Cine World
ಕೆಲವು ಸಿನಿಮಾಗಳು ತನ್ನದೇ ವೈಶಿಷ್ಯದ ಕಾರಣಕ್ಕೆ ಸೂಪರ್ ಹಿಟ್ ಆಗುವುದರ ಜೊತೆಗೆ ದಾಖಲೆ ಬರೆಯುತ್ತವೆ. ಅಂತಹ ಸಿನಿಮಾಗಳಲ್ಲಿ ತ್ರಿಷಾ ಹಾಗೂ ಸಿದ್ಧಾರ್ಥ ನಟನೆಯ 'ನುವ್ವೊಸ್ತಾವಂಟೆ ನೇನುಒದ್ದಂಟನ' ಕೂಡ ಒಂದು
2005 ರಲ್ಲಿ ತೆರೆಕಂಡ 'ನುವ್ವೊಸ್ತಾವಮಟೆ ನೇನುಒದ್ದಂಟನ' ಈ ತೆಲುಗು ಚಿತ್ರ ಅತೀ ಹೆಚ್ಚು ಭಾಷೆಗಳಲ್ಲಿ ರಿಮೇಕ್ ಆದ ಚಿತ್ರ ಎಂಬ ಹೆಗ್ಗಳಿಕೆ ಗಳಿಸಿದೆ.
ಪ್ರಭುದೇವ ನಿರ್ದೇಶನದ 'ನುವ್ವೊಸ್ತಾನಂತೆ ನೇನೊದ್ದಂಟನ' ಚಿತ್ರದಲ್ಲಿ ಶ್ರೀಹರಿ, ಸಿದ್ಧಾರ್ಥ್, ತ್ರಿಷಾ ಕೃಷ್ಣನ್, ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಭುದೇವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ನುವ್ವೊಸ್ತಾನಂತೆ ನೇನೊದ್ದಂಟನ' ಯಾವುದೇ ಚಿತ್ರದ ರಿಮೇಕ್ ಅಲ್ಲ, ಆದರೆ ಇದರ ಕಥೆ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ ಬ್ಲಾಕ್‌ಬಸ್ಟರ್ 'ಮೈನೆ ಪ್ಯಾರ್ ಕಿಯಾ' ದಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ.
'ನುವ್ವೊಸ್ತಾನಂತೆ ನೇನೊದ್ದಂಟನ' ಇದರ ರಿಮೇಕ್ ಮಾಡಲು ಪೈಪೋಟಿ ಏರ್ಪಟ್ಟಿತು. ಹಿಂದಿ ಸೇರಿದಂತೆ 9 ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗಿದೆ. ಇವುಗಳಲ್ಲಿ ಎಂಟು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ.
ಪ್ರಭುದೇವ ನಿರ್ದೇಶನದಲ್ಲಿ ಹಿಂದಿಯಲ್ಲಿ ಈ ಚಿತ್ರವನ್ನು 'ರಮೈಯಾ ವಸ್ತಾವಯ್ಯ' ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ, ಸೋನು ಸೂದ್, ಗಿರೀಶ್ ಕುಮಾರ್ ಮತ್ತು ಶ್ರುತಿ ಹಾಸನ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಆದರೆ 'ರಮೈಯಾ ವಸ್ತಾವಯ್ಯ' 'ನುವ್ವೊಸ್ತಾನಂತೆ ನೇನೊದ್ದಂಟನ ಏಕೈಕ ಫ್ಲಾಪ್ 38 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಭಾರತದಲ್ಲಿ ನಿವ್ವಳ 36 ಕೋಟಿ ಗಳಿಸಿದೆ.
ಕನ್ನಡದಲ್ಲಿ 'ನೀನೆಲ್ಲೋ ನಾನಲ್ಲೇ', ತಮಿಳಿನಲ್ಲಿ 'ಉನಕ್ಕುಮ್ ಎನಕ್ಕುಮ್', ಬಂಗಾಳಿಯಲ್ಲಿ 'ಐ ಲವ್ ಯು', ಮಣಿಪುರಿಯಲ್ಲಿ 'ನಿಂಗೋಲ್ ಥಜಾಬ', ಒಡಿಯಾದಲ್ಲಿ 'ಸುನ ಚಢೇಯಿ ಮೋ ರೂಪ ಚಢೇಯಿ' ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ.
ಪಂಜಾಬಿಯಲ್ಲಿ ತೇರಾ ಮೇರಾ ಏಕ್ ರಿಶ್ತ, ಬಾಂಗ್ಲಾದೇಶದಲ್ಲಿ ನಿಸ್ಸಾಶ್ ಅಮರ್ ತುಮಿ, ನೇಪಾಳಿಯಲ್ಲಿ ದಿ ಫ್ಲ್ಯಾಶ್ ಬ್ಯಾಕ್: ಫರ್ಕೆರಾ ಹೆರ್ದ ಎಂಬ ಹೆಸರಲ್ಲಿ ರಿಮೇಕ್ ಆಗಿದ್ದು ಸೂಪರ್ ಹಿಟ್ಟ ಆಗಿದೆ.
ಕನ್ನಡದಲ್ಲಿ ಈ ಸಿನಿಮಾ ನಿನ್ನೆಲ್ಲೋ ನಾನಲ್ಲೇ ಹೆಸರಿನಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಅನಿರುದ್ಧ್, ರಕ್ಷಿತಾ ಪ್ರೇಮ್ ನಟಿಸಿದ್ದಾರೆ.