Cricket
ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ (38) ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ ಬಲವಾದ 78 ರನ್ ಜೊತೆಯಾಟ ನೀಡಿದರು.
ಜೋಸ್ ಬಟ್ಲರ್ 24 ಎಸೆತಗಳಲ್ಲಿ 39 ರನ್ ಗಳಿಸಿ ಸಾಯಿ ಸುದರ್ಶನ್ ಅವರೊಂದಿಗೆ 51 ರನ್ ಜೊತೆಯಾಟ ನೀಡಿದರು.
ಸಾಯಿ ಸುದರ್ಶನ್ 41 ಎಸೆತಗಳಲ್ಲಿ 63 ರನ್ ಗಳಿಸಿ ಜಿಟಿ ತಂಡಕ್ಕೆ ಉತ್ತಮ ಮೊತ್ತ ದಾಖಲಿಸಲು ಸಹಾಯ ಮಾಡಿದರು.
ಮುಂಬೈ ಇಂಡಿಯನ್ಸ್ ಡೆತ್ ಓವರ್‌ಗಳಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿತು, ಗುಜರಾತ್ ಟೈಟನ್ಸ್ ತಂಡವನ್ನು 18 ಓವರ್‌ಗಳಲ್ಲಿ 179/4 ರಿಂದ 20 ಓವರ್‌ಗಳಲ್ಲಿ 196/8 ಕ್ಕೆ ತಂದಿತು.
ಮುಂಬೈ ಇಂಡಿಯನ್ಸ್‌ನ ಸಂಘಟಿತ ಬೌಲಿಂಗ್ ಪ್ರಯತ್ನ ಪ್ರದರ್ಶನ ತೋರಿತು. ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಬೌಲ್ಟ್, ಚಹಾರ್, ಸತ್ಯನಾರಾಯಣ ಮತ್ತು ಮುಜೀಬ್ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್‌ನ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (8) ಮತ್ತು ರಿಯಾನ್ ರಿಕೆಲ್ಟನ್ (6) ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಬೇಗನೆ ಪಡೆದರು. ಇದು ಗುಜರಾತ್ ಗೆಲುವಿಗೆ ಪ್ರಮುಖ ಕಾರಣ ಎನಿಸಿತು.
ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ 62 ರನ್‌ಗಳ ಜೊತೆಯಾಟದೊಂದಿಗೆ ಮುಂಬೈ ಇಂಡಿಯನ್ಸ್‌ನ ರನ್ ಚೇಸ್ ಅನ್ನು ಮುಂದುವರೆಸಿದರು.
ಗುಜರಾತ್ ಟೈಟನ್ಸ್ ವೇಗಿ ಪ್ರಸಿದ್ಧ್ ಕೃಷ್ಣ ತಿಲಕ್ (39) ಮತ್ತು ಸೂರ್ಯಕುಮಾರ್ ಯಾದವ್ (48) ಅವರ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಇಲ್ಲಿ ಮುಂಬೈ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು.
ಗೆಲ್ಲಲು 42 ಎಸೆತಗಳಲ್ಲಿ 89 ರನ್ ಬೇಕಿದ್ದಾಗ ಬ್ಯಾಟಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು, ಸಾಯಿ ಕಿಶೋರ್ ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು.