ಅನಂತ್-ರಾಧಿಕಾ ಪ್ರೀವೆಡ್ಡಿಂಗ್ ಕ್ರೂಸ್ ನಲ್ಲಿ ರಣವೀರ್ ಸಿಂಗ್, ಸಾರಾ ಅಲಿ ಖಾನ್ ಮೋಜು-ಮಸ್ತಿ, ವೈರಲ್ ಆಯ್ತು ಫೋಟೋಸ್

By Anusha Shetty  |  First Published Jun 1, 2024, 2:48 PM IST

ಇಟಲಿಯ ಐಷಾರಾಮಿ ಕ್ರೂಸ್ ನಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ -ರಾಧಿಕಾ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ತಾರೆಗಳಾದ ರಣವೀರ್ ಸಿಂಗ್, ಸಾರಾ ಅಲಿ ಖಾನ್  ಅವರ ಮೋಜು-ಮಸ್ತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  
 


ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮ ಇಟಲಿಯ ಐಷಾರಾಮಿ ಕ್ರೂಸ್ ನಲ್ಲಿ ನಡೆಯುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಅದರಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ತಾರೆಗಳಾದ ರಣವೀರ್ ಸಿಂಗ್  ಹಾಗೂ ಸಾರಾ ಅಲಿ ಖಾನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕ್ರೂಸ್ ನಲ್ಲಿನ ಅವರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಣವೀರ್ ಸಿಂಗ್  ಜೋಷ್ ತುಂಬಿದ ಡ್ಯಾನ್ಸ್ ವಿಡಿಯೋ ಹೊರಬಿದ್ದ ಸ್ವಲ್ಪ ಸಮಯದ ಬಳಿಕ ಫ್ಯಾನ್ಸ್ ಅವರ ಜೊತೆಗೆ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿರುವ ಫೋಟೋಗಳು ಕೂಡ ಹೊರಬಿದ್ದಿವೆ. ಕಪ್ಪು ಬಣ್ಣದ ಧಿರಿಸು ಅದಕ್ಕೆ ಮ್ಯಾಚ್ ಆಗುವ ಕಪ್ಪು ಬಣ್ಣದ ಹಾಟ್ ಅನ್ನು ರಣವೀರ್ ಧರಿಸಿದ್ದು, ಅತಿಥಿ ಜೊತೆಗೆ ದೊಡ್ಡ ನಗುವಿನೊಂದಿಗೆ ಫೋಟೋಗೆ ಪೋಸ್ ನೋಡಿದ್ದಾರೆ. ಇನ್ನೊಂದೆಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವ ಸಾರಾ ಅಲಿ ಖಾನ್ ಸ್ನೇಹಿತರ ಜೊತೆಗೆ ಇಟಲಿಯ ಬೀದಿಗಳಲ್ಲಿ ತಿರುಗಾಟ ನಡೆಸುತ್ತ ಆನಂದಿಸುತ್ತಿರುವ ಫೋಟೋ ಕೂಡ ಹೊರಬಿದ್ದಿದೆ. ಸಾರಾ ಅಲಿ ಖಾನ್ ಸ್ನೇಹಿತೆಯರ ಜೊತೆಗೆ ರೋಮ್ ನಲ್ಲಿ ಡೇ ಔಟ್ ಮಾಡಿರುವ ಫೋಟೋ ವೈರಲ್ ಆಗಿದೆ. ಟ್ರೆವಿ ಫೌಂಟೇನ್ ಮುಂಭಾಗದಲ್ಲಿ ಸ್ನೇಹಿತರ ಜೊತೆಗೆ ಸಾರಾ ಅಲಿ ಖಾನ್ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಕಳೆದ ಕೆಲವು ದಿನಗಳಿಂದ ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುರೋಪಿಗೆ ಪ್ರಯಾಣ ಬೆಳೆಸಿದ್ದರು. ಇವರಿಬ್ಬರ ಪ್ರೀವೆಡ್ಡಿಂಗ್ ಕಾರ್ಯಕ್ರಮ ಮೇ 29ರಿಂದ ಜೂನ್ 1ರ ತನಕ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದೆ. ಇಟಲಿಯ ಐಷಾರಾಮಿ ಕ್ರೂಸ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 800 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಅನೇಕ ಪಾರ್ಟಿಗಳು ಹಾಗೂ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಕ್ರೂಸ್ ಈ ನಾಲ್ಕು ದಿನಗಳ ಅವಧಿಯಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್ ಗೆ ಪ್ರಯಾಣ ಬೆಳೆಸಿದೆ. ಅಂದ್ರೆ ಒಟ್ಟು 4,380 ಕಿ.ಮೀ. ಪ್ರಯಾಣಿಸಲಿದೆ. 

Tap to resize

Latest Videos

ಅಬ್ಬಾ, ಅಂಬಾನಿ ಮಗನ ಮದುವೆ ನಡೆಯೋ ಹಾಲ್ ಬಾಡಿಗೆ ದಿನಕ್ಕೆ ಇಷ್ಟೊಂದಾ?

ಅನಂತ್-ರಾಧಿಕಾ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಕರೀನಾ ಕಪೂರ್, ಇಬ್ರಾಹಿಂ ಅಲಿ ಖಾನ್, ಜಾಹ್ನವಿ ಕಪೂರ್, ಅನನ್ಯ ಪಾಂಡೆ, ಕರಣ್ ಜೋಹರ್, ದಿಶಾ ಪಟಾಣಿ ಹಾಗೂ ಕರೀಶ್ಮಾ ಕಪೂರ್ ಸೇರಿದಂತೆ ಅನೇಕ ತಾರೆಯರು ಪಾಲ್ಗೊಂಡಿದ್ದಾರೆ. ಇವರೆಲ್ಲ ಕ್ರೂಸ್ ನಲ್ಲಿ ಅನಂತ್ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. 

ಮೇ 29ರಂದು ಅನಂತ್-ರಾಧಿಕಾ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮ ವೆಲ್ ಕಂ ಲಂಚ್ ಜೊತೆಗೆ ಆರಂಭವಾಗಿತ್ತು. ಆ ಬಳಿಕ ಸ್ಟಾರಿ ನೈಟ್ ಕಾರ್ಯಕ್ರಮ ಜರುಗಿತ್ತು. ಇಟಲಿಯ ಪೋರ್ಟೋಫಿನೋನಲ್ಲಿ ಜೂನ್ 1ರಂದು ಈ ಕಾರ್ಯಕ್ರಮ ಮುಕ್ತಾಯವಾಗಲಿದೆ. 

ಅಂಬಾನಿ ಮದುವೆ, ರಿಹಾನ್ನಾ 66 ಕೋಟಿ ರೂ, ಬಿಯೊನ್ಸ್ 33 ಕೋಟಿ, ಆರ್ಟಿಸ್ಟ್ ಚಾರ್ಜ್ ಇಷ್ಟೊಂದಾ?

ಈಗಾಗಲೇ ಅನಂತ್-ರಾಧಿಕಾ ಮದುವೆಯ  ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಅದರಂತೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇವರಿಬ್ಬರ ಮದುವೆ ಜುಲೈ 12ರಂದು ನಡೆಯಲಿದೆ.ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಆಮಂತ್ರಣ ಪತ್ರಿಕೆಗಳನ್ನು ಈಗಾಗಲೇ ಅತಿಥಿಗಳಿಗೆ ನೀಡಲು ಪ್ರಾರಂಭಿಸಲಾಗಿದೆ.  ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಬಂಗಾರದ ವರ್ಣದಲ್ಲಿದೆ. ಈ ಕಾರ್ಡ್ ನಲ್ಲಿ ವಿವಾಹ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯಿದೆ. ಜುಲೈ 12ರಂದು ವಿವಾಹ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, 13ರಂದು ಆಶೀರ್ವಾದ ಕಾರ್ಯಕ್ರಮವಿದ್ದು,  ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ 14ರಂದು ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೋರಲಾಗಿದೆ. 

click me!