BUSINESS

₹20,000 ಸಂಬಳದಲ್ಲಿ ₹5 ಲಕ್ಷ ಸಾಲ ಪಡೆಯುವುದು ಸುಲಭವೇ?

ವೈಯಕ್ತಿಕ ಸಾಲದ ಪ್ರಯೋಜನಗಳು

ತುರ್ತು ಪರಿಸ್ಥಿತಿಯಲ್ಲಿ ವೈಯಕ್ತಿಕ ಸಾಲವು ಬಹಳ ಸುಲಭವಾಗಿ ಸಿಗುತ್ತದೆ. ಈ ಸಾಲಕ್ಕೆ ಭದ್ರತೆಯ ಅಗತ್ಯವಿಲ್ಲ. ಅಂದರೆ ಏನನ್ನೂ ಒತ್ತೆಯಾಗಿ ಇಡಬೇಕಾಗಿಲ್ಲ.

ವೈಯಕ್ತಿಕ ಸಾಲ ಯಾರಿಗೆ ಸಿಗುತ್ತದೆ

ವೈಯಕ್ತಿಕ ಸಾಲಕ್ಕೆ ಕೆಲವು ಅರ್ಹತಾ ಮಾನದಂಡಗಳಿವೆ. ಇವುಗಳಲ್ಲಿ ಸಂಬಳ ಅಥವಾ ಆದಾಯ, ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಬ್ಯಾಂಕ್ ಅಥವಾ NBFC ನಿಗದಿಪಡಿಸಿದ ಇತರ ಅಂಶಗಳು ಸೇರಿವೆ.

20 ಸಾವಿರ ಸಂಬಳದಲ್ಲಿ 5 ಲಕ್ಷ ಸಾಲ ಸಿಗುತ್ತದೆಯೇ?

20 ಸಾವಿರ ಸಂಬಳಕ್ಕೆ ವೈಯಕ್ತಿಕ ಸಾಲ ಪಡೆಯೋದು ಕಷ್ಟ.ಆದರೂ,  ಅನೇಕ ಬ್ಯಾಂಕ್‌ಗಳು ಅಥವಾ NBFCಗಳು ಕಡಿಮೆ ಸಂಬಳದಲ್ಲಿಯೂ ವೈಯಕ್ತಿಕ ಸಾಲವನ್ನು ನೀಡುತ್ತವೆ. ಅವರು ಸಂಬಳದ ಜೊತೆಗೆ ಇತರ ಅಂಶಗಳನ್ನು ಪರಿಗಣಿಸುತ್ತಾರೆ.

ಕಡಿಮೆ ಸಂಬಳದಲ್ಲಿ ಸಾಲ ಪಡೆಯುವ ಸಲಹೆಗಳು-1

ಒಬ್ಬ ಗ್ಯಾರಂಟರ್ ಅಥವಾ ಜಂಟಿ ಅರ್ಜಿದಾರರೊಂದಿಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಪ್ರೊಫೈಲ್ ಬಲಗೊಳ್ಳುತ್ತದೆ ಮತ್ತು ಕಡಿಮೆ ಸಂಬಳದಲ್ಲಿಯೂ ಸಾಲ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಕಡಿಮೆ ಸಂಬಳದಲ್ಲಿ ಸಾಲ ಪಡೆಯುವ ಸಲಹೆಗಳು-2

ನಿಮ್ಮ ಸಂಬಳ ಕಡಿಮೆಯಿದ್ದರೂ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಬಿಲ್‌ಗಳು ಮತ್ತು ಸಾಲಗಳನ್ನು ಪಾವತಿಸುತ್ತಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.  ಸಾಲದ ಅನುಮೋದನೆಯ ಸಾಧ್ಯತೆ ಹೆಚ್ಚಾಗಬಹುದು.

ಕಡಿಮೆ ಸಂಬಳದಲ್ಲಿ ಸಾಲ ಪಡೆಯುವ ಸಲಹೆಗಳು-3

ಸಂಬಳದ ಜೊತೆಗೆ ನೀವು ಪರ್ಯಾಯ ಆದಾಯ ಮೂಲಗಳಿಂದ ಹಣ ಗಳಿಸುತ್ತಿದ್ದರೆ, ಇದನ್ನು ಸಾಬೀತುಪಡಿಸುವ ಮೂಲಕ ನೀವು ಸಾಲವನ್ನು ಮರುಪಾವತಿಸಲು ಸಮರ್ಥರಾಗಿದ್ದೀರಿ ಮತ್ತು ಡೀಫಾಲ್ಟ್‌ನ ಅಪಾಯವಿಲ್ಲ ಎಂದು ಬ್ಯಾಂಕ್‌ಗೆ ತೋರಿಸಬಹುದು.

₹20,000 ಸಂಬಳದಲ್ಲಿ ₹5 ಲಕ್ಷ ಸಾಲದ ಸವಾಲು-1

ಕಡಿಮೆ ಸಂಬಳದಲ್ಲಿ 5 ಲಕ್ಷದ ಸಾಲವು ಮಾಸಿಕ ಬಜೆಟ್ ಅನ್ನು ಹಾಳುಮಾಡಬಹುದು. ಇದರಿಂದ EMI ಪಾವತಿಸುವಲ್ಲಿ ತೊಂದರೆಗಳು ಉಂಟಾಗುತ್ತವೆ. ಈಗಾಗಲೇ ಇರುವ ಸಾಲಗಳ ಜೊತೆಗೆ ಹೊಸ ಸಾಲವು DTI ಅನುಪಾತವನ್ನು ಹೆಚ್ಚಿಸಬಹುದು.

₹20,000 ಸಂಬಳದಲ್ಲಿ ₹5 ಲಕ್ಷ ಸಾಲದ ಸವಾಲು-2

ಕಡಿಮೆ ಸಂಬಳ ಇದ್ದಾಗ ನೀವು ವೈಯಕ್ತಿಕ ಸಾಲ ಪಡೆಯಲು ಹೋದರೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಹೆಚ್ಚಿನ ಬಡ್ಡಿದರ ವಿಧಿಸುತ್ತದೆ. ಇದರಿಂದಾಗಿ ಅದರ EMI ಸಹ ಹೆಚ್ಚಾಗಿರುತ್ತದೆ. ಇದನ್ನು ಪಾವತಿಸುವುದು ಕಷ್ಟವಾಗಬಹುದು.

₹20,000 ಸಂಬಳದಲ್ಲಿ ₹5 ಲಕ್ಷ ಸಾಲದ ಸವಾಲು-3

ಕಡಿಮೆ ಸಂಬಳ ಎಂದರೆ ನಿಮ್ಮ ಆದಾಯವು ಅಸ್ಥಿರವಾಗಿದೆ ಎಂದರ್ಥ. ಇದರಿಂದ ವೈಯಕ್ತಿಕ ಸಾಲದ ಅರ್ಜಿ ತಿರಸ್ಕರಿಸಲ್ಪಡಬಹುದು. ಇದು ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರಬಹುದು.

ಇಳಿಕೆಯಾಯ್ತು ಚಿನ್ನದ ಬೆಲೆ; ಬಂಗಾರ ಖರೀದಿಸೋರಿಗೆ ಸುವರ್ಣವಕಾಶ

2025ರಲ್ಲಿ ನಿಮ್ಮ ಸಂಬಳ ಎಷ್ಟು ಪಟ್ಟು ಹೆಚ್ಚಾಗುತ್ತದೆ? ಇಲ್ಲಿದೆ ಗುಡ್‌ ನ್ಯೂಸ್

ಸಂಕ್ರಾಂತಿಯಂದು 22 & 24 ಕ್ಯಾರಟ್ ಚಿನ್ನದ ಬೆಲೆಯಲ್ಲಾದ ವ್ಯತ್ಯಾಸ ನೋಡಿ

ಬಜೆಟ್‌ಗೂ ಮುನ್ನ ಈ 4 ಡಿಫೆನ್ಸ್ ಷೇರುಗಳ ಮೇಲೆ ಹೂಡಿಕೆ ಮಾಡಿದ್ರೆ ಜೇಬು ತುಂಬ ಹಣ!