Education

ವರ್ಷಕ್ಕೆ ಎರಡು ಬಾರಿ ನಡೆಸುವ JEE ಪರೀಕ್ಷೆ

ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಸಾವಿರಾರು ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. IIT, NIT & BIT ಗಳು ಕೆಲವು ಅತ್ಯಂತ ಪ್ರಸಿದ್ಧ ಎಂಜಿನಿಯರಿಂಗ್ ಸಂಸ್ಥೆಗಳಾಗಿವೆ. 
 

Image credits: social media

ಶ್ರೀಮಂತ ಉದ್ಯಮಿ ಅಂಬಾನಿ ನಂಟು

ಅದೇ ರೀತಿ ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್  ಬರೆದು ಅತ್ಯಧಿಕ ಅಂಕಗಳನ್ನು ಪಡೆದ ವೇದ್ ಲಹೋಟಿ ಅವರ ಯಶಸ್ಸಿನ ಕಥೆ ಇಲ್ಲಿ ನೀಡಲಾಗಿದೆ. ಅಂಬಾನಿಗೂ ಈ ವಿದ್ಯಾರ್ಥಿಗೂ ಸಂಬಂಧವಿದೆ.

Image credits: social media

64 ವರ್ಷಗಳ ದಾಖಲೆ ಮುರಿದ ವೇದ್‌

2024ರಲ್ಲಿ ಇಂದೋರ್‌ನ ವೇದ್ ಲಹೋಟಿ 64ವರ್ಷಗಳ ದಾಖಲೆಯನ್ನು ಮುರಿದು ಜೆಇಇ ಅಡ್ವಾನ್ಸ್‌ನಲ್ಲಿ 360ಕ್ಕೆ 355ಅಂಕಗಳನ್ನು ಗಳಿಸಿದರು. ಈ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಹಿಂದೆ 2022 ರಲ್ಲಿ 352 ಅಂಕಗಳ ದಾಖಲೆ ಇತ್ತು.

Image credits: social media

ವೇದ್ ಅವರ IIT-JEE Preparation

ನಾನು ಅಧ್ಯಯನ ಮಾಡುವಾಗ ಗಡಿಯಾರವನ್ನು ಎಂದಿಗೂ ನೋಡಲಿಲ್ಲ. ನಾನು ಗುಣಾತ್ಮಕ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸಿದೆ. ಸಾಮಾಜಿಕ ಮಾಧ್ಯಮದಿಂದ ಸಮಯ ವ್ಯರ್ಥ ಹೀಗಾಗಿ ನಾನು ಅದರಿಂದ ದೂರವಿದ್ದೆ ಎಂದಿದ್ದಾರೆ.

Image credits: social media

JEE ತಯಾರಿ ಎಲ್ಲಿ?

ವೇದ್ ಮಧ್ಯಪ್ರದೇಶದ ಇಂದೋರ್ ಮೂಲದವರು. ಇದಲ್ಲದೆ, ಅವರು ರಾಜಸ್ಥಾನದ ಕೋಟಾದಲ್ಲಿರುವ ಪ್ರತಿಷ್ಠಿತ ತರಬೇತಿ ಕೇಂದ್ರದಲ್ಲಿ ಓದುತ್ತಿದ್ದರು, ಅಲ್ಲಿಯೇ JEE ತಯಾರಿಯನ್ನು  ನಡೆಸಿದರು.
 

Image credits: social media

119 ರ ಅಖಿಲ ಭಾರತ ಶ್ರೇಣಿ

ವೇದ್ ಲಹೋಟಿ 10 ನೇ ತರಗತಿಯಲ್ಲಿ 98.6%, 12 ನೇ ತರಗತಿಯಲ್ಲಿ 97.6%, ಜೆಇಇ-ಮೈನ್ 2024 ರಲ್ಲಿ, ಅವರು 300 ರಲ್ಲಿ 295 ಅಂಕಗಳನ್ನು ಗಳಿಸುವ ಮೂಲಕ 119 ರ ಅಖಿಲ ಭಾರತ ಶ್ರೇಣಿಯನ್ನು ಗಳಿಸಿದ್ದಾರೆ.

Image credits: social media

ಅಂಬಾನಿ ನಂಟಿದು!

ವೇದ್ ಅವರ ತಂದೆ ಯೋಗೇಶ್ ಲಹೋಟಿ ರಿಲಯನ್ಸ್ ಜಿಯೋದಲ್ಲಿ ನಿರ್ಮಾಣ ವ್ಯವಸ್ಥಾಪಕರಾಗಿದ್ದಾರೆ, ಇದು ಮುಖೇಶ್ ಅಂಬಾನಿ ಅವರ ಕಂಪನಿಯಾಗಿದೆ. ಅವರ ತಾಯಿ ಜಯಾ ಲಹೋಟಿ ಗೃಹಿಣಿ.
 

Image credits: social media

ವೇದ ವ್ಯಾಸರಿಂದ ಪ್ರಭಾವಿರಾಗಿ ವೇದ್‌ ಹೆಸರು

ತಮ್ಮ ಮಗ ಅಸಾಧಾರಣ ಪ್ರತಿಭಾವಂತನಾಗಲಿ ಎಂದು ನಂಬಿಕೆ ಇಟ್ಟು  'ವೇದ್' ಎಂದು ಹೆಸರಿಟ್ಟರು. ವೇದ ವ್ಯಾಸರು ಪವಿತ್ರ ಗ್ರಂಥ ವೇದಗಳನ್ನು ಸಂಗ್ರಹಿಸಿದರು, ಆದ್ದರಿಂದ ಅವರು ಮಗನಿಗೆ ಈ ಹೆಸರನ್ನು ಇಟ್ಟರು.
 

Image credits: social media

ಟ್ಯಾಲೆಂಟೆಡ್‌ ಕಿಡ್‌

5 &6 ನೇ ತರಗತಿಗಳಲ್ಲಿ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ (IMO)ನಲ್ಲಿ ಎರಡನೇ ಶ್ರೇಣಿ ಮೂಲಕ ಅಂತರರಾಷ್ಟ್ರೀಯ ಮನ್ನಣೆ, 8ನೇ ತರಗತಿಯಲ್ಲಿ ಅಂತರರಾಷ್ಟ್ರೀಯ ಜೂನಿಯರ್ ಸೈನ್ಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಪಡೆದಿದ್ದರು.
 

Image credits: social media

ಪಿಯುಸಿ ಶೇ.50ಕ್ಕಿಂತ ಕಡಿಮೆ ಅಂಕ ಬಂತಾ? ಚಿಂತೆ ಬಿಡಿ, ಈ ಕೋರ್ಸ್‌ ಆಯ್ಕೆ ಮಾಡಿ!

ಜೀವನದುದ್ದಕ್ಕೂ ನೋವು ಕಂಡ IAS ಅಧಿಕಾರಿ ಅನನ್ಯಾ ದಾಸ್ ಕಥೆ

ಕ್ಯಾಟ್ ಪರೀಕ್ಷೆ ಎಂದರೇನು? MBA ಆಕಾಂಕ್ಷಿಗಳಿಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಅಂತರರಾಷ್ಟ್ರೀಯ ವಿದ್ಯಾರ್ಥಿ ವೇತನ ಪಡೆಯೋದು ಹೇಗೆ? ಉಚಿತವಾಗಿ ವಿದೇಶದಲ್ಲಿ ಓದಿ