Fashion
ಕಾಶ್ಮೀರಿ ಸೀರೆಗಳಲ್ಲಿ ಕಾನಿ (Kani) ಮತ್ತು ಸೋಜ್ನಿ (Sozni) ಕಸೂತಿಯನ್ನು ಸಂಪೂರ್ಣವಾಗಿ ಕೈಯಿಂದ ಮಾಡಲಾಗುತ್ತದೆ. ಇದು ತುಂಬಾ ಸೂಕ್ಷ್ಮ ಮತ್ತು ನಯವಾಗಿರುತ್ತದೆ.
ಕಾಶ್ಮೀರಿ ಸೀರೆಗಳನ್ನು ಶುದ್ಧ ಪಶ್ಮಿನಾ, ರೇಷ್ಮೆ ಮತ್ತು ಉಣ್ಣೆಯ ಬಟ್ಟೆಗಳಲ್ಲಿ ತಯಾರಿಸಲಾಗುತ್ತದೆ. ಪಶ್ಮಿನಾ ಉಣ್ಣೆಯಿಂದ ಮಾಡಿದ ಸೀರೆಗಳು ತುಂಬಾ ಹಗುರ ಮತ್ತು ಬೆಚ್ಚಗಿರುತ್ತವೆ. ಇದು ಚಳಿಗಾಲದಲ್ಲಿ ಸೂಕ್ತವಾಗಿದೆ.
ಕಪ್ಪು ಸೀರೆಯ ಮೇಲೆ ಮಲ್ಟಿಕಲರ್ ನೇಯ್ಗೆ ಸಾಕಷ್ಟು ಭಾರೀ ಲುಕ್ ನೀಡುತ್ತದೆ. ಈ ರೀತಿಯ ಕಾಶ್ಮೀರಿ ಸೀರೆ 3-5 ಸಾವಿರದ ನಡುವೆ ಲಭ್ಯವಿದೆ. ಇದನ್ನು ನೀವು ಯಾವುದೇ ಸಮಾರಂಭದಲ್ಲಿ ಧರಿಸಬಹುದು.
ನೀಲಿ ಬಣ್ಣದ ಹೆವಿ ಆರಿ ವರ್ಕ್ ಜಾರ್ಜೆಟ್ ಸೀರೆಯನ್ನು ಧರಿಸಿದ ನಂತರ ಸಾಕಷ್ಟು ಸ್ಟೈಲಿಶ್ ಲುಕ್ ಕ್ರಿಯೇಟ್ ಆಗುತ್ತದೆ. ಈ ರೀತಿಯ ಸೀರೆಯನ್ನು ಬೇಸಿಗೆಯಲ್ಲಿ ಸ್ಟೈಲ್ ಮಾಡಬಹುದು, ಏಕೆಂದರೆ ಇದು ತುಂಬಾ ಹಗುರವಾಗಿರುತ್ತದೆ.
ಮಲ್ಟಿಕಲರ್ ಪಶ್ಮಿನಾ ಸಿಲ್ಕ್ ಸೀರೆಯನ್ನು ನಿಮ್ಮ ಅತ್ತೆಗೆ ಉಡುಗೊರೆಯಾಗಿ ನೀಡಿ ಅವರ ಮುದ್ದಿನ ಸೊಸೆಯಾಗಬಹುದು. ಈ ರೇಷ್ಮೆ ಸೀರೆ ನಿಮಗೆ ರಾಯಲ್ ಲುಕ್ ನೀಡುತ್ತದೆ. 8-10 ಸಾವಿರದಲ್ಲಿ ಈ ರೀತಿಯ ಸೀರೆ ಸಿಗುತ್ತದೆ.
ನೀಲಿ ಬಣ್ಣದ ಜಾರ್ಜೆಟ್ ಸೀರೆಯ ಬಾರ್ಡರ್ ಮತ್ತು ಪಲ್ಲು ಮೇಲೆ ಕೈಯಿಂದ ಹೂವು ಮತ್ತು ಎಲೆಗಳ ಕಸೂತಿ ಮಾಡಲಾಗಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ. ಈ ರೀತಿಯ ಸೀರೆಯೊಂದಿಗೆ ನೀವು ಸ್ಲೀವ್ ಲೆಸ್ ಬ್ಲೌಸ್ ಧರಿಸಿ.
ಡೈಲಿ ಯೂಸ್ನಲ್ಲಿ ನೀವು ಈ ರೀತಿಯ ಕಾಶ್ಮೀರಿ ಸೀರೆಯನ್ನು ತರಬಹುದು. ಇದನ್ನು ಧರಿಸಿ ಮನೆಯಲ್ಲಿಯೂ ನೀವು ಮೆರೆಯಬಹುದು. 2000 ಒಳಗೆ ಜಾರ್ಜೆಟ್ ಫ್ಯಾಬ್ರಿಕ್ನಲ್ಲಿ ಈ ರೀತಿಯ ಸೀರೆ ಸಿಗುತ್ತದೆ.