Dec 9, 2024, 1:45 PM IST
ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸಾದ್ ಯುಗಾಂತ್ಯವಾಗಿದೆ. ಬಂಡುಕೋರರು ದಾಳಿಯಾಗುತ್ತಿದ್ದಂತೆ ಬಷರ್ ಅಲ್ ಅಸಾದ್ ದೇಶ ತೊರೆದು ಪಲಾಯನ ಮಾಡಿದ್ದಾರೆ. ಇತ್ತ ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಸಿರಿಯಾವನ್ನು ಕೈವಶ ಪಡೆದಿದೆ. ಸಿರಿಯಾದಲ್ಲಿನ ಬಷರ್ ಸರ್ಕಾರ ಪಲಾಯನ ಮಾಡಲು ಮುಖ್ಯ ಕಾರಣ ರಷ್ಯಾ ಹಾಗೂ ಉಕ್ರೇನ್ ಯುದ್ಧ. ಉಕ್ರೇನ್ ಮೇಲಿನ ಯುದ್ಧದಿಂದ ರಷ್ಯಾ ಸಿರಿಯಾ ಮೇಲಿನ ಪ್ರಾಬಲ್ಯ ಕಳೆದುಕೊಂಡಿತ್ತು. ಇತ್ತ ಬಂಡುಕೋರರು ಇದೇ ಅವಕಾಶವನ್ನು ಬಳಸಿಕೊಂಡಿದ್ದಾರೆ.