Cine World
ಮಾಧುರಿ ದೀಕ್ಷಿತ್ನಿಂದ ಶ್ರೀದೇವಿವವರೆಗೆ, ಯಾರು ಎಷ್ಟು ಸಂಭಾವನೆ ಪಡೆದರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನಟಿ ಮಾಧುರಿ ಸಂಭಾವನೆ ಪ್ರತಿ ಚಿತ್ರಕ್ಕೆ 30 -45 ಲಕ್ಷ ರೂ. ಆದರೆ 'ಹಮ್ ಆಪ್ಕೆ ಹೈ ಕೌನ್' ಚಿತ್ರಕ್ಕೆ ಅವರಿಗೆ 2.7 ಕೋಟಿ ರೂ. ನೀಡಲಾಗಿತಂತೆ. ಈಗ ಅವರು ಕೆಲ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದಾರೆ
2018 ರಲ್ಲಿ ನಿಧನರಾದ ಶ್ರೀದೇವಿ 1990 ರ ದಶಕದ 'ಲಮ್ಹೇ' ಮತ್ತು 'ಖುದಾ ಗವಾಹ್' ಚಿತ್ರಗಳಿಗೆ 60 ಲಕ್ಷ ರೂ. ಪಡೆದಿದ್ದರು. ಆದರೆ 'ಜುದಾಯಿ' ಚಿತ್ರಕ್ಕೆ ಅವರ ಸಂಭಾವನೆ 1 ಕೋಟಿ ರೂ.
'ಕರಣ್ ಅರ್ಜುನ್' ಮತ್ತು 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರಗಳ ಯಶಸ್ಸಿನ ನಂತರ ಕಾಜೋಲ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದರು. ಅವರ ಸಂಭಾವನೆ ಪ್ರತಿ ಚಿತ್ರಕ್ಕೆ 50-70 ಲಕ್ಷ ರೂ.
ಕರಿಷ್ಮಾ ಕಪೂರ್ ಅವರ ಸಂಭಾವನೆ 1990 ರ ದಶಕದಲ್ಲಿ 50-70 ಲಕ್ಷ ರೂ. ಕರಿಷ್ಮಾ ಈಗಲೂ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ಟಿವಿಯಲ್ಲಿ ನೃತ್ಯ ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕರಾಗಿದ್ದಾರೆ.
1999 ರಲ್ಲಿ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ ಪ್ರತಿ ಚಿತ್ರಕ್ಕೆ 60 ಲಕ್ಷ ರೂ. ಪಡೆಯುತ್ತಿದ್ದರು. ಐಶ್ವರ್ಯಾ ಈಗಲೂ ಸಿನಿಮಾ ಮತ್ತು ಮಾಡೆಲಿಂಗ್ನಲ್ಲಿ ಸಕ್ರಿಯರಾಗಿದ್ದಾರೆ.
ಜೂಹಿ ಚಾವ್ಲಾ 1990 ರ ದಶಕದಲ್ಲಿ 25-40 ಲಕ್ಷ ರೂ. ಪಡೆಯುತ್ತಿದ್ದರು. ಜೂಹಿ ಪ್ರಸ್ತುತ ಕೃಷಿ ಮತ್ತು ತಮ್ಮ ವ್ಯವಹಾರದ ಮೇಲೆ ಗಮನ ಹರಿಸುತ್ತಿದ್ದಾರೆ. ಅವರು ಐಪಿಎಲ್ ತಂಡ KKR ನ ಸಹ-ಮಾಲೀಕರಾಗಿದ್ದಾರೆ.
1990 ರ ದಶಕದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೀತಿ ಜಿಂಟಾ ಅವರ ಸಂಭಾವನೆ ಆ ಸಮಯದಲ್ಲಿ ಪ್ರತಿ ಚಿತ್ರಕ್ಕೆ 30 ಲಕ್ಷ ರೂ. ಪ್ರಸ್ತುತ ಅವರು ಉದ್ಯಮದ ಮೇಲೆ ಗಮನ ಹರಿಸುತ್ತಿದ್ದಾರೆ.
1990 ರ ದಶಕದಲ್ಲಿ ಒಂದು ಚಿತ್ರಕ್ಕೆ ಸುಮಾರು 25 ಲಕ್ಷ ರೂ. ಪಡೆಯುತ್ತಿದ್ದ ರವೀನಾ ಟಂಡನ್ ಇಂದಿಗೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಮೀನಾಕ್ಷಿ ಶೇಷಾದ್ರಿ 1990 ರ ದಶಕದಲ್ಲಿ ಪ್ರತಿ ಎಪಿಸೋಡ್ಗೆ 20 ಲಕ್ಷ ರೂ. ಪಡೆಯುತ್ತಿದ್ದರು. ಪ್ರಸ್ತುತ ಅವರು ಚೆರಿಸ್ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.