ಕೊರೋನಾ ಮಹಾಮಾರಿಗೆ ರಷ್ಯಾ ಲಸಿಕೆ!

Aug 11, 2020, 5:35 PM IST

ಮಾಸ್ಕೋ(ಆ.11): ಕೊರೋನಾಗೆ ಲಸಿಕೆ ಕಂಡು ಹಿಡಿಯುವ ರೇಸ್‌ನಲ್ಲಿ ರಷ್ಯಾ ಗೆದ್ದೇ ಬಿಟ್ಟಿದೆಯಾ? ಈ ಪೈಪೋಟಿಯಲ್ಲಿ ರಷ್ಯಾ ಗೆಲುವು ಸಾಧಿಸಿದೆ ಎನ್ನಲಾಗಿದೆ.

ಇನ್ನು ಸೋಂಕು ಬಂದ ಮೇಲೆ ಅಲ್ಲ, ಬದಲಾಗಿ ಇದನ್ನು ಪಡೆದವರಿಗೆ ಕೊರೋನಾ ಬಾಧಿಸುವುದಿಲ್ಲ ಎನ್ನಲಾಗಿದೆ. ನಾಳೆಯಿಂದಲೇ ಈ ಲಸಿಕೆಯ ನೋಂದಣಿ ಆರಂಭವಾಗುತ್ತದೆ ಎನ್ನಲಾಗಿದೆ. 

ಗಮಾಲೆಯಾ ಸಂಶೋಧನಾ ಸಂಸ್ಥೆ ಈ ಲಸಿಕೆ ಕಂಡು ಹಿಡಿದಿದ್ದು, ಎರಡು ಹಂತದ ಕ್ಲಿನಿಕಲ್ ಟ್ರಯಲ್ ನಡೆದು ಯಶಸ್ಸು ಕಂಡಿದೆ ಎನ್ನಲಾಗಿದೆ.