Cricket

ಚಿತ್ರರಂಗದಲ್ಲಿ ಮಿಂಚಿದ ಕ್ರಿಕೆಟ್ ತಾರೆಯರು

ಕ್ರಿಕೆಟಿಗರ ಮೈದಾನದ ಮಿಂಚು

ಕ್ರಿಕೆಟಿಗರ ಮಿಂಚನ್ನು ಮೈದಾನದಲ್ಲಿ ನೋಡಿರಬಹುದು. ಆದರೆ ಕೆಲವು ದೊಡ್ಡ ಕ್ರಿಕೆಟಿಗರು ಚಿತ್ರರಂಗದಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ.

ಚಿತ್ರಗಳಲ್ಲಿ ನಟಿಸಿದ ಕ್ರಿಕೆಟಿಗರು

ಚಿತ್ರರಂಗದಲ್ಲಿ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ 5 ಕ್ರಿಕೆಟಿಗರ ಬಗ್ಗೆ ತಿಳಿಸಲಿದ್ದೇವೆ. ಈ ಪಟ್ಟಿಯಲ್ಲಿ ವಿದೇಶಿ ಆಟಗಾರರ ಹೆಸರು ಕೂಡ ಸೇರಿದೆ.

ಅನಿಲ್ ಕುಂಬ್ಳೆ

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅನುಪಮ್ ಖೇರ್ ಮತ್ತು ಮಂದಿರಾ ಬೇದಿ ಅಭಿನಯದ 'ಮೀರಾಬಾಯಿ ನಾಟ್ ಔಟ್' ಚಿತ್ರದಲ್ಲಿ ನಟಿಸಿದ್ದಾರೆ.

ಅಜಯ್ ಜಡೇಜಾ

ಭಾರತ ತಂಡದ ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ 'ಖೇಲ್' ಮತ್ತು 'ಪಲ್ ಪಲ್ ದಿಲ್ ಕೆ ಸಾಥ್' ಚಿತ್ರಗಳಲ್ಲಿ ನಟಿಸಿದ್ದಾರೆ.

ಬ್ರೆಟ್ ಲೀ

ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಇಂಡೋ ಆಸ್ಟ್ರೇಲಿಯನ್ ಚಿತ್ರ 'ಅನ್‌ಇಂಡಿಯನ್' ನಲ್ಲಿ ನಟಿಸಿದ್ದಾರೆ. ಆಶಾ ಭೋಸ್ಲೆ ಅವರ 'ಗಾನಾ ಕ್ಯಾ ತುಮ್ ಮೇರೆ ಹೋ' ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

ಸಂದೀಪ್ ಪಾಟೀಲ್

ಭಾರತ ತಂಡದ ದಿಗ್ಗಜ ಆಲ್‌ರೌಂಡರ್ ಸಂದೀಪ್ ಪಾಟೀಲ್ ಪ್ರಸಿದ್ಧ ನಟಿ ಪೂನಮ್ ಧಿಲ್ಲೋನ್ ಜೊತೆ 'ಕಭಿ ಅಜನಬೀ ಥೇ' ಚಿತ್ರದಲ್ಲಿ ನಟಿಸಿದ್ದಾರೆ.

ಸುನಿಲ್ ಗವಾಸ್ಕರ್

ಟೆಸ್ಟ್‌ನಲ್ಲಿ 10,000 ರನ್ ಗಳಿಸಿದ ಭಾರತದ ಮೊದಲ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮರಾಠಿ ಚಿತ್ರ 'ಸಾವಳಿ ಪ್ರೇಮಾಚಿ'ಯಲ್ಲಿ ನಟಿಸಿದ್ದಾರೆ. ನಸೀರುದ್ದೀನ್ ಶಾ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಸಾನಿಯಾ ಮಿರ್ಜಾರಿಗಿಂತ ಸುಂದರಿ ಆಕೆಯ ಸವತಿ ಸನಾ ಜಾವೆದ್! ಮಲಿಕ್ ಪತ್ನಿ ಫೋಟೋ ನೋಡಿ

ವಿರಾಟ್‌ ಕೊಹ್ಲಿಗೂ ಮುನ್ನ ಅನುಷ್ಕಾ ಶರ್ಮಾ ಜತೆ ಈ ಟೀಂ ಇಂಡಿಯಾ ಕ್ರಿಕೆಟಿಗ ಡೇಟ್?

ಬುಮ್ರಾ vs ಅಕ್ರಂ: 89 ಏಕದಿನ ಪಂದ್ಯಗಳ ಬಳಿಕ ಯಾರು ಬೆಸ್ಟ್ ಬೌಲರ್?

ಟೀಂ ಇಂಡಿಯಾ ನಾಯಕಿ ಸ್ಮೃತಿ ಮಂದಾನಾ ಆಸ್ತಿ ಎಷ್ಟು? ಕೋಟ್ಯಾಧಿಪತಿಯ ಯಶಸ್ಸಿನ ಗಾಥೆ