Cine World

ಸೆಲೆಬ್ರಿಟಿ ಕಿಡ್ಸ್

ಯಾವಾಗ್ಲೂ ಜನರಿಗೆ ಸೆಲೆಬ್ರಿಟಿಗಳ ಮಕ್ಕಳು ಏನು ಮಾಡ್ತಾರೆ ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತೆ. ಹೆಚ್ಚಾಗಿ ಸಿನಿಮಾ ತಾರೆಯರು ಮಕ್ಕಳು, ಅದರಲ್ಲೂ ಸ್ಟಾರ್ ನಟರ ಮಕ್ಕಳು ನಟರಾಗಿ ಗುರುತಿಸೋದಕ್ಕೆ ಇಷ್ಟ ಪಡುತ್ತಾರೆ.
 

Image credits: Instagram

ಮಲಯಾಳಂಸೂಪರ್ ಸ್ಟಾರ್

ಆದರೆ ಮಲಯಾಳಂ  ಸ್ಟಾರ್ ಮೋಹನ್‌ಲಾಲ್ ಮಗ ಮಾತ್ರ ಇದಕ್ಕೆ ವಿರುದ್ಧವಾಗಿದ್ದಾರೆ. ಮೋಹನ್ ಲಾಲ್ ಸೂಪರ್ ಸ್ಟಾರ್ ಆಗಿದ್ದರೆ, ಮಗ ಮಾತ್ರ ಸಿನಿಮಾದಿಂದ, ಲೈಮ್ ಲೈಟ್ ನಿಂದ ದೂರ ಉಳಿದು ಟ್ರಾವೆಲ್ ನಲ್ಲಿ ಖುಷಿ ಕಾಣ್ತಿದ್ದಾರೆ. 
 

Image credits: Instagram

ಪ್ರಣವ್ ಮೋಹನ್ ಲಾಲ್

ಮೋಹನ್‌ಲಾಲ್ ಒಬ್ಬನೇ ಮಗ ಪ್ರಣವ್, ಬಾಲನಟನಾಗಿ ಸಿನಿಮಾ ರಂಗಕ್ಕೆ ಬಂದು, ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದರು. ಒಂದೆರಡು ಸಿನಿಮಾಗಳಲ್ಲಿ ಬಾಲನಟನಾಗಿ ಗುರುತಿಸಿ, ವಿದ್ಯಾಭ್ಯಾಸಕ್ಕಾಗಿ ಸಿನಿಮಾದಿಂದ ದೂರ ಉಳಿದರು. 
 

Image credits: Instagram

ಸಿನಿಮಾಗೆ ಕಂ ಬ್ಯಾಕ್

ಸಿನಿಮಾಗಳಿಂದ ದೂರ ಉಳಿದ ಪ್ರಣವ್, ಮತ್ತೆ ನಟ, ಗಾಯಕ, ಹಾಡು ಬರಹಗಾರನಾಗಿ ಬಂದರು. ಇವರು ನಟಿಸಿದ ಹೃದಯಂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಪ್ರಣವ್ ನಟನೆಯನ್ನು ಜನ ಇಷ್ಟ ಪಟ್ಟಿದ್ದರು. 
 

Image credits: Instagram

ಸ್ಪೇನ್ ನಲ್ಲಿ ಫಾರ್ಮಿಂಗ್

ಈಗ ಪ್ರಣವ್ ಸಿನಿಮಾ ಬಿಟ್ಟು ಸ್ಪೇಷಲ್ ಪ್ರೋಗ್ರಾಮ್ ಒಂದನ್ನ ಮಾಡ್ತಿದ್ದಾರಂತೆ. ಪ್ರಣವ್ ಕುದುರೆ, ಕುರಿ, ಕುದುರೆ, ದನಗಳನ್ನು ಮೇಯಿಸುತ್ತಾ ರೈತ ಜೀವನ ನಡೆಸ್ತಿದ್ದಾರೆ. ಹಾಗಂತ ಇವರ ತಾಯಿ ಸಂದರ್ಶನದಲ್ಲಿ ತಿಳಿಸಿದ್ದಾರೆ. 
 

Image credits: Instagram

ಸುಚಿತ್ರ ಮೋಹನ್ ಲಾಲ್

ಮೋಹನ್‌ಲಾಲ್ ಪತ್ನಿ ಸುಚಿತ್ರ, ಮಾತನಾಡಿ ಪ್ರಣವ್ ವರ್ಕ್ ಅವೇ ಪ್ರೋಗ್ರಾಮ್‌ಗಾಗಿ ಸ್ಪೇನ್‌ನಲ್ಲಿದ್ದಾರೆ, ಅಲ್ಲಿ ವ್ಯವಸಾಯ ಮಾಡ್ತಾ ರೈತರ ಜೊತೆ ಪ್ರಯೋಗಗಳನ್ನು ಮಾಡ್ತಿದ್ದಾರೆ ಎಂದಿದ್ದಾರೆ. 
 

Image credits: Instagram

ಸರಳ ಜೀವನ ನಡೆಸುವ ಪ್ರಣವ್

ತಂದೆ ಮೋಹನ್ ಲಾಲ್ ಕೋಟ್ಯಾಧಿಪತಿ ಆಗಿದ್ದರೂ ಸಹ, ಹಣದಿಂದ ದೂರ ಉಳಿದು , ಸರಳ ಜೀವನ ನಡೆಸುತ್ತಿದ್ದಾರೆ ಪ್ರಣವ್, ಅದಕ್ಕಾಗಿ ಹೊಲದಲ್ಲಿ ದುಡಿದು, ಅದಕ್ಕೆ ಪ್ರತಿಯಾಗಿ ಆಹಾರ, ನೆಲೆ ಪಡೆದುಕೊಂಡಿದ್ದಾರೆ. 
 

Image credits: Instagram

ಲೈಫ್ ಸ್ಟೈಲ್ ಬದಲಾವಣೆ

ಪ್ರಣವ್ ಸದ್ಯ ಫಾರ್ಮಿಂಗ್, ಕುದುರೆಗಳು, ಕುರಿಮರಿಗಳನ್ನು ನೋಡಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ಸ್ಲೋ ಲೈಫ್‌ಸ್ಟೈಲ್‌ ಅನುಭವಿಸಲು ಅವರು ಈ ರೀತಿಯ ಕೆಲಸ ಆಯ್ಕೆ ಮಾಡಿಕೊಂಡಿರೋದಾಗಿ ಸುಚಿತ್ರಾ ತಿಳಿಸಿದ್ದಾರೆ. 
 

Image credits: Instagram

ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳು

ಸೋಶಿಯಲ್ ಮೀಡಿಯಾದಲ್ಲಿ ಆವಾಗವಾಗ ಕಾಣಿಸಿಕೊಳ್ಳುವ ಪ್ರಣವ್‌ ಹೆಚ್ಚಾಗಿ ನೇಚರ್ ಜೊತೆಗಿನ ಫೋಟೊ, ಕಸರತ್ತುಗಳ ಫೋಟೊ, ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಇವರನ್ನ ತೆರೆ ಮೇಲೆ ನೋಡಲು ಜನ ಕಾಯುತ್ತಿದ್ದಾರೆ. 
 

Image credits: Instagram

ಬಾಲಿವುಡ್‌ನ ಕ್ಯೂಟ್ ಕಪಲ್ ರಿತೇಶ್ ದೇಶಮುಖ್-ಜೆನಿಲಿಯಾ ಡಿಸೋಜಾ ಪ್ರೇಮಕಥೆ

ಪುಷ್ಪ 2 ಚಿತ್ರದ ಶ್ರೀವಲ್ಲಿ ಪಾತ್ರ ತಿರಸ್ಕರಿಸಿದ ನಟಿಯರು ಇವರೇ ನೋಡಿ

15 ವರ್ಷದ ಮಗನ ಬೆಂಬಲದೊಂದಿಗೆ ಎರಡನೇ ವಿವಾಹವಾದ ನಟಿ ಮಾಹಿರಾ

ಬಾಲಿವುಡ್‌ನ ಪ್ರಸಿದ್ಧ ಕಪೂರ್ ಕುಟುಂಬದ ಶೈಕ್ಷಣಿಕ ಅರ್ಹತೆಗಳು