Dec 22, 2020, 12:40 PM IST
ವಾಷಿಂಗ್ಟನ್(ಡಿ.22): ಕೊರೋನಾ ನಿವಾರಣೆಗೆ ಸದ್ಯ ಪಗ್ರಯೋಗ ಹಂತದಲ್ಲಿರುವ ಕೊರೋನಾ ಲಸಿಕೆಯನ್ನೇ ನೀಡಲಾಗುತ್ತಿದೆ. ಅಮೆರಿಕದಲ್ಲೂ ಕೊರೋನಾ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ. ಹೀಗಿದ್ದರೂ ಜನರಲ್ಲಿ ಲಸಿಕೆ ವಿಚಾರವಾಗಿ ಭಯ ಇದೆ. ಜನರ ಈ ಭಯ ಓಡಿಸಿ, ಅವರಲ್ಲಿ ವಿಶ್ವಾಸ ಮೂಡಿಸಲು ಅಧ್ಯಕ್ಷ ಜೋ ಬೈಡೆನ್ ಖುದ್ದು ಲಸಿಕೆ ಪಡೆದಿದ್ದಾರೆ. ಇನ್ನು ಅತ್ತ ಸಿಂಗಾಪುರದಲ್ಲೂ ಕೊರೋನಾ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಈ ಮೂಲಕ ಇದು ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೈಡೆನ್ ಪತ್ನಿಯನ್ನು ಸಂಕಷ್ಟಕ್ಕೆ ದೂಡಿದ 'ಡಾಕ್ಟರ್'; ಟ್ರಂಪ್ ವಿರುದ್ಧ ಗಂಭೀರ ಆರೋಪ
ಇನ್ನು ವಿಶ್ವಾದ್ಯಂತ ಸದ್ಯ ಹೊಸ ಮಾದರಿ ವೈರಸ್ ಜನರಲ್ಲಿ ಭೀತಿ ಹುಟ್ಟಿಸಿದೆ. ಭಾರತ ಸೇರಿ ಸುಮಾರು 40 ರಾಷ್ಟ್ರಗಳು ಬ್ರಿಟನ್‌ನಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿದೆ.ಹೀಗಿದ್ದರೂ ಅಮೆರಿಕ ಮಾತ್ರ ಪ್ರಯಾಣಿಕರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಇಷ್ಟೇ ಅಲ್ಲದೇ ಜಾಗತಿಕವಾಗಿ ಸದ್ದು ಮಾಡಿದ ಇಂದಿನ ಟಾಪ್ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ.