WEB SPECIAL

ಮಗುವಿಗೆ ಮಗುವಾಗಿ: ತಾಯಿ ನೀ ಇರು ಜೊತೆಯಾಗಿ!

May 11, 2019, 6:43 PM IST

ಎಲ್ಲಾ ತಾಯಂದಿರೂ ಮಕ್ಕಳನ್ನು ಬೆಳೆಸಿದ್ವಿ ಅನ್ನೋದು ದೊಡ್ಡದಲ್ಲ, ಮಗು ಹೇಗೆ ಇರಲಿ ತಾಯಿನೇ ಎಲ್ಲಾ ಅಂತ ಹೇಳ್ತಾರೆ. ತಾಯಿ ತಾಯಿನೇ ಆಗಿರ್ತಾಳೆ. ತನಗೆ ಹುಟ್ಟಿದ ಮಗು ಸರಿಯಾಗಿಲ್ಲಾಂತ ಮಗುವನ್ನು ತಿರಸ್ಕರಿಸುವುದಿಲ್ಲ. ಬದಲಾಗಿ ಆ ಮಗುವನ್ನು ಹೇಗೆ ಮುಖ್ಯವಾಹಿನಿಗೆ ತರಬೇಕು ಅನ್ನೋದರ ಬಗ್ಗೆ ಚಿಂತಿಸುತ್ತಾಳೆ...ತಾಯಿ ಸದಾ ತನ್ನ ಎಲ್ಲಾ ಮಕ್ಕಳನ್ನೂ ಒಂದೇ ಸಮನಾಗಿ ಕಾಣುತ್ತಾಳೆ ಯಾವುದೇ ಭೇದ ಭಾವ ತೋರೋದಿಲ್ಲ. ಹಾಗೆ ಒಂದು ಮಗುವಿನ ಯಶಸ್ಸು ತನಗೆ ಎಷ್ಟರಮಟ್ಟಿಗೆ ಅನಂದನೀಡುತ್ತದೆ ಎಂಬುದನ್ನು ಇವತ್ತಿನ  ಈ ಸ್ಟೋರಿಯಲ್ಲಿ ನೋಡಬಹುದು.

ವಿಧ್ಯಾಭ್ಯಾಸಮಾಡುವುದಕ್ಕೆ ಅನೇಕ ಸೌಲಭ್ಯಗಳಿದ್ದರೂ ಕೆಲವರು ಅದನ್ನು ಉಪಯೋಗಿಸಿಕೊಳ್ಳುವುದಿಲ್ಲ. ಕೆಲವರು ಸಿಗುವ ಚಿಕ್ಕ ಪುಟ್ಟ ಅವಕಾಶಗಳನ್ನ ಬಳಸಿಕೊಂಡೇ ಸಾಧನೆಯ ಮೆಟ್ಟಿಲೇರುತ್ತಾರೆ. ಬುದ್ದಿಮಟ್ಟ ಕಡಿಮೆ ಇದ್ರೆ ವಿದ್ಯೆ ತಲೆಗೆ ಸೇರಲ್ಲ ಎಂದು ಹೇಳ್ತಾರೆ. ಆದ್ರೆ ಚಿತ್ರದುರ್ಗದ ಸುಶ್ರಾವ್ಯ ಎಂಬ ಒಬ್ಬ ವಿದ್ಯಾರ್ಥಿನಿ ತನ್ನ ತಂದೆ-ತಾಯಿಯ ಬೆಂಬಲ ಹಾಗೂ ಸ್ವಂತ ಪರಿಶ್ರಮದಿಂದ ಸಾಧನೆಯ ಶಿಖರವೇರಿದ್ದಾಳೆ...ಹಾಗಾದರೆ ಆಕೆ ಮಾಡಿದ ಸಾಧನೆ ಏನು ಆ ಸಾಧನೆಗೆ ತಾಯಿಯಾಗಿ ತನ್ನ ಪಾತ್ರವೇನು ಎಂಬುದನ್ನು ವಿದ್ಯಾರ್ಥಿನಿಯ ತಾಯಿ ತಮ್ಮ ಮಾತುಗಳಲ್ಲಿ  ಹೇಳ್ತಾರೆ ನೀವೇ ನೋಡಿ.