ದೀಪಿಕಾರಿಂದ ಯಾಮಿವರೆಗೆ, 2024 ರಲ್ಲಿ ಜನಿಸಿದ ಸ್ಟಾರ್ ಮಕ್ಕಳ ಹೆಸರುಗಳು ಮತ್ತು ಅವುಗಳ ಸುಂದರ ಅರ್ಥಗಳನ್ನು ತಿಳಿಯಿರಿ. ಯಾವ ಹೆಸರು ನಿಮ್ಮ ಮನಸ್ಸನ್ನು ಗೆದ್ದಿದೆ?
ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಪೋಷಕರಾಗಿದ್ದಾರೆ. ಅವರು ತಮ್ಮ ಮಗಳಿಗೆ 'ದುವಾ' ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಪ್ರಾರ್ಥನೆ.
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ - ಕೊಹ್ಲಿ ಮನೆಗೂ 2024ರಲ್ಲಿ ಮಗ ಹುಟ್ಟಿದ. ಮಗನಿಗೆ ಆಕಾಯ್ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಸಂಸ್ಕೃತದಲ್ಲಿ 'ಅಮರ' ಅಥವಾ ಹಾಳಾಗದ ವಸ್ತುವೆಂದು. ಹುಣ್ಣಿಮೆಯ ಪ್ರಕಾಶಮಾನ ಬೆಳಕು ಎಂಬ ಅರ್ಥವಿದೆ
ವರುಣ್ ಧವನ್
ವರುಣ್ ಧವನ್ ಮತ್ತು ನತಾಶಾ ದಲಾಲ್ ಕೂಡ ಈ ವರ್ಷ ಮಗಳ ಪೋಷಕರಾಗಿದ್ದಾರೆ. ಅವರು ತಮ್ಮ ಮಗಳಿಗೆ ಲಾರಾ ಎಂದು ಹೆಸರಿಟ್ಟಿದ್ದಾರೆ, ಇದರರ್ಥ 'ಸುಂದರ'.
ಯಾಮಿ ಗೌತಮ್
ಯಾಮಿ ಗೌತಮ್ 2024 ರಲ್ಲಿ ಮಗನಿಗೆ ಜನ್ಮ ನೀಡಿದ್ದಾರೆ. ಅವರು ಅವನಿಗೆ ವೇದಾವಿದ್ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ವೇದವನ್ನು ತಿಳಿದವನು.
ವಿಕ್ರಾಂತ್ ಮೆಸ್ಸಿ
ವಿಕ್ರಾಂತ್ ಮೆಸ್ಸಿ ತಮ್ಮ ಮಗನಿಗೆ ವರದಾನ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಆಶೀರ್ವಾದ.
ಅಲಿ ಫಜಲ್
ಅಲಿ ಫಜಲ್ ಮತ್ತು ರಿಚಾ ಚಡ್ಡಾ ಅವರ ಮಗಳ ಹೆಸರು ಜುನೈರಾ ಇದಾ ಫಜಲ್, ಇದರರ್ಥ ಸ್ವರ್ಗದ ಹೂವು.
ಅಮಲಾ ಪಾಲ್
ಅಮಲಾ ಪಾಲ್ ಕೂಡ ಈ ವರ್ಷ ತಾಯಿಯಾಗಿದ್ದಾರೆ. ಅವರು ತಮ್ಮ ಮಗುವಿಗೆ ಇಳೈ ಎಂದು ಹೆಸರಿಟ್ಟಿದ್ದಾರೆ. ಇದು ತಮಿಳು ಪದ ಮತ್ತು ಇದು ಕಾರ್ತಿಕ ದೇವರ ಹೆಸರು.