ಮೋಸ್ಟ್ ವಾಂಟೆಡ್ ಉಗ್ರರ ನಿಗೂಢ ಅಂತ್ಯ: ಒಂದೊಂದು ದಿನ.. ಒಂದೊಂದು ವಿಕೆಟ್! ಕೊಂದಿದ್ಯಾರು..?

Oct 3, 2023, 2:16 PM IST

ನಾವೀಗ ನೋಡ್ತಾ ಇರೋ ಸ್ಟೋರಿ ಇದ್ಯಲ್ಲಾ, ಇದು ಇಡೀ ಜಗತ್ತಿನ  ಗಮನ ಸೆಳೆದಿರೋ ಸ್ಟೋರಿ.. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 17 ಕೊಲೆಗಳು, ಹತ್ಯೆಗಳು ಜಗತ್ತಿನಾದ್ಯಂತ ಒಂದು ಸಂಚಲನ ಸೃಷ್ಟಿಸಿದ್ದಾವೆ. ಈ 17 ಹತ್ಯೆಗಳ ಹಿಂದೆಯೂ ನಿಗೂಢ ಅಡಗಿದೆ. ರಹಸ್ಯವೇ ತುಂಬಿಕೊಂಡಿದೆ. ಅಷ್ಟೇ ಅಲ್ಲ, 17ಕ್ಕೆ 17 ಕೊಲೆಗಳ ಹಿಂದೆಯೂ ಒಂದು ಕಾಮನ್ ಎಲೆಮೆಂಟ್ ಇದೆ. ಕರಾಚಿ ಅನ್ನೋದು ಪಾಕಿಸ್ತಾನದ(pakisthan) ದೊಡ್ಡ ನಗರ ಮಾತ್ರವೇ ಅಲ್ಲ, ಆ ಭೀಕಾರಿ ದೇಶಕ್ಕೆ ಆರ್ಥಿಕ ರಾಜಧಾನಿ. ಅಷ್ಟೇ ಅಲ್ಲ, ಪಾಕ್‌ನಲ್ಲಿ ಉಗ್ರರು(Terrorists) ಭದ್ರವಾಗಿ ನೆಲೆಯೂರಿರೋದು ಕೂಡ ಇದೇ ಊರಲ್ಲಿ. ದಿನಕ್ಕೊಂದು ಉಗ್ರ ಸಂಘಟನೆಗಳನ್ನ ಹುಟ್ಟಿಹಾಕೋ ಅತಿ ಭಯಾನಕ ಉಗ್ರ ಶಕ್ತಿ, ಈ ಊರಿಗಿದೆ. ಪಾಕಿಸ್ತಾನ ಉಗ್ರರ ಸ್ವರ್ಗವಾದ್ರೆ, ಆ ಸ್ವರ್ಗದ ರಾಜಧಾನಿ ಈ ಕರಾಚಿ(Karachi). ಆದ್ರೆ, ಇಂಥಾ ಉಗ್ರಸ್ವರ್ಗ, ಈಗ ನರಕವಾಗ್ತಾ ಇದೆ. ಅದಕ್ಕೆ ಕಾರಣವಾಗಿರೋದು, ಹಂತಕರ ಅಂತಕನ ಉಗ್ರಪ್ರತಾಪ. ಮುಫ್ತಿ ಖೈಸರ್ ಫಾರೂಕ್, ಇವನು ಅಂತಿಂಥಾ ಆಸಾಮಿ ಖಂಡಿತಾ ಅಲ್ಲ.. ಹಿ ಇಸ್ ನಟೋರಿಯಸ್.. ಲಷ್ಕರ್ ಎ ತೊಯ್ಬಾದ ಮಹಾ ಉಗ್ರ.. ಆದ್ರೆ ಯಾರೋ ಬಿಟ್ಟ ಬುಲೆಟ್ ಇಂಥಾ ಉಗ್ರನ ಪ್ರಾಣಾನ ಕ್ಷಣಾರ್ಧದಲ್ಲಿ ತೆಗೆದುಬಿಟ್ಟಿತ್ತು. ಖೈಸರ್ ಫಾರೂಕ್ ಅಕ್ಕಪಕ್ಕ ಇದ್ದೂರು, ಏನಾಗ್ತಿದೆ ಅಂತ ಅರ್ಥ ಆಗೋದ್ರಲ್ಲಿ ಅಲ್ಲಿಂದ ಪೇರಿಕಿತ್ತಿದ್ರು.. ಅವರೆಲ್ಲಾ ಫಾರೂಕ್ನಿಂದ ದೂರ ಹೋಗೋ ಅಷ್ಟ್ರಲ್ಲಿ, ಆ ನರರಾಕ್ಷಸನೇ ನೆಗೆದುಬಿದ್ದಿದ್ದ.. ಇಷ್ಟಾದ್ರೂ ಆ ಬುಲೆಟ್ ಪ್ರಯೋಗ ಮಾಡಿದ್ದು ಯಾರು? ಯಾಕೆ ಮಾಡಿದ್ರು? ಎಲ್ಲಿಂದ ಹೇಗೆ ಈ ದಾಳಿ ಮಾಡಿದ್ರು, ಹೂಹೂ.. ಯಾವ ಪ್ರಶ್ನೆಗೂ ಯಾರ ಹತ್ತಿರವೂ ಉತ್ತರ ಇಲ್ಲ.. ಆದ್ರೆ, ಈ ಸತ್ತ ಪಾಪಿಯ ದಾರುಣ ಇತಿಹಾಸ ಎಲ್ರಿಗೂ ಗೊತ್ತು.

ಇದನ್ನೂ ವೀಕ್ಷಿಸಿ:  ಗಲಭೆ ಪೀಡಿತ ಪ್ರದೇಶಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ: ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144 ವಿಸ್ತರಣೆ