BUSINESS
ವಾರದಲ್ಲಿ 70ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣ ಮೂರ್ತಿ ಕಂಪನಿ ಈಗ ಉದ್ಯೋಗಿಗಳ ವೇತನ ಹೆಚ್ಚಳದ ವಿಷಯದಲ್ಲಿ ಹಿಂದೆ ಸರಿಯುತ್ತಿದೆ.
ಇನ್ಫೋಸಿಸ್ ಇತ್ತೀಚೆಗೆ ಉದ್ಯೋಗಿಗಳ ವೇತನ ಹೆಚ್ಚಳದ ಪ್ರಸ್ತಾಪವನ್ನು ಮುಂದೂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಏನಾದರೂ ಆಗಬಹುದು ಎನ್ನುವ ನಿರೀಕ್ಷೆ ಇತ್ತು.
ಇನ್ಫೋಸಿಸ್ನಲ್ಲಿ ಕೊನೆಯದಾಗಿ ನವೆಂಬರ್ 2023 ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವಾಗಿತ್ತು. ಅಂದರೆ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅಲ್ಲಿ ವೇತನ ಹೆಚ್ಚಳವಾಗಿಲ್ಲ.
ವರದಿಗಳ ಪ್ರಕಾರ, ಜಾಗತಿಕ ಬೇಡಿಕೆಯಲ್ಲಿ ಅನಿಶ್ಚಿತತೆ ಮತ್ತು ಐಟಿ ಸೇವೆಗಳ ವೆಚ್ಚದಲ್ಲಿನ ಕಡಿತದಿಂದಾಗಿ ಕಂಪನಿಯು ವೇತನ ಹೆಚ್ಚಳವನ್ನು ಮುಂದೂಡಿದೆ.
ಇನ್ಫೋಸಿಸ್ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ, ಭಾರತದಲ್ಲಿ ಉದ್ಯೋಗಿಗಳು ವಾರಕ್ಕೆ 70ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಆದರೆ, ಉದ್ಯೋಗಿಗಳ ವೇತನ ಹೆಚ್ಚಳದ ವಿಷಯ ಬಂದಾಗ ಕಂಪನಿ ಹಿಂದೆ ಸರಿದಿದೆ.
ಕಠಿಣ ಪರಿಶ್ರಮವಿಲ್ಲದೆ ಭಾರತವನ್ನು ನಂ. 1 ಸ್ಥಾನಕ್ಕೆ ತರಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದರು. ಆದ್ದರಿಂದ ಯುವಕರು ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದ್ದರು.
ಆದರೆ, ನಾರಾಯಣ ಮೂರ್ತಿ ಅವರ ಈ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅವರ ಮಾತನ್ನು ಬೆಂಬಲಿಸಿದ್ದರು.
ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಇನ್ಫೋಸಿಸ್ನ ನಿವ್ವಳ ಲಾಭ 2.2% ಹೆಚ್ಚಾಗಿ ₹6506 ಕೋಟಿಗೆ ತಲುಪಿದೆ. ಆದರೆ, ಇದು ನಿರೀಕ್ಷೆಗಿಂತ ಕಡಿಮೆ.