ಬೈಡೆನ್‌ ಪತ್ನಿಯನ್ನು ಸಂಕಷ್ಟಕ್ಕೆ ದೂಡಿದ 'ಡಾಕ್ಟರ್'; ಟ್ರಂಪ್ ವಿರುದ್ಧ ಗಂಭೀರ ಆರೋಪ

Dec 19, 2020, 11:11 AM IST

ವಾಷಿಂಗ್‌ಟನ್ (ಡಿ. 19):  ಮಾರುಕಟ್ಟೆಗೆ ಬಂದಿರುವ ಕೊರೊನಾ ಲಸಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶ್ನೆ ಎದ್ದಿರುವ ಬೆನ್ನಲ್ಲೇ,  ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಕೂಡಾ ಸೋಮವಾರ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆಯುವುದಾಗಿ ಪ್ರಕಟಿಸಿದ್ದಾರೆ. ಅಮೆರಿಕಾ ಉಪಾಧ್ಯಕ್ಷ ಮೈಕ್ ಪೆನ್ಸ್ ಖುದ್ದು ಕೊರೋನಾ ಲಸಿಕೆ ಪಡೆದಿದ್ದಾರೆ, ಅಷ್ಟೇ ಅಲ್ಲ.. ಅದನ್ನು ಟೀವಿಯಲ್ಲಿ ನೇರ ಪ್ರಸಾರ ಕೂಡಾ ಮಾಡಿದ್ದಾರೆ.

ಕೈ ಮುಗಿದು ಪ್ರಧಾನಿ ಮೋದಿ ಹೇಳಿದ 10 ಅಂಶಗಳೇನು; ರೈತರ ಪ್ರತಿಭಟನೆಗೆ ಸಿಗುತ್ತಾ ತಿರುವು?

ಪ್ರತಿಷ್ಠಿತ ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದು ಬೈಡೆನ್ ಪತ್ನಿ ಜಿಲ್‌ ಬೈಡೆನ್‌ರನ್ನು ಸಂದಿಗ್ಧ ಪರಿಸ್ಥಿತಿಗೆ ದೂಡಿದೆ. ಲೇಖನದಲ್ಲಿ ಜಿಲ್‌ ಬೈಡೆನ್ ತಮ್ಮ ಹೆಸರಿನಲ್ಲಿರುವ ಡಾಕ್ಟರ್‌ ಅನ್ನು ಬಳಸಬಾರದು ಎಂದು ವಾದಿಸಲಾಗಿದೆ.ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿರುದ್ಧ ಸಂಸದೆಯೊಬ್ಬರು ಗಂಭೀರ ಆರೋಪ ಮಾಡಿರುವುದು ಅಮೆರಿಕಾದಲ್ಲಿ ಸಂಚಲನ ಮೂಡಿಸಿದೆ. ಕೊರೋನಾ ವಿರುದ್ಧ ಹೋರಾಡಿ, ಕೊನೆಯುಸಿರೆಳೆದ ಮೆಕ್ಸಿಕೋ ದೇಶದ ಶಿಕ್ಷಕಿಯೊಬ್ಬರ ಮನಮಿಡಿಯುವ ಕಥೆ ಇದು. ಕೊನೆಯುಸಿರೆಳೆಯುವ ಸಂದರ್ಭದಲ್ಲೂ ವೃತ್ತಿಧರ್ಮ ಮೆರೆದ ಫಿಲೋಮಿನಾ ಬೆಲೋನ್‌ ಎಂಬ ಶಿಕ್ಷಕಿ ಮತ್ತು ಮಕ್ಕಳ ಮೇಲಿನ ಆಕೆಯ ಕಾಳಜಿಯು ಎಲ್ಲರ ಹೃದಯ ಗೆದ್ದಿದೆ. ಇವೆಲ್ಲದರ ಬಗ್ಗೆ ಸಂಕ್ಷಿಪ್ತ ವಿವರ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!