ಮಹಿಳಾ ದಿನಾಚರಣೆ ವಿಶೇಷ: ಈ ಯುವತಿಯರಿಗೆ ಸಾಟಿ ಇಲ್ಲ, ನಿಮ್ಮಾಣೆ

By Web Desk  |  First Published Mar 8, 2019, 8:37 PM IST

ಗಂಡು ಮಕ್ಕಳಿಲ್ಲವೆಂಬ ಕೊರಗು ನೀಗಿಸಿ ಮನೆ ಮನೆಗೆ ಪೇಪರ್ ಹಾಕಿ ಕುಟುಂಬ ನಡೆಸುತ್ತಿರೋ ಬಾಲೆಯರು..| ಓದುತ್ತಿರೋದು ಒಬ್ಬಳು ಬಿಇ, ಇನ್ನೊಬ್ಬಳು Bsc ಸೈನ್ಸ್, ಬೆಳಗಾದ್ರೆ ಮಾಡೋದು ಪೇಪರ್ ಹಾಕೋ ಕೆಲ್ಸ..| ತಂದೆಗೆ ಹಾರ್ಟ ಆಪರೇಷನ್ ಆದ ಬಳಿಕ ಮನೆ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿರೋ ಸಹೋದರಿಯರು...| ಬಾಗಲಕೋಟೆಯ ನವನಗರದ ಝಿಂಗಾಡೆ ಕುಟುಂಬದ ಪೂಜಾ & ಪ್ರಾಚಿ ಎಂಬ ದಿಟ್ಟ ಬಾಲೆಯರು..| ಬೆಳಗಾದ್ರೆ ಮನೆಮನೆಗೆ ಪೇಪರ್ ಹಂಚೋದು, ಮದ್ಯಾಹ್ನ ಕಾಲೇಜ್, ಸಂಜೆ ಓದು....| ನಾಲ್ವರು ಹೆಣ್ಣು ಮಕ್ಕಳನ್ನ ಪಡೆದು ಅವರಿಂದಲೇ ಬದುಕು ಸಾಗಿಸ್ತಿರೋ ರತ್ನಾಕರ ಝಿಂಗಾಡೆ ಕುಟುಂಬ....|


ಮಲ್ಲಿಕಾರ್ಜನ ಹೊಸಮನಿ

ಬಾಗಲಕೋಟೆ(ಮಾ.08): ಅವರು ಬಿಇ ಮತ್ತು ಸೈನ್ಸ್‌ನಂತಹ ಉನ್ನತ ವ್ಯಾಸಂಗ ಮಾಡ್ತಿರೋ ಬಾಲೆಯರು, ಮನೆಗೆ ಗಂಡು ಮಕ್ಕಳಿಲ್ಲ ಅಂತ ಕುಳಿತಿದ್ದ ದಂಪತಿಗಳ ಮನೆಗೆ ಗಂಡು ಮಕ್ಕಳಂತೆ ಕೆಲ್ಸ ಮಾಡಿ ಸೈ ಎನ್ನಿಸಿಕೊಳ್ಳುತ್ತಿರುವವರು.

Tap to resize

Latest Videos

undefined

 ಹೌದು. ತಂದೆಯ ಅಸಹಾಯಕತೆಯಿಂದ ಹೆಣ್ಣು ಮಕ್ಕಳೇ ನಿತ್ಯ ಕಾಲೇಜ್‌ಗೆ ಹೋಗುವುದರ ಜೊತೆಗೆ ಬೆಳಿಗ್ಗೆ ಮನೆ ಮನೆಗೆ ಪೇಪರ್ ಹಾಕಿ ಕೆಲ್ಸ ಮಾಡ್ತಾ ಕುಟುಂಬವನ್ನ ಸಾಗಿಸುತ್ತಾ ವಿದ್ಯಾರ್ಥಿ ಜೀವನದ ಬದುಕಿನಲ್ಲೇ ಸೈ ಎನಿಸಿಕೊಂಡಿದ್ದಾರೆ.
 
ಹೀಗೆ ಬೆಳ್ಳಂಬೆಳಿಗ್ಗೆ ಸೈಕಲ್ ತುಳಿಯುತ್ತಾ ಮನೆ ಮನೆಗೆ ಪೇಪರ್ ಹಂಚುತ್ತಿರೋ ಯುವತಿಯರು, ಗಂಡು ಮಕ್ಕಳಿಲ್ಲ ಎಂಬ ಕೊರಗು ನೀಗಿಸಿದ ಹೆಣ್ಣು ಮಕ್ಕಳನ್ನ ಮುದ್ದಿಡುತ್ತಿರೋ ದಂಪತಿಗಳು, ಎಲ್ಲಕ್ಕೂ ಮಿಗಿಲಾಗಿ ವಿದ್ಯಾರ್ಥಿ ಬದುಕಿನಲ್ಲಿಯೇ ಸೈ ಎನಿಸಿಕೊಂಡಿರೋ ದಿಟ್ಟ ಬಾಲೆಯರು.

ಇಂತಹವೊಂದು ಕುಟುಂಬ ಕಂಡು ಬರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ನವನಗರದ ರತ್ನಾಕರ ಮತ್ತು ಸಂಗೀತಾ ಝಿಂಗಾಡೆ ಅವರ ಪುತ್ರಿಯರು. ಇವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ರು. ತಂದೆ ಆರಂಭದಲ್ಲಿ ಅಂಗಡಿಯೊಂದನ್ನ ತೆರೆದಿದ್ರು. ಅದಾದ ಬಳಿಕ ಪೇಪರ್ ಏಜೆನ್ಸಿ ಹಿಡಿದು ಬದುಕು ಸಾಗಿಸಲು ಮುಂದಾದ್ರು. 

ಈ ಮಧ್ಯೆ ತಂದೆ ರತ್ನಾಕರಗೆ ಹಾರ್ಟ ಆಪರೇಷನ್ ಆಗಿ ಪೇಪರ್ ಹಾಕೋ ಕೆಲ್ಸಕ್ಕೆ ಯುವಕರು ಸಿಗದೇ ಹೋದಾಗ ತಂದೆಗೆ ಸಾಥ್ ನೀಡಿದವರೇ ಪೂಜಾ ಮತ್ತು ಪ್ರಾಚಿ. ತಂದೆಗೆ ಆರಾಮ ಇಲ್ಲದ್ದನ್ನ ಕಂಡ ಮಕ್ಕಳು ಇನ್ನೂ ಪ್ರಾಥಮಿಕ ಶಾಲೆ ಓದುತ್ತಿರುವಾಗಿನಿಂದಲೇ ಪೇಪರ್ ಹಂಚೋ ಕಾಯಕಕ್ಕೆ ಮುಂದಾದ್ರು. 

ಇಂದು ಪೂಜಾ ಬಿಇ ವ್ಯಾಸಂಗ ಮಾಡುತ್ತಿದ್ದರೆ, ಪ್ರಾಚಿ Bsc ಸೈನ್ಸ್ ಓದುತ್ತಿದ್ದಾಳೆ. ಹೀಗಾಗಿ ಕಳೆದ ಎಂಟತ್ತು ವರ್ಷಗಳಿಂದ ಪೇಪರ್ ಹಂಚುವ ಕೆಲ್ಸ ಮಾಡ್ತಾ ನಮ್ಮ ಮನೆ ನೋಡಿಕೊಂಡು ಹೋಗ್ತಿದ್ದೇವೆ, ಇದಕ್ಕೆ ಪೂರಕವಾಗಿ ನಮ್ಮ ತಂದೆ ತಾಯಿ ನಮ್ಮ ಶಿಕ್ಷಣ ಕಲಿಸುತ್ತಿದ್ದಾರೆ. ಇದ್ರಿಂದ ನಮ್ಮ ತಂದೆತಾಯಿಗೆ ಗಂಡು ಮಕ್ಕಳಿಲ್ಲ ಎಂಬ ಕೊರಗನ್ನ ದೂರ ಮಾಡಿಸಿದ್ದೇವೆ ಅಂತಾರೆ  ಸಹೋದರಿಯರು.

"

ಇನ್ನು ಬೆಳಿಗ್ಗೆ 5 ಗಂಟೆಗೆ ಎದ್ದೇಳುವ ಪೂಜಾ ಮತ್ತು ಪ್ರಾಚಿ ಲಗುಬಗೆಯಿಂದ ಪತ್ರಿಕೆಗಳನ್ನ ಜೋಡಿಸಿಕೊಂಡು ಎರಡು ಸೈಕಲ್ ಗಳ ಮೂಲಕ ಪೇಪರ್ ಹಾಕೋ ಕೆಲ್ಸಕ್ಕೆ ತೆರಳ್ತಾರೆ. ಪೇಪರ್ ಹಾಕಿ ಬಂದ ಬಳಿಕ ಮನೆ ಕೆಲಸ ಮುಗಿಸಿಕೊಂಡು ಬಳಿಕ ತಮ್ಮ ತಮ್ಮ ಕಾಲೇಜ್‌ಗೆ ತೆರಳುತ್ತಾರೆ. ಕಾಲೇಜ್ ಮುಗಿಸಿದ ಬಳಿಕ ಮರಳಿ ಸಂಜೆ ಓದಿನಲ್ಲಿ ನಿರತರಾಗಿ ಮತ್ತೇ ಬೆಳಿಗ್ಗೆ ಪೇಪರ್ ಹಂಚುವ ಕೆಲ್ಸ ಮಾಡ್ತಾರೆ.

ಹೀಗೆ ವಿದ್ಯಾರ್ಥಿ ಬದುಕಿನಲ್ಲಿಯೇ ಕೆಲಸ ಮಾಡುತ್ತಾ ಗಂಡು ಮಕ್ಕಳಿಲ್ಲದ ಮನೆಗೆ ಆಸರೆಯಾಗಿ ಅತ್ತ ಓದು- ಇತ್ತ ಮನೆ ನಿರ್ವಹಣೆ ಮಾಡ್ತಿರೋದನ್ನ ಕಂಡ ಅವರ ತಂದೆ ರತ್ನಾಕರ ಮತ್ತು ತಾಯಿ ಸಂಗೀತಾ ಅಭಿಮಾನಪಡುತ್ತಿದ್ದು, ನಮ್ಮ ಮಕ್ಕಳ ಕೆಲ್ಸ ನೋಡಿ ನಮಗೆ ಗಂಡು ಮಕ್ಕಳಿಲ್ಲವೆಂಬ ಕೊರಗು ದೂರವಾಗಿದೆ. ಮಹಿಳಾ ದಿನಾಚರಣೆ ದಿನ ಇಂತಹ ಮಕ್ಕಳನ್ನ ನಾವು ಹೆತ್ತದ್ದಕ್ಕೆ ಸಂತಸಪಡುತ್ತೇವೆ ಅಂತಾರೆ ದಿಟ್ಟ ಬಾಲೆಯರ ಪಾಲಕರು.

"

ಒಟ್ಟಿನಲ್ಲಿ ಇಡೀ ನಾಡು ಇಂದು ಮಾರ್ಚ ೮ರಂದು ಮಹಿಳಾ ದಿನಾಚರಣೆಯನ್ನ ಆಚರಿಸುತ್ತಿದೆ, ಈ ಮಧ್ಯೆ ಗಂಡು ಮಕ್ಕಳೇ ಇಲ್ಲವೆಂಬ ಕೊರಗಿನಲ್ಲಿರೋ ಪಾಲಕರಿಗೆ ಈ ಬಾಲೆಯರ ಕೆಲ್ಸದ ಜೊತೆ ಜೊತೆಗೆ ಉನ್ನತ ವ್ಯಾಸಂಗ ಮಾಡ್ತಾ ಕುಟುಂಬ ನಿರ್ವಹಣೆ ಜೊತೆಗೆ ಇತರೆ ಬಾಲೆಯರಿಗೂ ಮಾದರಿಯಾಗಿದ್ದಾರೆ. ನಿಜಕ್ಕೂ ದಿಟ್ಟ ಬಾಲೆಯರ ಕಾರ್ಯಕ್ಕೊಂದು ಹ್ಯಾಟ್ಸಪ್ ಇರಲಿ.

click me!