Fashion
ಮಗಳ ಹುಟ್ಟು ಹಬ್ಬಕ್ಕೆ ಗಿಫ್ಟ್ ಕೊಡುವುದು ಎಂದರೆ ಪೋಷಕರಿಗೆ ಸಂಭ್ರಮ..ಆದರೆ ಏನು ಗಿಫ್ಟ್ ಕೊಡುವುದು ಎಂದು ಪ್ರತಿಬಾರಿ ಯೋಚಿಸ್ತಾರೆ. ಮಗಳಿಗೆ ಉಡುಗೊರೆಯಾಗಿ ನೀಡಬಯಸಿದರೆ ಇಲ್ಲಿವೆ ವಿವಿಧ ವಿನ್ಯಾಸದ ಪೆಂಡೆಂಟ್ಸ್.
ಪೂಜೆ, ಸಮಾರಂಭದಿಂದ ಹಿಡಿದು ಮದುವೆ ಸಮಾರಂಭದ ಪಾರ್ಟಿಯವರೆಗೆ, ಪ್ರತಿ ಸಂದರ್ಭಕ್ಕೂ ಈ ಚಿನ್ನದ ಪೆಂಡೆಂಟ್ ಸೂಕ್ತವಾಗಿದೆ. ನೀವು ಮಗಳಿಗೆ ಈ ರೀತಿಯ ವರ್ಣರಂಜಿತ ಸ್ಟೋನ್ ಸ್ಟಡ್ಡೆಡ್ ಸರ್ಕಲ್ ಪೆಂಡೆಂಟ್ ತೆಗೆದುಕೊಳ್ಳಬಹುದು.
ಹಬ್ಬದ ಋತುವಿನಲ್ಲಿ ಕೃಷ್ಣನ ಬಾಸುರಿ ಚಿನ್ನದ ಪೆಂಡೆಂಟ್ಗಿಂತ ಉತ್ತಮ ಉಡುಗೊರೆ ಇನ್ನೇನು ಇರಬಹುದು. ಈ ಹೊಸ ಸಂಗ್ರಹಣೆಯ 18K ಹಳದಿ ಚಿನ್ನದ ಪೆಂಡೆಂಟ್ ಅನ್ನು ನೀವು ಸ್ಥಳೀಯ ಆಭರಣ ವ್ಯಾಪಾರಿಯಿಂದ ಕಸ್ಟಮೈಸ್ ಮಾಡಿಸಬಹುದು.
ಟ್ರಿಪಲ್ ಲೇಯರ್ ರೌಂಡ್ ವಿನ್ಯಾಸದ ಈ ಸುಂದರವಾದ ಪೆಂಡೆಂಟ್ ಯಾವುದೇ ಹುಡುಗಿಯ ಕುತ್ತಿಗೆಯ ಸೌಂದರ್ಯವನ್ನು ಹೆಚ್ಚಿಸಲು ಸಾಕು. ಇದನ್ನು ನೀವು 18KT ಹಳದಿ ಚಿನ್ನದಲ್ಲಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು.
ನಿಮ್ಮ ಮಗಳ ನೆಚ್ಚಿನ ಹವ್ಯಾಸ ಅಬಿರುಚಿ ಗಮನದಲ್ಲಿಟ್ಟುಕೊಂಡು ನೀವು ಈ ರೀತಿಯ ಮಿನಿಯೇಚರ್ ಚಿನ್ನದ ಪೆಂಡೆಂಟ್ 2 ಗ್ರಾಂನಲ್ಲಿ ಇದು ಸುಲಭವಾಗಿ ತಯಾರಾಗುತ್ತದೆ ಮತ್ತು ತುಂಬಾ ವಿಶಿಷ್ಟವಾಗಿ ಕಾಣುತ್ತದೆ.
ಯಾವುದೇ ಬಣ್ಣದ ಉಡುಪು ಅಥವಾ ಸೀರೆಯೊಂದಿಗೆ ಹೊಂದಿಕೊಳ್ಳುವ ಪೆಂಡೆಂಟ್ ಅನ್ನು ನೀವು ಹುಡುಕುತ್ತಿದ್ದರೆ, ಈ ಹಾರ್ಟ್ ಪ್ಯಾಟರ್ನ್ ಚಿನ್ನದ ಪೆಂಡೆಂಟ್ ಅತ್ಯುತ್ತಮ ವಿನ್ಯಾಸಗಳಲ್ಲಿ ಒಂದಾಗಿದೆ.
ಈ ರೀತಿಯ ಹೂವಿನ ವಿನ್ಯಾಸದ ಸ್ಟೋನ್ ಪೆಂಡೆಂಟ್ಗಳನ್ನು ಸಹ ನೀವು ನೋಡಬಹುದು. ಕಲ್ಲಿನಿಂದಾಗಿ ಇದು ನಿಮಗೆ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುತ್ತದೆ. ಜೊತೆಗೆ ಧರಿಸಿದಾಗ ಅದ್ಭುತವಾದ ನೋಟವನ್ನು ನೀಡುತ್ತದೆ.
ನೀವು ಬಯಸಿದರೆ ನಿಮ್ಮ ಪ್ರೀತಿಯ ಮಗಳಿಗೆ ಈ ರೀತಿಯ ಹೆಸರಿನ ಅಕ್ಷರ ಚಿನ್ನದ ಪೆಂಡೆಂಟ್ ಅನ್ನು ಸಹ ಮಾಡಿಸಬಹುದು. ಯುವಜನರಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.