Dec 28, 2020, 1:04 PM IST
ವಾಷಿಂಗ್‌ಟನ್ (ಡಿ. 28): ಲಸಿಕೆ ಬಂದಾಗಿದೆ, ಫಾರಿನ್ ಟ್ರಿಪ್ ಹೊಡೆಯೋಣ ಅಂತಿದ್ರೆ ಅದು ಅಷ್ಟು ಸುಲಭವಿಲ್ಲ. ಇನ್ನು ಮುಂದೆ ವೀಸಾಗೆ ಅಪ್ಲೈ ಮಾಡೋ ಮುನ್ನ ವ್ಯಾಕ್ಸಿನ್ ಪಾಸ್‌ಪೋರ್ಟ್ ಅರ್ಜಿಯನ್ನು ಫಿಲ್ ಮಾಡುವುದು ಕಡ್ಡಾಯ. ಈಗಾಗಲೇ ಅನೇಕ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಇದಕ್ಕಾಗಿಯೇ ಸ್ಮಾರ್ಟ್‌ಫೋನ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಯಾಕೋ ಈ ಕೊರೋನಾ ವೈರಸ್ ನಮ್ಮನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಈಗಾಗಲೇ ವಿಶ್ವದ ಜನರನ್ನು ಹಿಂಡಿ ಹಿಪ್ಪೆಕಾಯಿ ಮಾಡಿದ ಈ ವೈರಸ್ ಇನ್ನೂ ಕೆಲವು ಕಾಲ ದೂರುವಾಗುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಸಿದೆ.
'ಮನ್ ಕಿ ಬಾತ್'ನಲ್ಲಿ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ಕಾರ್ಯವನ್ನು ಶ್ಲಾಘಿಸಿದ ಮೋದಿ
ನಾಲ್ಕು ದಿನಗಳಿಗೇ ಮಾಡುತ್ತಿರುವ ಕೆಲಸ ಬೋರ್ ಎನ್ನುವ ಇಂದಿನ ಜನಾಂಗದವರು ನೋಡಬೇಕಾದ ಸುದ್ದಿ ಇದು. ಕಳೆದ 49 ವರ್ಷಗಳಿಂದ ಅಮೆರಿಕದ ವರ್ಜಿನಿಯಾ ಬೀಚ್‌ನಲ್ಲಿ ಸ್ಕೂಲ್ ಬಸ್ ಓಡಿಸುತ್ತಿದ್ದಾರಂತೆ ಮರ್ಗ್ ಮೂರ್ ಎನ್ನುವ ಮಹಿಳೆ. ಆದರೂ ಇನ್ನು ಈ ಕಾರ್ಯ ಬೇಜಾರು ಬಂದಿಲ್ವಂತೆ. ಈ ಮಹಿಳೆಯ ಬದ್ಧತೆಗೆ ತಲೆ ಬಾಗಿದ ಸರಕಾರ ರೈಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಒಂದು ಶಾಲಾ ಬಸ್ ಚಾಲಕಿಯ ಕಾರ್ಯ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರುವುದು ವಿಶೇಷ. ಈ ಎಲ್ಲಾ ಸುದ್ದಿಗಳ ಬಗ್ಗೆ ಡಿಟೇಲಾಗಿ ತಿಳಿಯೋಣ ಬನ್ನಿ..!