Fashion

ಪಾರ್ಟಿ ಅಥವಾ ಹಬ್ಬ, ಚಿನ್ನದ ಪೋಲಾ ಬಳೆಗಳು ರಾಣಿ ಲುಕ್ ನೀಡುತ್ತವೆ!

ಸಿಂಪಲ್ ಚಿನ್ನದ ಪೋಲಾ ಬಳೆ

ಗಾಜು-ಚಿನ್ನದಿಂದ ತಯಾರಿಸುವ ಪೋಲಾ ಬಳೆಯನ್ನು ಬಂಗಾಳ-ಒಡಿಶಾದ ಮಹಿಳೆಯರು ಧರಿಸುತ್ತಾರೆ. ರಜವಾಡಿ ಬಳೆ ಧರಿಸಿದ್ರೆ ಇವುಗಳನ್ನು ಟ್ರೈ ಮಾಡಬಹುದು.

ಎಂಬೋಸ್ಡ್ ಚಿನ್ನದ ಪೋಲಾ ಬಳೆ

ಎಂಬೋಸ್ಡ್ ಚಿನ್ನದ ಪೋಲಾ ಬಳೆಗಳು ಉಬ್ಬು ವಿನ್ಯಾಸದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಈ ಬಳೆಗಳುಗ ಜ್ಯಾಮಿತಿ ಆಕಾರ ಮತ್ತು ಎಲೆ ವಿನ್ಯಾಸದಲ್ಲಿ ಬರುತ್ತವೆ.

ಫಿಲಿಗ್ರೀ ಚಿನ್ನದ ಪೋಲಾ ಬಳೆ

ಫಿಲಿಗ್ರೀ ಶೈಲಿಯ ಪೋಲಾ ಬಳೆಯನ್ನು ಸಣ್ಣ ತಂತಿಗಳಿಂದ ತಯಾರಿಸಲಾಗುತ್ತದೆ. ಗಾಜಿನ ಬಳೆಯೊಂದಿಗೆ ಇದನ್ನು ಮ್ಯಾಚ್ ಮಾಡ್ಕೊಂಡು ಧರಿಸಬಹುದು.

ಕುಂದನ್ ಚಿನ್ನದ ಪೋಲಾ ಬಳೆ

ಭವ್ಯ ಮತ್ತು ಸಾಂಪ್ರದಾಯಿಕ ನೋಟಕ್ಕಾಗಿ ಕುಂದನ್ ಚಿನ್ನದ ಪೋಲಾ ಬಳೆಗಿಂತ ಉತ್ತಮವಾದದ್ದೇನೂ ಇಲ್ಲ. ಇದರಲ್ಲಿ ಚಿನ್ನದ ಕೆತ್ತನೆಯೊಂದಿಗೆ ಸಣ್ಣ ಕುಂದನ್‌ಗಳನ್ನು ಅಳವಡಿಸಲಾಗಿರುತ್ತದೆ. ಇವು ಮದುವೆಗೆ ಸೂಕ್ತವಾಗಿವೆ.

ಸ್ಟೋನ್-ಸ್ಟಡ್ಡ್ ಚಿನ್ನದ ಪೋಲಾ ಬಳೆ

ನವ ವಧುವಿಗೆ ಉಡುಗೊರೆಯಾಗಿ ನೀಡಲು ನೀವು ರತ್ನಗಳಿಂದ ತಯಾರಿಸಿದ ಈ ರೀತಿಯ ಸ್ಟೋನ್ ಸ್ಟಡ್ಡ್ ಚಿನ್ನದ ಪೋಲಾ ಬಳೆಯನ್ನು ಆಯ್ಕೆ ಮಾಡಬಹುದು.

ಟು-ಟೋನ್ ಚಿನ್ನದ ಪೋಲಾ ಬಳೆ

ಟು-ಟೋನ್ ಚಿನ್ನದ ಪೋಲಾ ಬಳೆಗಳು ಹಳದಿ, ಬಿಳಿ ವಿವಿಧ ಬಣ್ಣಗಳಲ್ಲಿ ಸಿಗುತ್ತವೆ. ನೀವು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಈ ಬಳೆ ಖಂಡಿತವಾಗಿ ಟ್ರೈ ಮಾಡಿ. ಖಡಾ ರೀತಿಯಲ್ಲಿ ಧರಿಸಬಹುದು.

ಸಾಂಪ್ರದಾಯಿಕ ಪೋಲಾ ಬಳೆ

ಸರಳ ಕೆಂಪು ಚೂಡಿಯ ಮೇಲೆ ಜ್ಯಾಮಿತಿ ಆಕಾರದ ವಿನ್ಯಾಸದೊಂದಿಗೆ ತಯಾರಿಸಲಾದ ಈ ಪೋಲಾ ಬಳೆಗಳು ಹಬ್ಬಗಳಿಗೆ ಉತ್ತಮ ಆಯ್ಕೆಯಾಗಿದೆ. ಚಿನ್ನದ ಲೇಪನದಲ್ಲಿಯೂ ಈ ಬಳೆಗಳು ಸಿಗುತ್ತವೆ. 

32 ಇಂಚಿನ ಸೊಂಟಕ್ಕೆ ತಮನ್ನಾ ಭಾಟಿಯಾರಿಂದ ಲೆಹೆಂಗಾ ಸಲಹೆಗಳು

ಹೊಸ ವರ್ಷದ ಪಾರ್ಟಿಯಲ್ಲಿ ಮಿಂಚಲು ಇಲ್ಲಿದೆ ಸಖತ್ತಾಗಿರೋ ಪಾರ್ಟಿವೇರ್‌ಗಳು

ಮದುವೆ, ಪಾರ್ಟಿಗಳಲ್ಲಿ ಮಿಂಚಲು ಲೇಟೆಸ್ಟ್‌ ಫ್ರೆಂಚ್ ಬನ್‌ ಹೇರ್‌ ಸ್ಟೈಲ್

ವೆಸ್ಟರ್ನ್‌ ಬಟ್ಟೆಗಳಿಗೂ ಮ್ಯಾಚ್ ಆಗುವಂತಹ ಟ್ರೆಂಡಿ ಚಿನ್ನದ ಬಳೆಗಳ ಕಲೆಕ್ಷನ್