Mar 5, 2022, 4:27 PM IST
ಉಕ್ರೇನ್ ರಷ್ಯಾ ಯುದ್ಧ(Ukraine- Russia War) ನಡೆಯುತ್ತಿರುವುದು ಗೊತ್ತೇ ಇದೆ. ರಷ್ಯಾದ ಸಮರ ಸೇನೆ ಉಕ್ರೇನ್‌ನಲ್ಲಿ ಸಂಪೂರ್ಣ ಉಗ್ರ ರೂಪ ತಾಳಿದೆ. ಈ ಮಧ್ಯೆ, ದೇಶ ವಿನಾಶದಲ್ಲಿ ತೊಡಗಿರುವ ರಷ್ಯಾ ಉಕ್ರೇನಿನ ಅಧ್ಯಕ್ಷರ ಹತ್ಯೆಗೂ ಮಹಾ ಸ್ಕೆಚ್ ನಿರಂತರ ಹಾಕುತ್ತಲೇ ಇದೆ ಎಂಬ ವಿಷಯ ಹೊರಬಿದ್ದಿದೆ.
ಹೌದು, ಯುದ್ಧ ಆರಂಭವಾಗಿ 10ನೇ ದಿನ ಇಂದು. ಕಳೆದ ಒಂದು ವಾರದಲ್ಲೇ ಮೂರು ಬಾರಿ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ(Volodymyr Zelensky) ಹತ್ಯೆಗೆ ರಷ್ಯಾ ಯತ್ನಿಸಿದೆ. ಆದರೆ, ಮೂರೂ ಬಾರಿಯೂ ಫೆಡರಲ್ ಸಿಬ್ಬಂದಿ ನೀಡಿದ ಮಾಹಿತಿಯಿಂದಾಗಿ ಸಂಚು ವಿಫಲಗೊಂಡಿದೆ.
Russia Ukraine War ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ರೊಮೆನಿಯಾ ಗಡಿ, ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ!
ಈ ಮಧ್ಯೆ ಝೆಲೆನ್‌ಸ್ಕಿ ತಾಯಿನೆಲ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಪೋಲಂಡ್(Poland)ಗೆ ಪರಾರಿಯಾಗಿದ್ದಾರೆ ಎಂದು ರಷ್ಯಾ ತನ್ನ ಸಂಸತ್ತಿನಲ್ಲಿ ಆರೋಪ ಮಾಡುವ ಮೂಲಕ ಈ ರೀತಿ ವದಂತಿ ಹಬ್ಬಿಸಲು ಯತ್ನಿಸಿತ್ತು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಝೆಲೆನ್ ಸ್ಕಿ, ಕಚೇರಿಯಿಂದಲೇ ವಿಡಿಯೋ ಸಂದೇಶ ಕಳುಹಿಸಿ ತಾನು ತನ್ನ ಕಚೇರಿಯಲ್ಲೇ ಇದ್ದು, ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ, ಕೊನೆವರೆಗೂ ಉಕ್ರೇನಿನಲ್ಲೇ ಹೋರಾಡುವೆ ಎಂದಿದ್ದಾರೆ.