‘ಕೇಸರಿ ಸಿಗ್ನಲ್’ಗೆ ಕಾಯುತ್ತಿರುವ ಬಂಡಾಯ ಶಾಸಕರು! ಆದ್ರೆ ಅಮಿತ್ ಶಾ ಪ್ಲಾನ್ ಬೇರೆಯೇ!

Jun 17, 2019, 1:28 PM IST

ಬೆಂಗಳೂರು (ಜೂ.17): ರಾಜ್ಯದಲ್ಲಿ ಕುಂಟುತ್ತಾ ಸಾಗಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಕೊನೆದಿನಗಳು ಸನ್ನಿಹಿತವಾಗಿವೆಯಾ?  ಬಿ.ಎಸ್.ಯಡಿಯೂರಪ್ಪರ ಸಿಎಂ ಗಾದಿಯ ಕನಸು ನನಸಾಗುವ ಸಮಯ ಬಂದಿದೆಯಾ? ಇಂತಹ ಲಕ್ಷಣಗಳು ಈಗ ರಾಜ್ಯ ರಾಜಕಾರಣದಲ್ಲಿ ಗೋಚರಿಸುತ್ತಿವೆ.

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ರಾಜ್ಯರಾಜಕಾರಣದಲ್ಲಿ ಅತೃಪ್ತ ಶಾಸಕರ ಚಟುವಟಿಕೆಗಳು ಮತ್ತೆ ಸದ್ದುಮಾಡುತ್ತಿವೆ. ಈಗಾಗಲೇ ಗೋಕಾಕ್‌ನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಇನ್ನುಳಿದ ಅತೃಪ್ತರು, ಸಚಿವ ಸಂಪುಟ ವಿಸ್ತರಣೆವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. 

ಕಳೆದ ವಾರ ಸಚಿವ ಸಂಪುಟ ವಿಸ್ತರಣೆಯೂ ನಡೆದಿದೆ, ಪಕ್ಷೇತರ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಚಿವ ಕುರ್ಚಿಯ ಕನಸು ಕಾಣುತ್ತಿದ್ದವರಿಗೆ ಭ್ರಮನಿರಸನವಾಗಿದೆ. ಹಾಗಾದರೆ ಅತೃಪ್ತರು ಕಾಯುತ್ತಿರುವುದು ಏನಕ್ಕೆ? ಅವರ ಮುಂದಿರುವ ದಾರಿಯೇನು? ಈ ಸ್ಟೋರಿ ನೋಡಿ...