Jan 13, 2021, 11:30 AM IST
ವಾಷಿಂಗ್‌ಟನ್ (ಜ. 13): ತಮಗೆ ವಿಧಿಸುತ್ತಿರುವ ವಾಗ್ದಂಡನೆ ಪ್ರಕ್ರಿಯೆ ಬಗ್ಗೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ, ಪ್ರತಿಭಟನಾನಿರತರಿಗೆ ಸರಿ ಎನಿಸಿದ್ದನ್ನು ಮಾಡಿ ಎಂದಿದ್ದೆ, ಸಂಸತ್ ಮೇಲೆ ದಾಳಿ ನಡೆದಿದ್ದಕ್ಕೆ ತಾವು ಹೊಣೆಯಲ್ಲ ಎಂದಿದ್ದಾರೆ ಟ್ರಂಪ್. ನಾಳೆ ವಾಗ್ದಂಡನೆ ಪ್ರಕ್ರಿಯೆಗೆ ಸೆನೇಟ್ ಮಂದಾಗಿದೆ.
ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಾತ್ಕಾಲಿಕ ತಡೆ, ಏನಾಗಬಹುದು ಕೇಂದ್ರದ ಮುಂದಿನ ನಡೆ?
ಗರ್ಭಪಾತಕ್ಕಿದ್ದ ನಿಷೇಧವನ್ನು ಅಮೆರಿಕ ಸುಪ್ರೀಂ ಕೋರ್ಟ್ ಹಿಂಪಡೆದಿದೆ. ಮಾತ್ರೆ ಪಡೆದು ಒಲ್ಲದ ಗರ್ಭ ತೆಗೆಸಿಕೊಳ್ಳಲು ಅವಕಾಶ ನೀಡಿದೆ. ಹಲವು ಲೇಯರ್ ಇರುವ ಮಾಸ್ಕ್ ಕೊರೋನಾ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕೆನಡಾ-ಅಮೆರಿಕ ಗಡಿ ನಿಷೇಧವನ್ನು ಫೆ.21ರವರೆಗೆ ವಿಸ್ತರಿಸಲಾಗಿದೆ. ಇವೆಲ್ಲಾ ಸುದ್ದಿಗಳ ಹೂರಣ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ