May 14, 2020, 9:05 PM IST
ನವದೆಹಲಿ(ಮೇ.14): ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ಮಲ್ಯಗಿದ್ದ ಕಟ್ಟ ಕಡೆಯ ಕಾನೂನು ಅವಕಾಶದಲ್ಲೂ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಮಲ್ಯರನ್ನು ಲಂಡನ್ ಕೋರ್ಟ್, ಭಾರತಕ್ಕೆ ಹಸ್ತಾಂತರ ಮಾಡಲಿದೆ.