ಐಪಿಎಲ್ 2025 ಋತುವಿನ ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಇವೆ. ಎಲ್ಲಾ ತಂಡಗಳು ತಮ್ಮ ತಂಡಗಳನ್ನು ಸಿದ್ಧಪಡಿಸಿಕೊಂಡು ಟ್ರೋಫಿ ಗೆಲ್ಲಲು ಸಜ್ಜಾಗಿವೆ.
ಈ ಆಟಗಾರರಿಗೆ ಕೊನೆಯ ಸೀಸನ್
ಐವರು ಕ್ರಿಕೆಟಿಗರಿಗೆ ಐಪಿಎಲ್ 2025 ಕೊನೆಯ ಸೀಸನ್ ಆಗಿರುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ನ ಯಶಸ್ವಿ ನಾಯಕ, ಐದು ಟ್ರೋಫಿ ಗೆದ್ದಿದ್ದಾರೆ. ಅವರ ವಯಸ್ಸು, ಫಾರ್ಮ್ ಪರಿಗಣಿಸಿದರೆ, ಇದು ಅವರ ಕೊನೆ ಸೀಸನ್ ಸಾಧ್ಯತೆ ಹೆಚ್ಚು
ಆರ್ ಅಶ್ವಿನ್
ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಈ ಬಾರಿ ಐಪಿಎಲ್ ಕೂಡ ಅಶ್ವಿನ್ ಕೊನೆಯ ಸೀಸನ್ ಆಗಲಿರುವ ಸಾಧ್ಯತೆ ಇದೆ.
ಎಂಎಸ್ ಧೋನಿ
ಸಿಎಸ್ಕೆ ಯಶಸ್ಸಿ ನಾಯಕ ಧೋನಿ. ಈ ಬಾರಿ ಅನ್ಕ್ಯಾಪ್ ಪ್ಲೇಯರ್ ಆಗಿ ರಿಟೈನ್ ಆಗಿದ್ದಾರೆ. ಇದು ಅವರ ಕೊನೆಯ ಸೀಸನ್ ಆಗಲಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿಗೆ ನಿವೃತ್ತಿಯ ವಯಸ್ಸಾಗಿಲ್ಲ. ಫಾರ್ಮ್ ಕಡಿಮೆಯಾಗಿಲ್ಲ. ಆದರೆ ಕೊಹ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಐಪಿಎಲ್ಗೂ ವಿದಾಯ ಹೇಳುವ ಸಾಧ್ಯತೆ ಇದೆ.
ಮೊಯಿನ್ ಅಲಿ
ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೊಯಿನ್ ಅಲಿ ಕೂಡ ಐಪಿಎಲ್ 2025ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳಬಹುದು. ಈ ಬಾರಿ ಸಿಎಸ್ಕೆ ಪರ ಆಡಲಿದ್ದಾರೆ.