Aug 19, 2021, 3:08 PM IST
ತಪ್ಪು ಮಾಡಿದರಿಗೆ ಚಾಟಿ ಏಟು ನೀಡುವ, ಕೈ- ಕಾಲು ಕತ್ತರಿಸುವ, ಗುಂಡಿಟ್ಟು ಹತ್ಯೆ ಮಾಡುವ ಮತ್ತು ಮಹಿಳೆಯರ ಮೇಲೆ ಹೇಯ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಇಡೀ ವಿಶ್ವದಲ್ಲೇ ಕುಖ್ಯಾತಿ ಹೊಂದಿದ್ದ ತಾಲಿಬಾನಿಗಳು, ಇದೀಗ ನಾವು ಮಹಿಳೆಯರನ್ನು ಹಿಂಸಿಸಲ್ಲ ಎಂದು ಘೋಷಣೆ ಮಾಡಿದ್ದಾರೆ. ತನ್ಮೂಲಕ 90ರ ದಶಕಕ್ಕೆ ಹೋಲಿಸಿದರೆ ನಾವು ಬದಲಾಗಿದ್ದೇವೆ ಎಂಬ ಭರವಸೆಯನ್ನು ವಿಶ್ವ ಸಮುದಾಯಕ್ಕೆ ರವಾನಿಸಿದ್ದಾರೆ.
ಮಹಿಳೆಯರು ಬಲಿಪಶುಗಳಾಗಿದ್ದರು. ಇನ್ನು ಮುಂದೆಯೂ ಅವರು ಬಲಿಪಶುಗಳಾಗಲು ಬಿಡುವುದಿಲ್ಲ. ನಾವು ಅವರ ಉದ್ಯೋಗ, ವಿದ್ಯಾಭ್ಯಾಸಕ್ಕೆ ಅಗತ್ಯ ವಾತಾವರಣ ಕಲ್ಪಿಸುತ್ತೇವೆ ಎಂದು ತಾಲಿಬಾನ್ ಘೋಷಿಸಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ