Cars

ಅದೃಷ್ಟದ ಕಾರಿಗೆ ಅದ್ಧೂರಿ ವಿದಾಯ: 4ಲಕ್ಷ ಖರ್ಚು

ಕಾರಿಗೆ ವಿದಾಯ ಹೇಳಿದ ಗುಜರಾತ್ ರೈತ

ಗುಜರಾತ್‌ನ ಅಮ್ರೇಲಿ ರೈತ ಸಂಜಯ್ ಪೋರ್ಲಾ ತಮ್ಮ 'ಅದೃಷ್ಟದ' ಕಾರನ್ನು ಸ್ಕ್ರ್ಯಾಪ್‌ಗೆ ಕೊಡುವ ಬದಲು 10 ಅಡಿ ಆಳದ ಗುಂಡಿಯಲ್ಲಿ ಹೂತಿದ್ದಾರೆ.

ಅಮ್ರೇಲಿ ಜಿಲ್ಲೆಯಲ್ಲಿ ನಡೆದ ವಿಶಿಷ್ಟ ಘಟನೆ

ಕಾರಿನ ವಿದಾಯದ ವೇಳೆ ಹೂವುಗಳಿಂದ ಅಲಂಕರಿಸಿದ ಕಾರಿಗೆ ಅಂತಿಮ ಯಾತ್ರೆ ನಡೆಸಿದ್ದಾರೆ.

10 ಅಡಿ ಆಳದ ಗುಂಡಿಯಲ್ಲಿ ಹೂಳಲಾಯಿತು

ನವೆಂಬರ್ 7 ರಂದು, ಸಂಜಯ್ ಪೋರ್ಲಾ ತಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್‌ಗೆ ಮಾರಾಟ ಮಾಡುವ ಬದಲು 10 ಅಡಿ ಆಳದ ಗುಂಡಿಯಲ್ಲಿ ಹೂಳಲು ನಿರ್ಧರಿಸಿದರು.

ಹೂವುಗಳಿಂದ ಅಲಂಕರಿಸಿ ಅಂತಿಮ ಯಾತ್ರೆ

ವಿದಾಯಕ್ಕಾಗಿ ಹೂವುಗಳಿಂದ ಅಲಂಕರಿಸಿದ ಕಾರಿಗೆ ಅಂತಿಮ ಯಾತ್ರೆ ನಡೆಸಲಾಯಿತು, ಇದರಲ್ಲಿ ಡಿಜೆ, ವಾದ್ಯಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

2004 ರಲ್ಲಿ ಖರೀದಿಸಿದ್ದರು ಈ ಕಾರನ್ನು

2004 ರಲ್ಲಿ ಸೆಕೆಂಡ್ ಹ್ಯಾಂಡ್ ಆಗಿ ಖರೀದಿಸಿದ ಈ ಕಾರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಪ್ರಗತಿ ತರಲು ಪ್ರಮುಖ ಪಾತ್ರ ವಹಿಸಿದೆ ಎಂದ ರೈತ

ಕಾರು ಖರೀದಿಸಿದ ನಂತರ ಪ್ರಗತಿ ಆರಂಭ

ಈ ಕಾರು ಖರೀದಿ ಬಳಿಕ ಸಂಜಯ್ ಆರ್ಥಿಕ ಸ್ಥಿತಿ ಸುಧಾರಿಸಿದೆ. ಪ್ರತಿ  ಕ್ಷೇತ್ರದಲ್ಲೂ ಯಶಸ್ಸನ್ನು ಗಳಿಸಿದ್ದಾರೆ. ಇದನ್ನು ಕಾರಿನ ಆಶೀರ್ವಾದ ಎಂದು ಭಾವಿಸುತ್ತಾರೆ.

ಗ್ರಾಮದಲ್ಲಿ ಭೋಜನ ಕಾರ್ಯಕ್ರಮ

ಕಾರಿನ ವಿದಾಯದ ವೇಳೆ ಇಡೀ ಗ್ರಾಮಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಈ ಭೋಜನ ಕೂಟದಲ್ಲಿ ಸುಮಾರು 1500 ಜನರು ಭಾಗವಹಿಸಿದ್ದರು.

ಅತಿಥಿಗಳು ಕೂಡಾ ಅಚ್ಚರಿಗೊಂಡರು

ಸೂರತ್‌ನಿಂದ ಬಂದಿದ್ದ ಅತಿಥಿ ಹರೇಶ್ ಕಾರ್ಕರ್, "ನಾನು ನನ್ನ ಜೀವನದಲ್ಲಿ ಇಂತಹದ್ದನ್ನು ಮೊದಲು ಎಂದೂ ನೋಡಿಲ್ಲ" ಎಂದು ಹೇಳಿದರು.

ಮರ ನೆಟ್ಟು ಸ್ಮರಣೀಯಗೊಳಿಸುವ ಯೋಜನೆ

ಅಂತ್ಯಕ್ರಿಯೆಯ ಸ್ಥಳ ಸ್ಮರಣೀಯಗೊಳಿಸಲು  ಮರವನ್ನು ನೆಟ್ಟು ಅದೃಷ್ಠ ಕಾರಿನ ನೆನಪು ಜೀವಂತವಾಗಿರಿಸಿದ್ದಾರೆ.

Find Next One