ನಟಿ ಕೀರ್ತಿ ಸುರೇಶ್ ಮದುವೆಯಾಗಿ ಕೆಲವೇ ದಿನಗಳಾಗಿವೆ. ಹೀಗಿರುವಾಗಲೇ ನಟಿ ಬಾಲಿವುಡ್ ಸ್ಟಾರ್ ನಟನ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Image credits: our own
ನೆಟ್ಟಿಗರು ಶಾಕ್
ಈ ಫೋಟೋದಲ್ಲಿ ಕೀರ್ತಿ ಸುರೇಶ್ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಫೋಟೋ ನೋಡಿದ ನೆಟ್ಟಿಗರು ಮಾತ್ರ ಶಾಕ್ ಅಗಿದ್ದಾರೆ. ಮದುವೆಯಾಗಿ ಕೆಲವೇ ದಿನಕ್ಕೆ ನಟಿ ಬ್ಯುಸಿ ಆದ್ರಾ ಅಂತ ಕಾಮೆಂಟ್ ಮಾಡ್ತಿದ್ದಾರೆ.
Image credits: our own
ಸಿನಿಮಾದ ಪ್ರಮೋಷನ್
ವರುಣ್ ಧವನ್-ಕೀರ್ತಿ ಫೋಟೋಗಳನ್ನು ನೋಡಿದ ನೆಟ್ಟಿಗರು ಮದುವೆಯಾಗಿ ಕೆಲವೇ ದಿನಗಳಲ್ಲಿ ಹೀಗಾ ನೀವು ಪೋಸ್ ಕೊಡೋದು ಎಂದಿದ್ದಾರೆ. ಆದರೆ ಇದು ಸಿನಿಮಾದ ಪ್ರಮೋಷನ್ ಅಷ್ಟೇ.
Image credits: our own
ಆಂಟನಿ ತಟ್ಟಿಲ್ ಜೊತೆ ಮದುವೆ
ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಬಹುಕಾಲದ ಗೆಳೆಯ ಆಂಟನಿ ತಟ್ಟಿಲ್ ಅವರನ್ನು ಮದುವೆಯಾಗಿದ್ದರು.
Image credits: our own
ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ
ಅವರ ಮದುವೆ ತಮಿಳು ಹಿಂದೂ ಸಂಪ್ರದಾಯ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಜೋಡಿಯ ಮದುವೆಯಲ್ಲಿ ಬಹಳಷ್ಟು ಜನ ಭಾಗಿಯಾಗಿದ್ದರು.
Image credits: our own
ಬೇಬಿ ಜಾನ್ ಸಿನಿಮಾ ಪ್ರಮೋಷನ್
ಈಗ ಕೀರ್ತಿ ಸುರೇಶ್ ಅವರು ಮದುವೆಯಾಗಿ ಕೆಲವೇ ದಿನಕ್ಕೆ ಬೇಬಿ ಜಾನ್ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾ.
Image credits: our own
ಫೋಟೋಗಳು ಸಖತ್ ವೈರಲ್
ಈ ಸಿನಿಮಾದ ಪ್ರಚಾರದಲ್ಲಿ ಸೌತ್ ನಟಿ ಕೀರ್ತಿ ಸುರೇಶ್ ಸಖತ್ ಬ್ಯುಸಿಯಾಗಿದ್ದಾರೆ. ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
Image credits: our own
ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆ
ವರುಣ್ ಧವನ್ ಅಭಿನಯದ ಬೇಬಿ ಜಾನ್ ಸಿನಿಮಾ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಇದೇ ತಿಂಗಳ 25ರಂದು ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆಯಾಗಲಿದೆ.