ಲಂಕೆಯಲ್ಲಿ ಜನತಾ ದಂಗೆ, ಅರಮನೆಯಲ್ಲಿ ಜನರ ಮೋಜಾಟ, ದಿವಾಳಿ ದೇಶಕ್ಕೆ ಮುಂದಿನ ದಿಕ್ಕೇನು?

Jul 11, 2022, 11:53 AM IST

ಇತಿಹಾಸದಲ್ಲೇ ಕಂಡುಕೇಳರಿಯದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ  (Srilanka) ಕಂಡು ಕೇಳರಿಯದ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಆರ್ಥಿಕ ಸಂಕಷ್ಟದಿಂದ ದೇಶವನ್ನು ಮೇಲೆತ್ತಲು ವಿಫಲರಾಗಿದ್ದಾರೆ ಎಂದು ದೇಶದ ಅಧ್ಯಕ್ಷ ಗೊಟಬಾಯ ರಾಜಪಕ್ಸೆ (Gotabaya Rajapaksa) ಹಾಗೂ ಪ್ರಧಾನಿ ರನಿಲ್‌ ವಿಕ್ರಮಸಿಂಘೆ (Ranil Wickremesinghe) ವಿರುದ್ಧ ಜನರು ದಂಗೆ ಎದ್ದಿದ್ದಾರೆ.  ಈಗಿನ ಜನತಾ ಕ್ರಾಂತಿ ಹಾಗೂ ರಾಜಪಕ್ಸೆ ಕುಟುಂಬದ ವಿರುದ್ಧ ಇಡೀ ದೇಶ ದಂಗೆಯೆದ್ದಿರುವುದನ್ನು ನೋಡಿದರೆ ಅವರ ಯುಗಾಂತ್ಯವಾಗಿದೆ ಎಂದು ಶ್ರೀಲಂಕಾದ ರಾಜಕೀಯ ಪಂಡಿತರು ಹೇಳಿದ್ದಾರೆ.

News Hour: ಅಧ್ಯಕ್ಷ ರಾಜಪಕ್ಸ ಪರಾರಿ, ಪ್ರಧಾನಿ ವಿಕ್ರಮ್ ಸಿಂಘೆ ರಾಜೀನಾಮೆ: ಶ್ರೀಲಂಕಾ ಸ್ಥಿತಿ ಅಧ್ವಾನ!

ಜನತಾ ದಂಗೆಯನ್ನು ಹತ್ತಿಕ್ಕುವುದು ಅಷ್ಟು ಸುಲಭದ ಮಾತಲ್ಲ. ರಾಜಪಕ್ಸೆ ಅವರ ಅಧ್ಯಕ್ಷೀಯ ನಿವಾಸ ಹಾಗೂ ಕಚೇರಿಗೆ ನುಗ್ಗಿದ ಜನರು ಈ ಎರಡನ್ನೂ ತಮ್ಮ ‘ವಶಕ್ಕೆ’ ತೆಗೆದುಕೊಂಡಿದ್ದಾರೆ. ಅಧ್ಯಕ್ಷ ಗೊಟಬಯ ರಾಜಪಕ್ಷೆ ಮನೆಗೆ ನುಗ್ಗಿದ ಜನರು, ಮನೆಯ ಹೊರಾಂಗಣದಲ್ಲೇ ಈರುಳ್ಳಿ, ತರಕಾರಿ ಕತ್ತರಿಸಿ ಸಾಮೂಹಿಕವಾಗಿ ಸೌದೆ ಒಲೆಗಳಲ್ಲಿ ಅಡುಗೆ ಮಾಡಿ ಊಟ ಮಾಡಿ ಸಂಭ್ರಮಿಸಿದರು. ರಮನೆಯ ಮೇಲೆ ದಾಳಿ ಮಾಡಿರುವ ನಾಗರಿಕರು, ಅಧ್ಯಕ್ಷರ ನಿವಾಸದಲ್ಲಿ ಸಿಕ್ಕ ಕ್ಯೋಟ್ಯಂತರ ರು. ಹಣವನ್ನು ಎಣಿಸಿದ್ದಾರೆ. ನಂತರ ಈ ಎಲ್ಲಾ ಹಣವನ್ನು ಪೊಲೀಸ್‌ ಸಿಬ್ಬಂದಿಗೆ ನೀಡಿದ್ದಾರೆ. ಶ್ರೀಲಂಕಾದ ಮುಂದಿನ ನಡೆ ಏನು..? ಈ ಜನಾಕ್ರೋಶ ಎಲ್ಲಿಗೆ ಹೋಗಿ ಮುಟ್ಟುತ್ತೆ ನೋಡಬೇಕಿದೆ.