Aug 1, 2022, 1:54 PM IST
ಭಾರತದಲ್ಲಿ ಹಸುಗಳಿಗೆ ದೇವರ ಸ್ಥಾನಮಾನವಿದೆ. ಹಸುಗಳನ್ನು ಮನೆಯ ಸದಸ್ಯರಂತೆ ಸಾಕಲಾಗುತ್ತದೆ. ಹಸುಗಳಿಗೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆದರೂ ಮನೆ ಮಂದಿಯೆಲ್ಲಾ ನೊಂದುಕೊಳ್ಳುತ್ತಾರೆ. ಇತ್ತ ಹಸುಗಳು ಅಷ್ಟೇ ತಮ್ಮ ಮನೆ ಮಂದಿಯ ಜೊತೆ ಭಾವುಕವಾದ ಒಡನಾಟವನ್ನು ಹೊಂದಿರುತ್ತವೆ. ಆದರೆ ಈಗ ಇಲ್ಲಿ ತೋರಿಸುತ್ತಿರುವ ದೃಶ್ಯ ವಿದೇಶದಲ್ಲಿ ಸೆರೆಯಾದದ್ದು, ಗಾಯಗೊಂಡು ನಡೆಯಲು ಕಷ್ಟ ಪಡುತ್ತಿದ್ದ ಹಸುವೊಂದನ್ನು ಅದರ ಮಾಲೀಕ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಿಟ್ಜರ್ಲೆಂಡ್‌ನ ಕಣಿವೆ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ರೈತನ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.