆ ಹಾಫ್ ಸ್ಲೀವ್ಸ್ ಜಾಕೆಟ್ ಹಾಕಿಕೊಂಡಿದ್ದಾರೆ.
ರಿಷಬ್ ಅವರ ಇನ್‌ಫಾರ್ಮಲ್ ಕೂಲ್ ಲುಕ್
ವೈಟ್ ಶರ್ಟ್ ಮತ್ತು ಟೈ ಜೊತೆಗೆ ರಿಷಬ್ ಬ್ರೌನ್ ಕಲರ್‌ನ ಬ್ಲೇಜರ್ ಧರಿಸಿದ್ದಾರೆ. ಈ ಮೂರು ಕಾಂಬಿನೇಷನ್ ಮಿಸ್‌ಮ್ಯಾಚ್ ಆಗಿದ್ದರೂ ಕೂಲ್ ಆಗಿ ಕಾಣುತ್ತಿದ್ದಾರೆ. ಪಾರ್ಟಿ ಲುಕ್ ಅನ್ನು ನಿವೇ ಕ್ರಿಯೇಟ್ ಮಾಡಬಹುದು.
ಬ್ಲೂ ಮತ್ತು ವೈಟ್ ಶರ್ಟ್
ಯುವಕರಿಗೆ ಬ್ಲೂ ಮತ್ತು ವೈಟ್ ಶರ್ಟ್ ಕಾಂಬಿನೇಷನ್ ಪರ್ಫೆಕ್ಟ್ ಆಗಿರುತ್ತದೆ. ನೀವು ರಿಷಬ್ ಅವರ ಈ ಲುಕ್‌ನಿಂದ ಪ್ರೇರಣೆ ಪಡೆಯುತ್ತಾ 1-2 ಸಾವಿರದ ಒಳಗೆ ಉತ್ತಮ ಬ್ರಾಂಡ್‌ನ ಸೇಮ್ ಪ್ಯಾಟರ್ನ್‌ನಲ್ಲಿ ಶರ್ಟ್ ಖರೀದಿಸಬಹುದು.