Cine World
ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು. ಬದುಕಿಗೆ ಪ್ರೇರಣೆ ತುಂಬುವ ಅವರ 7 ಪ್ರೇರಕ ಮಾತುಗಳು ಇಲ್ಲಿವೆ
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಶಾರುಖ್ ಖಾನ್ ತಮ್ಮ ಪ್ರೀತಿಯ ಗೌರಿಯನ್ನು ಪಡೆಯುವುದರಿಂದ ಹಿಡಿದು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಶ್ರಮಪಟ್ಟರು. ಅವರು ತಮ್ಮ ಶ್ರಮದಿಂದಲೇ ಯಶಸ್ಸನ್ನು ಗಳಿಸಿದ್ದಾರೆ.
ಶಾರುಖ್ ಖಾನ್ ಹೇಳುವಂತೆ ಯಶಸ್ಸು ಉತ್ತಮ ಗುರುವಲ್ಲ, ಆದರೆ ವಿಫಲತೆ ನಮಗೆ ವಿನಯವನ್ನು ಕಲಿಸುತ್ತದೆ. ಅಂದರೆ ವಿಫಲರಾದಾಗ ಮಾತ್ರ ನಾವು ಮುಂದೆ ಯಶಸ್ವಿಯಾಗುತ್ತೇವೆ ಮತ್ತು ಇದು ನಮಗೆ ವಿನಮ್ರತೆಯನ್ನು ಕಲಿಸುತ್ತದೆ.
ಸಂಬಂಧದ ಬಗ್ಗೆ ಹೇಳುವುದಾದರೆ, ಶಾರುಖ್ ಖಾನ್ ತನ್ನ ಪ್ರೀತಿಯನ್ನು ಪಡೆಯುವುದಕ್ಕೂ ಹೋರಾಡಿದವರು. ಪತ್ನಿ ಗೌರಿ ಜೊತೆ ಮೂರು ಮಕ್ಕಳನ್ನು ಹೊಂದಿರುವ ಅವರೊಬ್ಬ ಯಶಸ್ವಿ ಪತಿ ಹಾಗೂ ಅಪ್ಪ
ನೀವು ಏನು ಮಾಡುತ್ತಿದ್ದೀರೋ ಅದರ ಮೇಲೆ ಹೆಚ್ಚು ಗಮನಹರಿಸಿ ನಿರಂತರ ಅಭ್ಯಾಸದಿಂದ ವಿಷಯಗಳು ಸುಲಭವಾಗುತ್ತವೆ. ಶ್ರಮಶೀಲರಾಗಿರಿ ಮತ್ತು ಪ್ರತಿಯೊಂದು ಕೆಲಸವನ್ನು ಮೊದಲ ಕೆಲಸ ಎಂದು ಭಾವಿಸಿ.
ಶಾರುಖ್ ಖಾನ್ ಪ್ರಕಾರ, ಜಗತ್ತಿನಲ್ಲಿ ಒಂದೇ ಒಂದು ಧರ್ಮವಿದೆ, ಅದೇ ಕಠಿಣ ಪರಿಶ್ರಮ. ಇಲ್ಲಿ ಸಾಮಾನ್ಯ ಎಂಬುದು ಯಾವುದು ಇಲ್ಲ, ಸಾಮಾನ್ಯ ಎಂಬುದು ನಿರ್ಜೀವ ಪದದ ಇನ್ನೊಂದು ಹೆಸರು ಎಂಬುದು ಶಾರುಖ್ ಮಾತು
ನಿಮ್ಮ ಭಯವನ್ನು ನಿಮ್ಮನ್ನು ಬಂಧಿಸುವ ಪಂಜರವಾಗಿಸಬೇಡಿ. ಅದನ್ನು ತೆರೆಯಿರಿ, ಅನುಭವಿಸಿ ಮತ್ತು ಭಯವನ್ನು ನಿಮ್ಮ ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸಿ. ನೀವು ಇದನ್ನು ಮಾಡಲು ಸಮರ್ಥರಿದ್ದೀರಿ ಮತ್ತು ಮಾಡಬಹುದು.
ನಿಮ್ಮನ್ನು ಹಿಂದಕ್ಕೆಳೆಯುವ ವಿಷಯವು ನೀವು ಅದರ ವಿರುದ್ಧ ದಿಕ್ಕಿನಲ್ಲಿ ಹೋಗುವವರೆಗೂ ದೂರವಾಗುವುದಿಲ್ಲ. ಅಳುವುದನ್ನು ನಿಲ್ಲಿಸಿ, ಮುಂದುವರಿಯಲು ಪ್ರಾರಂಭಿಸಿ.
ಶಾರುಖ್ ಖಾನ್ ಹೇಳುವಂತೆ ನಿಮ್ಮಲ್ಲಿ ಉತ್ಸಾಹವಿಲ್ಲದಿದ್ದರೆ, ಹೊಟ್ಟೆಯಲ್ಲಿ ಆ ಬೆಂಕಿಯಿಲ್ಲದಿದ್ದರೆ, ನೀವು ಏನನ್ನೂ ಹೊಸದಾಗಿ ಮಾಡಲು ಸಾಧ್ಯವಿಲ್ಲ. ಹೊಸ ಮತ್ತು ಅದ್ಭುತವಾದದ್ದನ್ನು ಮಾಡಲು ಉತ್ಸಾಹದಿಂದಿರಬೇಕು.
ಒಂದು ಸಮಯ ಬರುತ್ತದೆ, ಆಗ ವಿಷಯಗಳು ನಿಮ್ಮ ಇಚ್ಛೆಯಂತೆ ನಡೆಯುವುದಿಲ್ಲ, ಆಗ ಭಯಭೀತರಾಗಬೇಡಿ. ನೀವು ಮುಜುಗರದಿಂದ ಪಾರಾಗುತ್ತೀರಿ, ಆದರೆ ನೀವು ಇನ್ನೊಂದು ಹೆಜ್ಜೆ ಮುಂದಿಡಬೇಕು.