ಇಲ್ಲೊಬ್ಬರು ವಯಸ್ಸಾದ ನಂತರ ಲಾಂಬೋರ್ಗಿನಿ ಖರೀದಿಸಿದ್ರೆ ಹೇಗಿರುತ್ತೆ ಎಂಬ ವೀಡಿಯೋವನ್ನು ಹಂಚಿಕೊಂಡಿದ್ದು ಅದು ಸಾಕಷ್ಟು ವೈರಲ್ ಆಗಿದೆ.
ಅನೇಕರು ಸಾಯುವ ಮೊದಲು ಅಥವಾ ರಿಟೈರ್‌ಮೆಂಟ್‌ಗೆ ಮೊದಲು ತಮ್ಮ ಕೆಲವು ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಬಕೆಟ್ ಲಿಸ್ಟ್ ರೆಡಿ ಮಾಡ್ತಾರೆ. ಈ ತಮ್ಮ ಬಕೆಟ್ ಲಿಸ್ಟ್ ಪೂರೈಸುವುದಕ್ಕಾಗಿ ಶ್ರಮವಹಿಸಿ ದುಡಿಯುತ್ತಾರೆ. ಕೆಲವರಿಗೆ ಪ್ರಪಂಚ ಸುತ್ತುವ ಕನಸಾದರೆ ಮತ್ತೆ ಕೆಲವರಿಗೆ ಐಷಾರಾಮಿ ವಸ್ತುಗಳನ್ನು ಖರೀದಿಸುವ ಕನಸು. ಇವೆರಡು ಕನಸುಗಳು ಕೂಡ ವಯಸ್ಸಾದ ನಂತರ ಕೆಲವೊಮ್ಮೆ ಮಾಡಲು ಸಾಧ್ಯವಾಗುತ್ತದೆ ಎಂದೂ ಹೇಳಲಾಗದು ಏಕೆಂದರೆ ದೈಹಿಕವಾಗಿ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಪ್ರಪಂಚ ಸುತ್ತಲು ಸಾಧ್ಯ ಹಾಗೆಯೇ ಕೆಲವೂ ಐಷಾರಾಮಿ ವಸ್ತುಗಳುವ ವಾಹನಗಳ ಖರೀದಿಯೂ ಅಷ್ಟೇ ದೇಹದಲ್ಲಿ ತ್ರಾಣವಿಲ್ಲದೇ ಹೋದರೆ ನೀವು ಐಷಾರಾಮಿ ವಾಹನ ವಸ್ತುಗಳನ್ನು ಖರೀದಿಸಿದರು ಅದನ್ನು ನಿರ್ವಹಿಸಲು ನೀವು ಖಂಡಿತ ಇನ್ನೊಬ್ಬರ ಸಹಾಯ ಪಡೆಯ ಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬರು ವಯಸ್ಸಾದ ನಂತರ ಲಾಂಬೋರ್ಗಿನಿ ಖರೀದಿಸಿದ್ರೆ ಹೇಗಿರುತ್ತೆ ಎಂಬ ವೀಡಿಯೋವನ್ನು ಹಂಚಿಕೊಂಡಿದ್ದು ಅದು ಸಾಕಷ್ಟು ವೈರಲ್ ಆಗಿದೆ.
ಲಾಂಬೋರ್ಗಿನಿ ಅತ್ಯಂತ ದುಬಾರಿ ಕಾರು ಹಲವರಿಗೆ ಇದು ಬರೀ ಕನಸಷ್ಟೇ, ಜೀವನ ಪರ್ಯಂತ ಕೂಡಿಟ್ಟರು ಎಲ್ಲರಿಗೂ ಇದನ್ನು ಖರೀದಿಸಲು ಸಾಧ್ಯವಿಲ್ಲ, ಇದರ ಜೊತೆ ವಯಸ್ಸಾದ ಕಾಲಕ್ಕೆ ಇದನ್ನು ಖರೀದಿಸಿದರೆ ನಿಮ್ಮ ಮೊಮ್ಮಕ್ಕಳೋ ಮಕ್ಕಳೋ ಬಿಡಬೇಕಷ್ಟೇ ಏಕೆಂದರೆ ಇದರಿಂದ ಇಳಿಯುವುದು ಒಳಗೆ ನುಗ್ಗಿ ಕುಳಿತುಕೊಳ್ಳುವುದಕ್ಕೂ ನೀವೂ ದೈಹಿಕವಾಗಿ ಸಮರ್ಥರಾಗಿರಬೇಕಾಗುತ್ತದೆ. ಆ ರೀತಿ ಇದೇ ಈ ಲಾಂಬೊರ್ಗಿನ ಕಾರಿನ ನಿರ್ಮಾಣ. ಇದೇ ಕಾರಣಕ್ಕೆ ಲ್ಯಾಂಬೋರ್ಗಿನಿಯಿಂದ ಇಳಿಯುವ ಹತ್ತುವ ಸಾಹಸ ಮಾಡುತ್ತಿರುವ ವೃದ್ಧರೊಬ್ಬರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
undefined
ಐಶಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ಸಚಿನ್ ತೆಂಡುಲ್ಕರ್..! ಕ್ರಿಕೆಟ್ ದೇವರ ಮನೆಗೆ ಹೊಸ ಅತಿಥಿ
ವೀಡಿಯೋದಲ್ಲೇನಿದೆ.
ವೀಡಿಯೋದಲ್ಲಿ ವೃದ್ಧರೊಬ್ಬರು ಲಾಂಬೋರ್ಗಿನಿಯಿಂದ ಬಹಳ ಕಷ್ಟಪಟ್ಟು ನೆಲಕ್ಕೆ ಇಳಿಯುತ್ತಿರುವ ದೃಶ್ಯವಿದೆ. ಕಾರಿನಿಂದ ಬಹಳ ಕಷ್ಟಪಟ್ಟು ಕೆಳಗೆ ಇಳಿಯುವ ವೃದ್ಧ ಮೊದಲು ಕಾರಿನಿಂದ ಕಾಲುಗಳನ್ನು ನೆಲಕ್ಕೆ ಇಡುವ ಬದಲು ತನ್ನೆರಡು ಕೈಗಳನ್ನು ನೆಲಕ್ಕೆ ಇಡುತ್ತಾರೆ. ಬಳಿಕ ಮೆಲ್ಲನೆ ತನ್ನ ಎರಡು ಕಾಲುಗಳನ್ನು ಕಾರಿನಿಂದ ಕೆಳಗಿಳಿಸಿ ಅಂಬೆಗಾಲಿಕ್ಕುತ್ತಾರೆ. ಬಳಿಕ ನೆಲಕ್ಕೆ ತಮ್ಮ ಕೈಗಳಿಂದ ಬಡಿಯುವ ಅವರು ಜೋರಾಗಿ ನಗುತ್ತಾರೆ. ಬಳಿಕ ಅಂಬೆಗಾಲಿಕ್ಕುತ್ತಲೇ ಸ್ವಲ್ಪ ಮುಂದೆ ಹೋಗಿ ಕಾರಿನ ಟೈರ್ ಹಿಡಿದು ಮೇಲೆ ಏಳುತ್ತಾರೆ. ಈ ವೀಡಿಯೋವನ್ನು ಫಿಜೆನ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ನಿವೃತ್ತಿಯ ನಂತರ ನೀವು ಲ್ಯಾಂಬೋರ್ಗಿನಿ ಖರೀದಿಸಿದಾಗ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಎನರ್ಜಿ ಡ್ರಿಂಕ್ ಪ್ರಚಾರಕ್ಕೆ ಕೆಲವೇ ಸೆಕೆಂಡಲ್ಲಿ 3 ಕೋಟಿಗೂ ಹೆಚ್ಚು ಮೌಲ್ಯದ ಲ್ಯಾಂಬೋರ್ಗಿನಿ ಉಡೀಸ್..!
ನೆಟ್ಟಿಗರ ಕಾಮೆಂಟ್ ಏನು?
ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕರು ನಿವೃತ್ತಿಯ ಕಾಲದಲ್ಲಾದರೂ ಅವರು ತಮ್ಮ ಆಸೆ ಪೂರೈಸಿಕೊಂಡಿದ್ದಾರೆ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜನ ಅವರಿಗೆ ವಯಸ್ಸಾಗಿದೆ, ದಪ್ಪ ಇದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ಅವರ ಬಳಿ ಲಾಂಬೋರ್ಗಿನಿ ಇದೆ ಅದಕ್ಕಿಂತ ಇನ್ನೇನು ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಇದೊಂದು ತುಂಬಾ ಭಾವುಕ ಕ್ಷಣ ಎಂದು ಕಾಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಇದು ನಿಜಕ್ಕೂ ಗೌರವಕ್ಕೆ ಪಾತ್ರವಾದ ಕ್ಷಣ ಹಾಗೂ ವಾಸ್ತವ ಸ್ಥಿತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು 6.3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರಿಗೆ ಈ ವೀಡಿಐಒ ಖುಷಿ ಮೂಡಿಸಿದೆ.
ವಯಸ್ಸು ಮುಖ್ಯ ಅಲ್ಲ ಗುರಿ ಸಾಧಿಸೋದು ಮುಖ್ಯ. ಹೀಗಾಗಿ ನಿವೃತ್ತಿಯ ನಂತರವಾದರೂ ತಮ್ಮ ಆಸೆ ಈಡೇರಿಸಿಕೊಂಡ ವೃದ್ಧನ ಮೆಚ್ಚಲೇಬೇಕು.
When you buy Lambo after retirement. pic.twitter.com/M5Z4UhDIgq
— Figen (@TheFigen_)