ಆಫೀಸ್‌ಗೆ ಫಾರ್ಮಲ್ ಲುಕ್ ಬೇಕು ಅಂದ್ರೆ ನೀವು ಕಪ್ಪು ಅಥವಾ ಕಂದು ಬಣ್ಣದ ಪೆನ್ಸಿಲ್ ಸ್ಕರ್ಟ್‌ಗೆ ಶರ್ಟ್ ಧರಿಸಬಹುದು.ಇದು ನಿಮಗೆ ಪ್ರೊಫೆಷನಲ್ ಜೊತೆ ಕ್ಲಾಸಿ ಲುಕ್ ನೀಡುತ್ತದೆ.
ಎ-ಲೈನ್ ಸ್ಕರ್ಟ್
ಎ-ಲೈನ್ ಸ್ಕರ್ಟ್ ಪ್ರತಿಯೊಬ್ಬರಿಗೂ ಚೆನ್ನಾಗಿ ಕಾಣುತ್ತದೆ ಮತ್ತು ಕ್ಯಾಶುಯಲ್ ಮತ್ತು ಫಾರ್ಮಲ್ ಎರಡಕ್ಕೂ ಸೂಟ್ ಆಗುತ್ತದೆ. ಇದನ್ನು ನೀವು ಟೀ-ಶರ್ಟ್, ಟಾಪ್ ಅಥವಾ ಕುರ್ತಿ ಜೊತೆ ಧರಿಸಬಹುದು.
ಲೆದರ್ ಸ್ಕರ್ಟ್
ನೀವು ದಿಟ್ಟ ಮತ್ತು ಅದ್ಭುತ ಲುಕ್ ಅಳವಡಿಸಿಕೊಳ್ಳಲು ಬಯಸಿದರೆ, ನಿಮ್ಮ ಬಳಿ ಕಪ್ಪು ಅಥವಾ ಕಂದು ಬಣ್ಣದ ಲೆದರ್ ಸ್ಕರ್ಟ್ ಇರಬೇಕು. ಇದನ್ನು ಬಾಡಿ ಹಗ್ಗಿಂಗ್ ಟಾಪ್‌ನೊಂದಿಗೆ ಧರಿಸಿ
ಮಿಡಿ ಸ್ಕರ್ಟ್
ಪ್ರತಿ ಮಹಿಳೆಯ ಬಳಿ ಮಿಡಿ ಸ್ಕರ್ಟ್ ಇರಬೇಕು. ಇದು ಮೊಣಕಾಲುಗಳ ಕೆಳಗೆವರೆಗೆ ಇರುತ್ತದೆ. ಸುಂದರವಾಗಿ ಕಾಣುವುದರ ಜೊತೆ ಟ್ರೆಂಡಿಯಾಗಿರುತ್ತದೆ ಇದನ್ನು ಕ್ರಾಪ್ ಟಾಪ್ ಅಥವಾ ಫಿಟ್ಟೆಡ್ ಟಾಪ್‌ನೊಂದಿಗೆ ಧರಿಸಿ.
ಡೆನಿಮ್ ಸ್ಕರ್ಟ್
ಕ್ಯಾಶುಯಲ್, ಆರಾಮದಾಯಕ ಲುಕ್‌ಗೆ ಡೆನಿಮ್ ಸ್ಕರ್ಟ್ ಉತ್ತಮ ಆಯ್ಕೆಯಾಗಿದೆ. ಇದು ಯಾವಾಗಲೂ ಟ್ರೆಂಡ್‌ನಲ್ಲಿರುತ್ತದೆ, ಇದನ್ನು ಗ್ರಾಫಿಕ್ ಟೀ-ಶರ್ಟ್, ಡೆನಿಮ್ ಜಾಕೆಟ್ ಅಥವಾ ಕ್ರಾಪ್ ಟಾಪ್‌ನೊಂದಿಗೆ ಧರಿಸಬಹುದು.
ಪ್ಲೀಟೆಡ್ ಸ್ಕರ್ಟ್
ಪ್ಲೀಟೆಡ್ ಸ್ಕರ್ಟ್‌ನ್ನು ನೀವು ಸ್ಯಾಟಿನ್ ಟಾಪ್ ಅಥವಾ ಟರ್ಟಲ್‌ನೆಕ್ ಸ್ವೆಟರ್‌ನೊಂದಿಗೆ ಧರಿಸಬಹುದು. ಗೋಲ್ಡನ್ ಮತ್ತು ಸಿಲ್ವರ್ ಬಣ್ಣದ ಪ್ಲೀಟೆಡ್ ಸ್ಕರ್ಟ್ ಪಾರ್ಟಿಗೆ ಸೂಕ್ತ ಆಯ್ಕೆಯಾಗಿದೆ.
ರ‍್ಯಾಪ್ ರೌಂಡ್ ಸ್ಕರ್ಟ್
ಪ್ರತಿಯೊಬ್ಬರಿಗೂ ರ‍್ಯಾಪ್ ರೌಂಡ್ ಸ್ಕರ್ಟ್ ಉತ್ತಮ ಆಯ್ಕೆಯಾಗಿದೆ. ಇದು ದೇಹಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಇದನ್ನು ಸರಳ ಸ್ಲೀವ್‌ಲೆಸ್ ಟಾಪ್ ಅಥವಾ ಕುರ್ತಿಯೊಂದಿಗೆ ಧರಿಸಬಹುದು.