ಸಿಕ್ಕಿಂ ಗಡಿಯಲ್ಲಿ ಭಾರತದ ಮೇಲೆ ಚೀನಾ ಅಟ್ಯಾಕ್; ಅಮೆರಿಕಾ ಲಸಿಕೆಯೇ ಹ್ಯಾಕ್..!

May 13, 2020, 5:56 PM IST

ಬೆಂಗಳೂರು (ಮೇ. 13): ಭಾರತ- ಚೀನಾ ಗಡಿಯಲ್ಲಿ ಕಳೆದ ವಾರ ಉಭಯ ದೇಶಗಳ ಸೈನಿಕರ ನಡುವೆ ಹೊಡೆದಾಟ ಸಂಭವಿಸಿದ ನಂತರ ಚೀನಾ ಆ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ಗಳನ್ನು ಹಾರಿಸಿ ಉದ್ಧಟತನ ತೋರಿರುವ ಸಂಗತಿ ಬೆಳಕಿಗೆ ಬಂದಿದೆ.

ಕೊರೊನಾ ಅವಾಂತರ: ಅಹ್ಮದಾಬಾದ್‌ನಲ್ಲಿ ಏನಾಗುತ್ತಿದೆ?

ಉಭಯ ದೇಶಗಳ ಸುಮಾರು ಸೈನಿಕರ ನಡುವೆ ಲಡಾಖ್‌ನ ಪ್ಯಾಂಗ್ಯಾಂಗ್‌ ಸರೋವರ ಹಾಗೂ ಸಿಕ್ಕಿಂ ಗಡಿ ಪ್ರದೇಶದಲ್ಲಿ ಕಳೆದ ವಾರ ಮುಖಾಮುಖಿ ಘರ್ಷಣೆ ಸಂಭವಿಸಿತ್ತು. ನಂತರ ಲಡಾಖ್‌ನ ಗಡಿಯ ಬಳಿ ಹಲವಾರು ಬಾರಿ ಚೀನಾದ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ.

ಆದರೆ, ಭಾರತದ ಗಡಿಯೊಳಗೆ ಪ್ರವೇಶಿಸಿಲ್ಲ. ಇದಕ್ಕೆ ಪ್ರತಿಯಾಗಿ ಭಾರತ ತನ್ನ ಸುಖೋಯ್‌-30 ಯುದ್ಧ ವಿಮಾನಗಳನ್ನು ಹಾರಾಡಿಸಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.