Cricket
ಫಿಲ್ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 16 ಎಸೆತಗಳಲ್ಲಿ 32 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
ವಿರಾಟ್ ಕೊಹ್ಲಿ ಸ್ಪಿನ್ ಟ್ರ್ಯಾಕ್‌ನಲ್ಲಿ 31 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ದೇವದತ್ ಪಡಿಕ್ಕಲ್ 14 ಎಸೆತಗಳಲ್ಲಿ 27 ರನ್ ಗಳಿಸಿ RCB ಇನ್ನಿಂಗ್ಸ್ ಅನ್ನು ವೇಗಗೊಳಿಸಿದರು. ಇದು ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು.
ನಾಯಕ ರಜತ್ ಪಾಟಿದಾರ್ 34 ಎಸೆತಗಳಲ್ಲಿ 52 ರನ್ ಗಳಿಸಿ RCBಗೆ ಗೌರವಾನ್ವಿತ ಮೊತ್ತವನ್ನು ತಲುಪುವಂತೆ ನೋಡಿಕೊಂಡರು.
ಟಿಮ್ ಡೇವಿಡ್ 8 ಎಸೆತಗಳಲ್ಲಿ 22 ರನ್ ಗಳಿಸಿ ಸಿಎಸ್‌ಕೆ ತಂಡಕ್ಕೆ 197 ರನ್ ಗಳ ಗುರಿ ನೀಡಲು ಸಹಾಯ ಮಾಡಿದರು.
ಸ್ಪಿನ್ನರ್ ನೂರ್ ಅಹ್ಮದ್ ನಾಲ್ಕು ಓವರ್‌ಗಳಲ್ಲಿ 3/36 ವಿಕೆಟ್ ಪಡೆದರು.
197 ರನ್ ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡಿತು.
8.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡರೂ, ರಚಿನ್ ರವೀಂದ್ರ 31 ಎಸೆತಗಳಲ್ಲಿ 41 ರನ್ ಗಳಿಸಿ ಸಿಎಸ್‌ಕೆ ತಂಡದ ಭರವಸೆಯನ್ನು ಜೀವಂತವಾಗಿಟ್ಟರು.
ಯಶ್ ದಯಾಳ್ 13ನೇ ಓವರ್‌ನಲ್ಲಿ ರಚಿನ್ (41) ಮತ್ತು ಶಿವಂ ದುಬೆ (19) ಅವರ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಸಿಎಸ್‌ಕೆ ತಂಡಕ್ಕೆ ಮತ್ತಷ್ಟು ಶಾಕ್ ಕೊಟ್ಟರು
ಸಿಎಸ್‌ಕೆ ಗೆಲ್ಲಲು 28 ಎಸೆತಗಳಲ್ಲಿ 98 ರನ್ ಬೇಕಿದ್ದಾಗ ಎಂ ಎಸ್ ಧೋನಿ ಕ್ರೀಸ್‌ಗೆ ಬಂದರು ಮತ್ತು 16 ಎಸೆತಗಳಲ್ಲಿ 30 ರನ್ ಗಳಿಸಿದರು, ಆದರೆ ಅದು ವ್ಯರ್ಥವಾಯಿತು.
ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ನಾಲ್ಕು ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ಮೂರು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು 2008ರ ನಂತರ ಮೊದಲ ಬಾರಿಗೆ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳಿಂದ ಜಯ ಸಾಧಿಸಿತು.