Dec 14, 2020, 10:48 AM IST
ತಮ್ಮ ಎರಡು ವರ್ಷದ ಮಗಳೊಂದಿಗೆ ವಿಮಾನದಲ್ಲಿ ಪಯಣಿಸಬೇಕಿದ್ದ ದಂಪತಿಯನ್ನು ಯುನೈಡೆಟ್ ಏರ್‌ಲೈನ್ಸ್ ಹೊರ ಹಾಕಿದೆ. ಏಕೆ ಗೊತ್ತಾ? ಈ ಮಗು ಮಾಸ್ಕ್ ಹಾಕಿ ಕೊಳ್ಳಲು ನಿರಾಕರಿಸಿದ್ದಕ್ಕೆ! ಬೈಡನ್ ವಾಮ ಮಾರ್ಗದಿಂದ ಗೆದ್ದಿದ್ದಾರೆಂದು ಕೋರ್ಟಿನಲ್ಲಿ ಪ್ರೂವ್ ಮಾಡುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ. ಆದರೂ, ಪದತ್ಯಾಗ ಮಾಡುವ ಮನಸ್ಸು ಮಾಡುತ್ತಿಲ್ಲ.
ಸತ್ತು ಹೋಗು ಮೋದಿ; ರೈತ ಪ್ರತಿಭಟನೆಯಲ್ಲಿ ವಿವಾದಾತ್ಮಕ ಘೋಷವಾಕ್ಯ!
ಕೊರೋನಾ ವೈರಸ್ ಓಡಿಸಲು ಶ್ರಮಿಸಿದ ಆರೋಗ್ಯ ಕಾರ್ಯಕರ್ತರು, ವೈದ್ಯರು 2020ರ ನೈಜ ಹೀರೋಗಳು. ಇವರನ್ನು ಬಿಟ್ಟು ಬೈಡನ್-ಹ್ಯಾರೀಸ್ ಅವರನ್ನು ವರ್ಷದ ವ್ಯಕ್ತಿಗಳೆಂದು ಪರಿಗಣಿಸಿದ್ದಕ್ಕೆ ಅಪಸ್ವರವೆದ್ದಿದೆ. ಇನ್ನು ಕೋವಿಡ್ ಲಸಿಕೆ ಪಡೆದಾಗ ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಸಹಜ. ಲಸಿಕೆ ಮನುಷ್ಯನ ದೇಹದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇವೆಲ್ಲದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!